https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಕೀಚಕನೊಬ್ಬನ ಕೆಫೆಯ ಶೌಚಾಲಯದಲ್ಲಿ ಯುವತಿಯೊಬ್ಬಳು ಇರುವಾಗ ಆಕೆಯ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಯತ್ನಿಸಿದ ಘಟನೆ ಮಲ್ಲೇಶ್ವರಂನ ಪ್ರತಿಷ್ಠಿತ ಬೆಂಗಳೂರು ಕೆಫೆಯಲ್ಲಿ ನಡೆದಿದೆ.
ಕೆಫೆಗೆ ಬಂದಿದ್ದ ಯುವತಿಯೊಬ್ಬಳು ಅಲ್ಲಿನ ಲೇಡೀಸ್ ಟಾಯ್ಲೆಟ್‌ಗೆ ತೆರಳಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಕಾಮುಕ, ಪಕ್ಕದಲ್ಲೇ ಇದ್ದ ಜೆಂಟ್ಸ್ ಟಾಯ್ಲೆಟ್ ಒಳಗೆ ನುಗ್ಗಿದ್ದಾನೆ. ಎರಡು ಶೌಚಾಲಯಗಳ ನಡುವಿನ ಗೋಡೆಯ ಮೇಲ್ಭಾಗದ ಖಾಲಿ ಜಾಗದಿಂದ ತನ್ನ ಮೊಬೈಲ್ ಫೋನ್ ಅನ್ನು ಮೇಲಕ್ಕೆ ಎತ್ತಿ ಹಿಡಿದು, ಯುವತಿಯ ವಿಡಿಯೋ ಮಾಡಲು ಸಂಚು ರೂಪಿಸಿದ್ದಾನೆ.
ವಿಡಿಯೋ ಚಿತ್ರೀಕರಣ ಮಾಡಲು ಮೊಬೈಲ್ ಕ್ಯಾಮೆರಾವನ್ನು ಹಿಡಿದಿದ್ದನ್ನು ಗಮನಿಸಿದ ಯುವತಿ ತಕ್ಷಣವೇ ಕಿರುಚಾಡಿದ್ದಾರೆ. ಬಳಿಕ ಯುವತಿ ಶೌಚಾಲಯದಿಂದ ಹೊರಗೆ ಓಡಿ ಬಂದು ಕೆಫೆಯಲ್ಲಿದ್ದವರ ಗಮನ ಸೆಳೆದಿದ್ದಾರೆ. ಯುವತಿಯ ಕಿರುಚಾಟ ಕೇಳುತ್ತಿದ್ದಂತೆಯೇ ಸಿಕ್ಕಿಬೀಳುವ ಭಯದಿಂದ ಕಾಮುಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.