https://youtube.com/shorts/I7q3Ny48oOg?si=RFP8giogzKefv9jC
newsics.com
ಸತತ 15 ವರ್ಷಗಳ ಕಾಲ ಪ್ರತಿ ತಿಂಗಳು ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಶಾರ್ಜಾದ ಪಿಕಪ್ ಡ್ರೈವರ್ ಒಬ್ಬರ ಅದೃಷ್ಟ ಕೊನೆಗೂ ಖುಲಾಯಿಸಿದೆ. ಬಿಗ್ ಟಿಕೆಟ್‌ನ ಬರೋಬ್ಬರಿ 15 ಮಿಲಿಯನ್ ದಿರ್ಹಮ್ (ಸುಮಾರು 34 ಕೋಟಿ ರೂ.) ಬಂಪರ್ ಜಾಕ್‌ಪಾಟ್ ಹೊಡೆದಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಶಾರ್ಜಾದಲ್ಲಿ ಸಾರಿಗೆ ಕಂಪನಿಯೊಂದರ ವಾಹನ ಚಾಲಕರಾಗಿರುವ ವಿಬೀಶ್ ಪಲ್ಲಿಯಾಲಿ ಈ ಬಂಪರ್ ಬಹುಮಾನ ಗೆದ್ದ ಅದೃಷ್ಟಶಾಲಿ. ಈ ಬಹುಮಾನವನ್ನು ಅವರು ಇತರ ಮೂವರೊಂದಿಗೆ ಹಂಚಿಕೊಳ್ಳಲಿದ್ದು, ವಿಬೀಶ್ ಪಾಲಿಗೆ 4 ಮಿಲಿಯನ್ ದಿರ್ಹಮ್ (ಸುಮಾರು 10 ಕೋಟಿ ರೂ.) ಸಿಗಲಿದೆ. ಕೋಟಿ ಕೋಟಿ ಹಣದೊಂದಿಗೆ ಭಾರತಕ್ಕೆ ಮರಳಿ ನೆಲೆಸುವ ಪ್ಲಾನ್ ಅವರದ್ದಾಗಿದೆ.
ಫೆಬ್ರವರಿ 7 ರಂದು ಭಾರತಕ್ಕೆ ಪ್ರಯಾಣಿಸ್ತಿದ್ದಾಗ 1,000 ದಿರ್ಹಮ್ ಮೌಲ್ಯದ ಒಂದು ಸೆಟ್ ಟಿಕೆಟ್ಸ್ ಖರೀದಿಸಿದ್ದೆ. ಫೆಬ್ರವರಿ 28 ರಂದು, ನನ್ನ ಸೋದರಸಂಬಂಧಿ ಹಾಗೂ ಆತನ ಇಬ್ಬರು ಸ್ನೇಹಿತರು ಕರೆ ಮಾಡಿ, ತಮ್ಮೊಂದಿಗೆ ಸೇರಿ ಮತ್ತೊಂದು ಟಿಕೆಟ್ ಖರೀದಿಸುವಂತೆ ಒತ್ತಾಯಿಸಿದರು. ಆ ತಿಂಗಳ ನನ್ನ ಬಜೆಟ್ ಮುಗಿದಿದೆ ಎಂದು ಹೇಳಿದರೂ ಕೇಳಲಿಲ್ಲ. ಕೊನೆಗೆ ಅವರ ಮನಸ್ಸು ನೋಯಿಸಬಾರದು ಎಂದು ರಾತ್ರಿ 8 ಗಂಟೆಗೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದೆ. ಅನಿವಾರ್ಯವಾಗಿ ಖರೀದಿಸಿದ ಅದೇ ಟಿಕೆಟ್ ಈಗ ನನ್ನ ಅದೃಷ್ಟ ಬದಲಾಯಿಸಿದೆ ಎಂದು ಖಲೀಜ್ ಟೈಮ್ಸ್‌ಗೆ ವಿಬೀಶ್ ತಿಳಿಸಿದ್ದಾರೆ.
https://www.newsics.com/2026/03/07/be-careful-before-posting-photos-on-social-media/