https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಕೇಂದ್ರ ಸರ್ಕಾರವು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ದೇಶಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ HPV ಲಸಿಕೆ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ಧತೆ ನಡೆಸಿದೆ.
HPV ಲಸಿಕೆ ಗರ್ಭಕಂಠದ ಕ್ಯಾನ್ಸರ್, ಜನನಾಂಗದ ನರಹುಲಿಗಳು ಮತ್ತು HPV ಯಿಂದ ಉಂಟಾಗುವ ಇತರ ಕ್ಯಾನ್ಸರ್‌ಗಳನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ. ಇದು 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ
ಭಾರತ ಸರ್ಕಾರವು ‘ಸ್ವಸ್ಥ ನಾರಿ’ ಮಿಷನ್ ಅಡಿಯಲ್ಲಿ ದೇಶಾದ್ಯಂತ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಲಸಿಕೆ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದರ ಮುಖ್ಯ ಉದ್ದೇಶ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವುದು. ಕಾರಣ ಭಾರತದಲ್ಲಿ ವಿಶ್ವದ ಮೂರನೇ ಒಂದು ಭಾಗದಷ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದೆ.
ಈ ಹಿನ್ನೆಲೆ 14 ವರ್ಷದ ಮೇಲ್ಪಟ್ಟ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಲಸಿಕೆ ನೀಡುವುದಾಗಿ ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಈ ವಯಸ್ಸಿನ ಹೆಣ್ಣು ಮಕ್ಕಳು ವೈರಸ್ಗೆ ಒಳಗಾಗುವುದಕ್ಕೂ ಮುನ್ನವೇ ತಡೆಗಟ್ಟುವ ಸಲುವಾಗಿ ಈ ಲಸಿಕೆಯನ್ನು ಉಚಿತವಾಗಿ ನೀಡಲು ಸರ್ಕಾರ ಯೋಜಿಸಿದೆ. ಕೇವಲ 14 ವರ್ಷದ ಹೆಣ್ಣು ಮಕ್ಕಳಿಗಷ್ಟೇ ಅಲ್ಲದೇ, ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೆಣ್ಣು ಮಕ್ಕಳಿಗೂ ಲಸಿಕೆ ನೀಡುವುದಾಗಿ ಘೋಷಿಸಿದೆ.
ಮೂಲಗಳ ಪ್ರಕಾರ ಈ ಅಭಿಯಾನವು ಕ್ವಾಡ್ರಿವೇಲೆಂಟ್ ಎಚ್‌ಪಿವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ಮಾದರಿ 16 ಮತ್ತು 18 ರ ವಿರುದ್ಧ ಮಾತ್ರವಲ್ಲದೆ, ಎಚ್‌ಪಿವಿ ಮಾದರಿ 6 ಮತ್ತು 11 ರ ವಿರುದ್ಧವೂ ರಕ್ಷಣೆ ನೀಡುತ್ತದೆ.
ಶಿಫಾರಸ್ಸು ಮಾಡಲಾದ ಹೆಣ್ಣು ಮಕ್ಕಳಿಗೆ ಈ ಸಿಂಗಲ್ ಡೋಸ್ ಲಸಿಕೆಯು ಬಲವಾದ ಮತ್ತು ದೀರ್ಘಕಾಲದ ರಕ್ಷಣೆ ನೀಡುತ್ತದೆ ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಪುರಾವೆಗಳು ದೃಢಪಡಿಸುತ್ತವೆ.