Subscribe ನ್ಯೂಸಿಕ್ಸ್ ಕನ್ನಡ
newsics.com
ಸಿನಿಮಾ ಹಾಗೂ ಕಿರುತೆರೆ ಎರಡೂ ಗ್ಲಾಮರಸ್ ಲೋಕ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿಯೇ ಕಾಣಿಸುತ್ತೆ. ಆದರೆ, ಒಳಗೆ ಹೋದಾಗಲೇ ಅಸಲಿ ಸತ್ಯ ಗೊತ್ತಾಗುತ್ತೆ. ಕೆಲವರಿಗೆ ಈ ಗ್ಲಾಮರ್ ಲೋಕ ಚೆನ್ನಾಗಿ ಕೈ ಹಿಡಿಯುತ್ತೆ. ಇನ್ನು ಕೆಲವರಿಗೆ ನರಕ ಅಂತ ಅನಿದ್ದೂ ಇದೆ. ಮತ್ತೆ ಕೆಲವರಿಗೆ ಕಹಿ ಅನುಭವಗಳು ಆಗಿದ್ದೂ ಇದೆ. ವೈಷ್ಣವಿ ಮಹಂತ್ ಅವರಿಗೂ ಇಂತಹದ್ದೇ ಕೆಟ್ಟ ಅನುಭವ ಆಗಿದೆ.
ಚಿತ್ರರಂಗ ಅಂದ್ಮೇಲೆ ಅಲ್ಲಿ ಮಹಿಳೆಯರಿಗೆ ‘ಕಾಸ್ಟಿಂಗ್ ಕೌಚ್’ ಅನುಭವ ಆಗಿರುತ್ತೆ. ಇವರಿಗೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮೀಟೂ ಅಭಿಯಾನ ಶುರುವಾದಾಗ ಇಂತಹದ ಸಾಕಷ್ಟು ವರದಿಯಾಗಿತ್ತು. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ಸಿನಿಮಾ ಮಂದಿಯ ಅಸಲಿ ಮುಖ ಹೊರಬಿದ್ದಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಶಕ್ತಿಮಾನ್’ ನಟಿ ವೈಷ್ಣವಿ ಮಹಂತ್ ಕೂಡ ಇಂತಹದ್ದೇ ಒಂದು ಅನುಭವ ಹಂಚಿಕೊಂಡಿದ್ದಾರೆ.
ಸೂಪರ್‌ಸ್ಟಾರ್ ಒಬ್ಬರು ಬೇಡಿಕೆಯನ್ನು ಈಡೇರಿಸದ ಕಾರಣ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ರು ಎಂದು ಅವರು ಆರೋಪಿಸಿದ್ದಾರೆ. ಜನಪ್ರಿಯ ಧಾರಾವಾಹಿ ‘ಶಕ್ತಿಮಾನ್’ನಲ್ಲಿ ‘ಗೀತಾ ವಿಶ್ವಾಸ್’ ಪಾತ್ರದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ನಟಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಇತ್ತೀಚೆಗೆ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವೈಷ್ಣವಿ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತಾಡಿದ್ದರು.
ಒಂದು ದಿನ ಸಂಜೆ ಹೋಟೆಲ್‌ನಲ್ಲಿ ಪುರುಷರೇ ಇದ್ದರು. ಅಲ್ಲಿಗೆ ಒಬ್ಬಳೇ ಬರಲು ಹೇಳಿದರು. ಜೊತೆಗೆ ಮದ್ಯಪಾನದ ಪ್ರಸ್ತಾಪವೂ ಮಾಡಿದ್ದರು. ನನಗೆ ಅದು ಸರಿ ಎನಿಸಲಿಲ್ಲ. ಈ ಕಾರಣಕ್ಕೆ ನಾನು ಹೋಗಲಿಲ್ಲ. ಅಮ್ಮ ಯಾವಾಗಲೂ ನನ್ನ ಜೊತೆ ಇರೋದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮುಂದಿನ ಶೆಡ್ಯೂಲ್ ಫೈನಲ್ ಮಾಡಿದಾಗ ನನ್ನ ಪಾಸ್‌ಪೋರ್ಟ್ ರೆಡಿಯಾಗಿತ್ತು. ಆದರೆ ತಾಯಿಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರು. ಎಂದು ಹೇಳಿದ್ದಾರೆ. ಇಲ್ಲಿಗೆ ಮ್ಯಾಟರ್ ಮುಗಿದಿರಲಿಲ್ಲ. ಸಿನಿಮಾದ ನಾಯಕನಿಗೆ ನನ್ನ ಮೇಲೆ ಕಣ್ಣಿತ್ತು. ನಾನು ಅವರ ಪ್ರಪೋಸಲ್ ತಿರಸ್ಕರಿಸಿದಾಗ ಆ ಸೂಪರ್‌ಸ್ಟಾರ್ ನನ್ನ ಮೇಲೆ ಸೇಡು ತೀರಿಸಿಕೊಂಡ. ಹೀರೋ, ನಿರ್ಮಾಪಕ ಮತ್ತು ನಿರ್ದೇಶಕ ಒಟ್ಟಾಗಿ ಸೇರಿಕೊಂಡು ಆ ಸಿನಿಮಾದಿಂದ ಹೊರಹಾಕಿದರು ಎಂದು ನಟಿ ವೈಷ್ಣವಿ ಹೇಳಿದ್ದು, ಅವರು ಕೊಟ್ಟ ಹೇಳಿಕೆಗಳು ವೈರಲ್ ಆಗುತ್ತಿವೆ. ಆದರೆ, ವೈಷ್ಣವಿ ಆ ಪ್ರಾಜೆಕ್ಟ್‌ನಿಂದ ಹೊರಹಾಕಿದ ಆ ಹೀರೋ ಯಾರು? ಅನ್ನೋದನ್ನು ರಿವೀಲ್ ಮಾಡಿಲ್ಲ.
https://www.newsics.com/2026/02/20/this-lonely-baby-monkey-has-a-doll-as-his-family/