https://youtube.com/shorts/I7q3Ny48oOg?si=RFP8giogzKefv9jC
newsics.com
ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಭಾರಿ ಬಾಂಬ್ ದಾಳಿ ನಡೆಸಿರುವುದರಿಂದ ಇಡೀ ಜಗತ್ತೇ ಬೆಚ್ಚಿಬಿದ್ದಿದೆ.
ಈ ಭೀಕರ ಕದನದ ನೇರ ಎಫೆಕ್ಟ್ ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದಬೆಲೆಯ ಮೇಲೆ ಬಿದ್ದಿದೆ. ಕಳೆದ 24 ಗಂಟೆಗಳಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಜಾಗತಿಕ ಮಾನದಂಡ ಅಂತಾನೇ ಕರೆಸಿಕೊಳ್ಳುವ ‘ಬ್ರೆಂಟ್ ಕಚ್ಚಾ ತೈಲ’ದ ಬೆಲೆ ಬ್ಯಾರೆಲ್ಗೆ ಬರೋಬ್ಬರಿ $93 ಮುಟ್ಟಿದೆ. ಇತ್ತ ಅಮೆರಿಕದ ಮಾನದಂಡವಾಗಿರುವ ‘ಡಬ್ಲ್ಯೂಟಿಐ’ (WTI – ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್) ಕಚ್ಚಾ ತೈಲ ಕೂಡ ಹಿಂದೆ ಬಿದ್ದಿಲ್ಲ, ಅದು ಪ್ರತಿ ಬ್ಯಾರೆಲ್ಗೆ $90.90 ರಂತೆ ವಹಿವಾಟು ನಡೆಸುತ್ತಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ಕೆಲವೊಂದು ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.
ನೋಯ್ಡಾದಲ್ಲಿ ಪೆಟ್ರೋಲ್ 5 ಪೈಸೆ ಇಳಿದು 94.85 ರೂ.ಗೆ, ಡೀಸೆಲ್ 3 ಪೈಸೆ ಇಳಿದು 87.98 ರೂ.ಗೆ ಸೇಲ್ ಆಗ್ತಿದೆ. ಗಾಜಿಯಾಬಾದ್ನಲ್ಲಿ ಪೆಟ್ರೋಲ್ 29 ಪೈಸೆ (94.41 ರೂ.), ಡೀಸೆಲ್ 34 ಪೈಸೆ (87.47 ರೂ.) ಕಮ್ಮಿಯಾಗಿದೆ. ಪಾಟ್ನಾದಲ್ಲೂ ಪೆಟ್ರೋಲ್ 58 ಪೈಸೆ (105.54 ರೂ.) ಮತ್ತು ಡೀಸೆಲ್ 54 ಪೈಸೆ (91.78 ರೂ.) ಅಗ್ಗವಾಗಿ ವಾಹನ ಸವಾರರಿಗೆ ಖುಷಿ ಕೊಟ್ಟಿದೆ.
https://www.newsics.com/2026/03/07/a-pickup-driver-who-became-an-overnight-billionaire/