https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ನಾವು ಮನೆಯಲ್ಲಿ ಸಾಕುವ ನಾಯಿಗಳನ್ನು ಕುಟುಂಬದ ಸದಸ್ಯರಂತೆಯೇ ಪ್ರೀತಿಸುತ್ತೇವೆ. ಅವುಗಳು ಪ್ರೀತಿಯಿಂದ ನಮ್ಮನ್ನು ನೆಕ್ಕಿದಾಗ ನಮಗೂ ಸಂಭ್ರಮವೆನಿಸುತ್ತದೆ. ಆದರೆ, ಪ್ರೀತಿಯಿಂದ ನೆಕ್ಕುವ ನಾಲಗೆಯೇ ಸಾವಿನ ದೂತನಾಗಬಹುದು ಎಂಬ ಕಹಿ ಸತ್ಯವೊಂದು ಈಗ ಜಗತ್ತನ್ನು ಬೆಚ್ಚಿಬೀಳಿಸಿದೆ.
ಯುಕೆಯ 52 ವರ್ಷದ ಮಂಜೀತ್ ಸಂಘಾ ಅವರಿಗೂ ಇದೇ ರೀತಿಯ ಅಪಾಯ ಉಂಟಾಗಿದೆ. 2025ರ ಜುಲೈನಲ್ಲಿ ಒಂದು ದಿನ ಎಂದಿನಂತೆ ಅವರು ಕೆಲಸಕ್ಕೆ ಹೋಗಿದ್ದರು, ಆರೋಗ್ಯವಾಗಿಯೇ ಹಿಂದಿರುಗಿದ್ದರು.
ಮರುದಿನವೇ ಅವರ ಸ್ಥಿತಿ ತುಂಬಾ ಹದಗೆಟ್ಟಿತ್ತು ಮೂರ್ಛೆ ಕೂಡಾ ಹೋಗಿದ್ದರು. ಅವರ ಕೈಗಳು ಹಾಗೂ ಪಾದಗಳು ಮಂಜುಗಡ್ಡೆಯಂತೆ ತಣ್ಣಗಾಗಿದ್ದವು. ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಮತ್ತು ಉಸಿರಾಟದ ತೊಂದರೆಯೂ ಎದುರಾಗಿತ್ತು.
ಬದಲಾಗಿ ಅವರ ಮೈಮೇಲಿದ್ದ ಒಂದು ಸಣ್ಣ ಗಾಯದ ಮೇಲೆ ನಾಯಿ ಪ್ರೀತಿಯಿಂದ ನೆಕ್ಕಿತ್ತು. ನಾಯಿಗಳ ಲಾಲಾರಸದಲ್ಲಿ ‘ಕ್ಯಾಪ್ನೋಸೈಟೋಫಾಗಾ ಕ್ಯಾನಿಮೋರ್ಸಸ್’ (Capnocytophaga Canimorsus) ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಸಾಮಾನ್ಯವಾಗಿ ಇದು ಅಪಾಯಕಾರಿಯಲ್ಲದಿದ್ದರೂ, ಮನುಷ್ಯನ ರಕ್ತದೊಳಗೆ ಸೇರಿದರೆ ಮಾರಕವಾಗಬಲ್ಲದು. ಮಂಜೀತ್ ಅವರ ಗಾಯದ ಮೂಲಕ ಈ ಬ್ಯಾಕ್ಟೀರಿಯಾ ರಕ್ತ ಸೇರಿ, ದೇಹದ ರೋಗನಿರೋಧಕ ಶಕ್ತಿಯೇ ಅಂಗಾಂಗಗಳ ಮೇಲೆ ದಾಳಿ ಮಾಡುವಂತೆ (ಸೆಪ್ಸಿಸ್) ಪ್ರೇರೇಪಿಸಿತ್ತು.
ಸಾಕುಪ್ರಾಣಿ ಪ್ರಿಯರೇ ಇರಲಿ ಎಚ್ಚರ!
ಈ ಘಟನೆ ಪ್ರಾಣಿಗಳನ್ನು ದ್ವೇಷಿಸಲು ಅಲ್ಲ, ಬದಲಾಗಿ ಮುನ್ನೆಚ್ಚರಿಕೆ ವಹಿಸಲು ನಮಗೆ ಪಾಠವಾಗಿದೆ. ನೀವು ಕೂಡ ಸಾಕುಪ್ರಾಣಿಗಳನ್ನು ಹೊಂದಿದ್ದರೆ ಈ ಕೆಳಗಿನ ಕ್ರಮಗಳನ್ನು ಪಾಲಿಸಿ:
ಗಾಯಗಳನ್ನು ದೂರವಿಡಿ: ನಿಮ್ಮ ಮೈಮೇಲೆ ಸಣ್ಣ ಗಾಯ ಅಥವಾ ಪರಚಿದ ಗುರುತುಗಳಿದ್ದರೆ ಅದನ್ನು ಸಾಕುಪ್ರಾಣಿಗಳು ನೆಕ್ಕದಂತೆ ಜಾಗ್ರತೆ ವಹಿಸಿ.
ತಕ್ಷಣದ ಸ್ವಚ್ಛತೆ: ಒಂದು ವೇಳೆ ನಾಯಿ ನೆಕ್ಕಿದರೆ ಆ ಭಾಗವನ್ನು ಸೋಪು ಮತ್ತು ನೀರಿನಿಂದ ತಕ್ಷಣ ತೊಳೆದುಕೊಳ್ಳಿ.