https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಲೈಂಗಿಕ ಕ್ರಿಯೆ ನಡೆಸುವಾಗ ಸಂಗಾತಿಗೆ ಲೈಂಗಿಕ ರೋಗ ಇದೆ ಎಂದು ಪತ್ತೆಯಾದ ಕೂಡಲೇ ಈ ಕಾಂಡೋಮ್ ಬಣ್ಣ ಬದಲಿಸುತ್ತದೆ. ಹೌದು ಲೈಂಗಿಕ ಸಂಪರ್ಕದಿಂದ ಹರಡುವ ರೋಗಾಣು ಪತ್ತೆಯಾದ ಕೂಡಲೇ ಬಣ್ಣ ಬದಲಿಸುವಂತಹ ಕಾಂಡೋಮ್‌ನ್ನು ಬ್ರಿಟನ್‌ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಈ ಬಣ್ಣ ಬದಲಿಸುವ ಕಾಂಡೋಮ್‌ನ್ನು ಲಂಡನ್ ನ್ಯೂಟನ್ ಅಕಾಡೆಮಿ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಚಿರಾಗ್ ಶಾ, ಧಾನ್ಯಾಲ್ ಆಲಿ ಹಾಗೂ ಮುವಾಜ್ ನವಾಜ್ ಎಂಬ ಮೂವರು 14ರ ಹರೆಯದ ವಿದ್ಯಾರ್ಥಿಗಳು ಅಭಿವೃದ್ಧಿಪಿಡಿಸಿದ್ದಾರೆ. ಈ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಕೆಲ ಪ್ರಶಸ್ತಿ ಗೌರವ ನೀಡಲಾಗಿದೆ.
ಕಾಂಡೋಮ್‌ನ ಮೇಲ್ಬಾಗದಲ್ಲಿ ವಿಶೇಷ ಪದರ ಒಂದನ್ನು ನಿರ್ಮಾಣ ಮಾಡಲಾಗಿದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಸ್ ಸಂಪರ್ಕಕ್ಕೆ ಬಂದಾಗ ಕಾಂಡೋಮ್ ಬಣ್ಣವನ್ನು ಬದಲಿಸಲಿದೆ. ಈ ಮೂಲಕ ಕಾಂಡೋಮ್ ಎಚ್ಚರಿಕೆ ಸಂದೇಶ ರವಾನಿಸಲಿದೆ. ಇಷ್ಟೇ ಅಲ್ಲ ಯಾವ ವೈರಸ್ ಸಮಸ್ಯೆಗೆ ಯಾವ ಬಣ್ಣ ಅನ್ನೋದನ್ನು ಈ ಕಾಂಡೋಮ್ ಪ್ಯಾಕೆಟ್‌ನಲ್ಲೇ ನೀಡಲಾಗಿದೆ.
ಯಾವ ರೋಗಕ್ಕೆ ಯಾವ ಬಣ್ಣ
ಈ ಬಣ್ಣ ಬದಲಿಸುವ ಕಾಂಡೋಮ್ ಹಲವು ರೀತಿಯಲ್ಲಿ ಬಳಕೆದಾರನಿಗೆ ಸೂಚನೆ ನೀಡುತ್ತದೆ. ಈ ಲೈಂಗಿಕ ಕ್ರಿಯೆ ಉತ್ತಮವೇ, ಸುರಕ್ಷಿತವೇ ಅನ್ನೋ ಸೂಚನೆಯನ್ನು ಇದು ನೀಡಲಿದೆ.
ಹಸಿರು ಬಣ್ಣಕ್ಕೆ ತಿರುಗಿದರೆ: ಕ್ಲಮೈಡಿಯ ಸಮಸ್ಯೆ
ಹಳದಿ ಬಣ್ಣಕ್ಕೆ ತಿರುಗಿದರೆ: ಹರ್ಪೀಸ್ ಸಮಸ್ಯೆ
ನೀಲಿ ಬಣ್ಣಕ್ಕೆ ತಿರುಗಿದರೆ: ಸಿಫಿಲಿಸ್ ಸಮಸ್ಯೆ
ನೇರಳೆ ಬಣ್ಣಕ್ಕೆ ತಿರುಗಿದರೆ: ಹೂಮನ್ ಪ್ಯಾಪಿಲೋಮವೈರಸ್ ಸಮಸ್ಯೆ
ಈ ಕಾಂಡೋಮ್ ಪ್ರಮುಖ ಉದ್ದೇಶ, ಲೈಂಗಿಕ ಸಂಪರ್ಕ ಬೆಳೆಸುವಾಗ ಕಾಂಡೋಮ್ ಸುರಕ್ಷತೆ ಮಾತ್ರವಲ್ಲ, ಸುರಕ್ಷಿತ ಅಂದರೆ ಲೈಂಗಿಕ ರೋಗ ರಹಿತ ವ್ಯಕ್ತಿಗಳ ಜೊತೆ ಮಾಡಿ ಅನ್ನೋ ಉದ್ದೇಶದಿಂದ ಈ ಬಣ್ಣ ಬದಲಿಸುವ ಕಾಂಡೋಮ್ ಅಭಿವೃದ್ಧಿಪಡಿಸಲಾಗಿದೆ. ತಕ್ಷಣಕ್ಕೆ ಲೈಂಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಂಡೋಮ್ ಮಾಹಿತಿ ನೀಡಲಿದೆ.