Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್‌ಗೆ ಬ್ರೇಕ್‌ !
ಕರ್ನಾಟಕಪ್ರಮುಖ

ಇನ್ಮುಂದೆ ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್‌ಗೆ ಬ್ರೇಕ್‌ !

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಕರ್ನಾಟಕದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಇನ್ನು ಮುಂದೆ ಶೂಟಿಂಗ್‌ಗೆ ಬ್ರೇಕ್‌ ಹಾಕಲು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಿದರೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ.

ಕರ್ನಾಟಕ ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಇನ್ನು ಮುಂದೆ ಶುಲ್ಕ ಕಡ್ಡಾಯಗೊಳಿಸಲಾಗಿದೆ. ಭಕ್ತಿಯ ಪಾವಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರೆ ದಂಡ ವಿಧಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಈ ನೀತಿ ಹೊಸತಲ್ಲ. ಆದರೆ, ಕಳೆದ ವರ್ಷದಿಂದ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. 2003ರಲ್ಲಿ ಈ ಕುರಿತು ಇಲಾಖೆ ಒಂದು ಮಾರ್ಗಸೂಚಿ ಹೊರಡಿಸಿತ್ತು. ನಂತರ 2012ರಲ್ಲಿ ಮತ್ತೊಂದು ಮಾರ್ಗಸೂಚಿ ಹೊರಡಿಸಿತ್ತು. ಆದರೆ, ವಿಡಿಯೋ ಮಾಡುವಾಗ ಹಣ ಕಟ್ಟಬೇಕು ಎಂಬ ಮಾಹಿತಿ ಹಲವರಿಗೆ ಇರಲಿಲ್ಲ.

ಅಲ್ಲದೆ ಸಿನಿಮಾ, ಧಾರಾವಾಹಿಗಳಿಗೆ ಸೆಟ್‌ ಹಾಕಿದ ನಂತರ ಅನುಮತಿ ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಹಲವರು ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ರೀಲ್ಸ್‌ ಮಾಡುವುದು, ಯೂಟ್ಯೂಬ್‌ ಚಾನೆಲ್‌ಗಳು ಹಾಗೂ ಇತರೆ ಕೆಲವರು ವಾಣಿಜ್ಯ ಉದ್ದೇಶಗಳಿಗೆ ದೇವಾಲಯದ ಪಾವಿತ್ರ್ಯತೆ ಹಾಳು ಮಾಡುವ ಹಾಗೂ ಅವುಗಳ ಧಾರ್ಮಿಕತೆಗೆ ಧಕ್ಕೆ ತರುವ ರೀತಿ ಬಿಂಬಿಸಲಾಗುತ್ತಿದೆ.

ಹೀಗಾಗಿ, ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಚಿತ್ರೀಕರಣದ ವೇಳೆ ದೇವಾಲಯಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ 2012ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

 

ಬೆಂಗಳೂರು ನಗರದ ದೇವಸ್ಥಾನಗಳಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕೆ 15 ಸಾವಿರ ರೂ. ಹಾಗೂ ಇತರೆ ಪ್ರದೇಶಗಳ ದೇವಸ್ಥಾನಗಳಲ್ಲಿ 10 ಸಾವಿರ ರೂ. ಮತ್ತು ಧಾರಾವಾಹಿ/ ಸಾಕ್ಷ್ಯಚಿತ್ರ/ ವಾಣಿಜ್ಯ ಉದ್ದೇಶಗಳ ಚಿತ್ರೀಕರಣಕ್ಕೆ ದಿನಕ್ಕೆ 5 ಸಾವಿರ ರೂ. ಹಾಗೂ ನ್ಯೂಸ್‌ ಚಾನೆಲ್‌ಗಳಲ್ಲಿ ಕ್ಷೇತ್ರದ ಮಹಿಮೆ ಸಾರುವ, ಐದು ನಿಮಿಷಗಳ ಅವಧಿ ಮೀರದ ಚಿತ್ರೀಕರಣಕ್ಕಾಗಿ 250 ರೂ. ಹಾಗೂ 5 ನಿಮಿಷಗಳ ನಂತರದ ಚಿತ್ರೀಕರಣಕ್ಕೆ ಗಂಟೆಗಳ ಆಧಾರದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ.

ಸಂಬಂಧಿಸಿದವರು ದೇವಾಲಯದ ಹೆಸರಿನಲ್ಲಿ ಬೇಡಿಕೆ ಹುಂಡಿ ಶುಲ್ಕ ಪಾವತಿಸಿ, ಅನುಮತಿ ಪತ್ರವನ್ನು ಮುಜರಾಯಿ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೀಡಬೇಕು. ಇಲಾಖೆಯಿಂದಲೇ ಸಂಬಂಧಿಸಿದ ದೇವಾಲಯಗಳಿಗೆ ಸೂಚನೆ ಹೋಗುತ್ತದೆ. ಆಗ ಆ ದೇವಾಲಯಗಳ ಆಡಳಿತ ಮಂಡಳಿಯವರು ಭಕ್ತರಿಗೆ ತೊಂದರೆಯಾಗದಂತೆ ಶೂಟಿಂಗ್‌ಗೆ ಅವಕಾಶ ನೀಡುತ್ತಾರೆ. ಆದರೆ ಕ್ಷೇತ್ರದ ಮಹಿಮೆಯನ್ನು ಸಾರುವ ಸಾಕ್ಷ್ಯ ಚಿತ್ರವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಬಾರದು. ಇದನ್ನು ಮಾರ್ಗಸೂಚಿಯಲ್ಲೇ ಉಲ್ಲೇಖಿಸಲಾಗಿದೆ.

ಒಟ್ಟು ಮುಜರಾಯಿ ದೇಗುಲಗಳು- 34,563

25 ಲಕ್ಷಕ್ಕೂ ಅಧಿಕ ಆದಾಯದ ಎ ಗ್ರೇಡ್‌ ದೇಗುಲಗಳು-205

5ರಿಂದ 25 ಲಕ್ಷ ರೂ. ಆದಾಯವಿರುವ ಬಿ ಗ್ರೇಡ್‌ ದೇಗುಲಗಳು- 193

5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಸಿ ಗ್ರೇಡ್‌ ದೇಗುಲಗಳು-34,105

ಈ ಎಲ್ಲಾ ದೇವಾಲಯಗಳಿಗೂ ಮಾರ್ಗಸೂಚಿಗಳು ಅನ್ವಯವಾಗುತ್ತವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

https://www.newsics.com/2026/02/20/the-doll-is-this-monkeys-lifeblood-and-he-is-in-great-danger-from-other-monkeys/

TAGGED:From now onthere will be a break in shooting in temples in Karnataka!
Share This Article
Facebook Twitter Copy Link Print
Previous Article ಆ ಸೂಪರ್‌ಸ್ಟಾರ್ ನ ಬೇಡಿಕೆಯನ್ನು ಈಡೇರಿಸದ್ದಕ್ಕೆ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ರು – ಶಕ್ತಿಮಾನ್ ನಟಿ ಆರೋಪ
Next Article ಮಗನ ಕ್ಲಾಸ್ ಮಿಸ್ ಆಗುತ್ತೆಂದು ಬಸ್ ಹಿಂದೆ ಓಡಿದ ತಾಯಿ; ವೈರಲ್ ವಿಡಿಯೋ ನೋಡಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?