Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಉದಯಪುರದಲ್ಲಿಂದು ರಶ್ಮಿಕಾ- ವಿಜಯ್ ವಿವಾಹ, ದೇಶದ ನೂರು ಗಣ್ಯರಿಗೆ ಮಾತ್ರ ಆಹ್ವಾನ
ದೇಶಪ್ರಮುಖಮನರಂಜನೆ

ಉದಯಪುರದಲ್ಲಿಂದು ರಶ್ಮಿಕಾ- ವಿಜಯ್ ವಿವಾಹ, ದೇಶದ ನೂರು ಗಣ್ಯರಿಗೆ ಮಾತ್ರ ಆಹ್ವಾನ

Share
2 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಕ್ಯೂಟ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇನ್ನೇನು ಕೆಲವೇ ಗಂಟೆಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಈ ಜೋಡಿಯ ಅದ್ದೂರಿ ಮದುವೆಗೆ ಈಗಾಗಲೇ ಎಲ್ಲಾ ತಯಾರಿಗಳು ನಡೆಯುತ್ತಿದೆ.

ಜೋಡಿಯು ತಮ್ಮ ವಿವಾಹ ಸ್ಥಳದಲ್ಲಿ ಮೂರು ಹಂತದ ಭದ್ರತೆಯನ್ನು ನಿಯೋಜಿಸಿರುವುದರಿಂದ ಅವರ ಗೌಪ್ಯತೆಯು ಸ್ಪಷ್ಟವಾಗಿದೆ. ಸ್ಥಳೀಯ ಪೊಲೀಸರು ಮತ್ತು ಹೈದರಾಬಾದ್‌ನ ವಿಶೇಷ ತಂಡದೊಂದಿಗೆ, ಅಂತರರಾಷ್ಟ್ರೀಯ ಭದ್ರತಾ ಸಂಸ್ಥೆಗೂ ಈ ಜವಾಬ್ದಾರಿಯನ್ನು ವಹಿಸಲಾಗಿದೆ.

ಕರ್ನಾಟಕದ ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಲಿದ್ದು, ಬುಧವಾರವಷ್ಟೇ ಜೋಡಿ ತಮ್ಮ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಆಚರಿಸಿದರು. ವಿಜಯ್‌ ಆಂಧ್ರಪ್ರದೇಶದವರು. ರಶ್ಮಿಕಾ ಕರ್ನಾಟಕದ ಕೊಡಗಿನ ಮೂಲದವರು. ಹೀಗಾಗಿ ಮೂಲಗಳ ಪ್ರಕಾರ ಇಬ್ಬರೂ ವಿವಾಹ ಕಾರ್ಯಕ್ರಮಗಳನ್ನು ತಮ್ಮ ತವರಿನ ಸಂಪ್ರದಾಯದಂತೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ,

ರಶ್ಮಿಕಾ ಮಂದಣ್ಣ ಅವರು ಮೂಲತಃ ಕೊಡಗಿನವರು. ವಿಜಯ್ ದೇವರಕೊಂಡ ತೆಲುಗು ನಾಡಿನವರು. ಈ ಇಬ್ಬರ ಮದುವೆಯಲ್ಲಿ ಎರಡು ವಿಭಿನ್ನ ಸಂಸ್ಕೃತಿಗಳು ಒಂದಾಗುತ್ತಿವೆ. ಒಂದು ಕಡೆ ಕೊಡವ ಶೈಲಿಯ ಮದುವೆ ನಡೆಯಲಿದೆ. ಇನ್ನೊಂದು ಕಡೆ ತೆಲುಗು ಸಂಪ್ರದಾಯದ ವಿಧಿವಿಧಾನಗಳು ಜರುಗಲಿವೆ. ಕೊಡವ ಸಂಪ್ರದಾಯದಂತೆ ರಶ್ಮಿಕಾ ಕೊಡವ ಶೈಲಿಯ ಸೀರೆಯಲ್ಲಿ ಮಿಂಚಲಿದ್ದಾರೆ. ವಿಜಯ್ ದೇವರಕೊಂಡ ಕೂಡ ತೆಲುಗು ವರನಾಗಿ ಕಂಗೊಳಿಸಲಿದ್ದಾರೆ.

ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಿವಾಹದ ಸಮಯದಲ್ಲಿ ಕಟ್ಟುನಿಟ್ಟಾಗಿ ಫೋನ್ ಬಳಕೆ ನಿಷೇಧಿಸಲಾಗಿದೆ. ಮದುವೆಗೆ ಕೇವಲ 100 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಇನ್ನುಳಿದ ಸ್ನೇಹಿತರಿಗಾಗಿ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.

ರಶ್ಮಿಕಾ ಮತ್ತು ವಿಜಯ್‌ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ‘ರಶ್ಮಿಕಾ ಮತ್ತು ವಿಜಯ್‌ ಹಾಗೂ ಅವರ ಕುಟುಂಬಸ್ಥರಿಗೆ ಅಭಿನಂದನೆಗಳು. ಇದು ಇಬ್ಬರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಒಟ್ಟಿಗೆ ಸಪ್ತಪದಿ ತುಳಿದು ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ. ಮುಂದಿನ ದಿನಗಳು ಕನಸುಗಳು ಮತ್ತು ಅವುಗಳ ಈಡೇರಿಕೆಯಿಂದ ತಂಬಿರಲಿ. ಇಬ್ಬರಿಗೂ ಶುಭಾಶಯಗಳು’ ಎಂದಿದ್ದಾರೆ.

https://www.newsics.com/2026/02/26/hpv-vaccination-campaign-for-all-14-year-old-girls-from-the-center/

TAGGED:only a hundred dignitaries from the country invitedRashmika-Vijay's wedding in Udaipur today
Share This Article
Facebook Twitter Copy Link Print
Previous Article ಕೇಂದ್ರದಿಂದ 14 ವರ್ಷದ ಎಲ್ಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ – ಯಾಕೆ ಈ ನಿರ್ಧಾರ? 14ನೇ ವಯಸ್ಸಿಗೇ ಏಕೆ? ಇಲ್ಲಿದೆ ವಿವರ
Next Article SSLC ಪಾಸ್ ಮಾಡಿಸುತ್ತೇನೆಂದು ನಂಬಿಸಿ ವಂಚಿಸಿದ ಶಿಕ್ಷಕ: ಆತ್ಮ*ಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

Popular Posts

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

You Might Also Like

ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?