Subscribe ನ್ಯೂಸಿಕ್ಸ್ ಕನ್ನಡ
newsics.com
ಮಗನ ಸ್ಕೂಲ್ ಬಸ್ ಮಿಸ್ ಆಗ್ತೆಂದು ಬ್ಯಾಗ್ ಹೆಗಲಿಗೇರಿಸಿಕೊಂಡು ತಾಯಿಯೂ ಬಸ್ ಹಿಂದೆ ಓಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಿದೆ.
ಟಿವಿ ಇಶಾ ಟ್ರಾವೆಲ್ ಡೈರಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಯೊಬ್ಬಳು ಮಗನ ಬ್ಯಾಗ್‌ನ್ನು ಹೆಗಲಿಗೇರಿಸಿಕೊಂಡು ಸ್ಕೂಲ್ ಬಸ್ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಮಗನು ತನ್ನ ತಾಯಿಯ ಜತೆಗೆ ಓಡಿ ಹೋಗುತ್ತಿದ್ದು, ಕೊನೆಗೂ ಸ್ಕೂಲ್ ಬಸ್ ನಿಲ್ಲಿಸಿ ಮಗನನ್ನು ಹತ್ತಿಸಿದ್ದಾಳೆ.
ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ತಾಯಿಗೆ ಈ ಜಗದಲ್ಲಿ ಸರಿಸಾಟಿ ಯಾರಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಕ್ಕಳ ಭವಿಷ್ಯಕ್ಕಾಗಿ ತಾಯಿಯ ಹೋರಾಟ, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಮಕ್ಕಳಿಗೆ ತಾಯಿ ಏನನ್ನು ಬೇಕಾದ್ರು ಮಾಡ್ತಾಳೆ ಎಂದು ಹೇಳಿದ್ದಾರೆ.
https://www.instagram.com/reel/DUkU9Xzjd1_/?igsh=ZGcyc2kybXd2MHgy