Subscribe ನ್ಯೂಸಿಕ್ಸ್ ಕನ್ನಡ
newsics.com
ಚಲಿಸುತ್ತಿರುವ ಬೈಕ್‌ನಲ್ಲೇ ಈ ಮಹಾನುಭಾವ ಶೇವಿಂಗ್ ಮಾಡಿಕೊಳ್ಳುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಏನಿದು ಘಟನೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಹೈವೇ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ. ವಿಶೇಷವೆಂದರೆ, ಆತ ಬೈಕ್ ಹ್ಯಾಂಡಲ್ ಹಿಡಿಯುವ ಬದಲು ತನ್ನ ಎರಡೂ ಕೈಗಳನ್ನು ಮುಖದ ಹತ್ತಿರ ಹಿಡಿದುಕೊಂಡಿದ್ದಾನೆ. ಮುಖಕ್ಕೆ ಶೇವಿಂಗ್ ಫೋಮ್ ಹಚ್ಚಿಕೊಂಡಿರುವ ಈತ, ಕೈಯಲ್ಲಿ ರೇಜರ್ ಹಿಡಿದು ಅತ್ಯಂತ ನೈಪುಣ್ಯತೆಯಿಂದ ಶೇವಿಂಗ್ ಮಾಡಿಕೊಳ್ಳುತ್ತಿದ್ದಾನೆ! ಬೈಕ್ ತನ್ನ ಪಾಡಿಗೆ ತಾನು ಚಲಿಸುತ್ತಿದ್ದರೆ, ಈತ ಮಾತ್ರ ಕನ್ನಡಿ ಇಲ್ಲದೆಯೇ ಸಲೀಸಾಗಿ ಗಡ್ಡ ತೆಗೆಯುವಲ್ಲಿ ಮಗ್ನನಾಗಿದ್ದಾನೆ.
ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. “ಈತನಿಗೆ ಆಫೀಸ್‌ಗೆ ಹೋಗಲು ತಡವಾಗಿರಬೇಕು, ಅದಕ್ಕೆ ಮನೆಯಲ್ಲಿ ಮಾಡಬೇಕಾದ ಕೆಲಸವನ್ನು ರಸ್ತೆಯಲ್ಲೇ ಮಾಡುತ್ತಿದ್ದಾನೆ” ಎಂದು ಒಬ್ಬರು ಕಮೆಂಟ್ ಮಾಡಿದರೆ.
https://www.instagram.com/reel/DTQdRm1gXdu/?igsh=MWQ4bGNiMmRhNzdobA==