newsics.com
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಸಿ ಪರಿಚಯ ಮಾಡಿಕೊಂಡು, ಲಾಡ್ಜ್‌ಗೆ ಕರೆಸಿ ಹಣ, ಚಿನ್ನ ಮತ್ತು ಕಾರುಗಳನ್ನು ದೋಚುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವಳಾದ ದೀಪಾ ದೀಪಾ ಅವಟಗಿ (33) ಫ್ಯಾಶನ್ ಡಿಸೈನರ್ ಆಗಿದ್ದು, ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹಣದಾಸೆಗೆ ಬಿದ್ದಿದ್ದ ದೀಪಾ, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಅವರ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು. ಈಕೆಯನ್ನು ನಂಬಿ ಅಲ್ಲಿಗೆ ಬಂದ ಗಂಡಸರ ಬಳಿ ಸಲುಗೆಯಿಂದ ವರ್ತಿಸಿ, ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಇದೇ ಸಮಯ ಸಾಧಿಸಿ ವ್ಯಕ್ತಿಗಳ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕಾರುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲಾ ದುಷ್ಕೃತ್ಯಗಳನ್ನೆಸಗಲು ದೀಪಾಗೆ ಸಹಾಯ ಮಾಡುತ್ತಿದ್ದುದು ಆಕೆಯ ಆಪ್ತ ಸ್ನೇಹಿತ ಶಿವಾನಂದ ಮಠಪತಿ. ಶ್ರೀಮಂತ ವ್ಯಕ್ತಿಗಳ ಮಾಹಿತಿಯನ್ನು ಆಕೆಗೆ ನೀಡುತ್ತಿದ್ದವನೇ ಇವನು. ಸಧ್ಯಕ್ಕೆ ಆತನೂ ಪರಾರಿಯಾಗಿದ್ದು, ಅವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ.
https://www.newsics.com/2026/03/10/gold-prices-rise-again-6/