Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಲಿಂಗಾಯತ ಗಾಣಿಗ ಪ್ರತ್ಯೇಕವಲ್ಲ: ಹೈಕೋರ್ಟ್
ಕರ್ನಾಟಕಪ್ರಮುಖ

ಲಿಂಗಾಯತ ಗಾಣಿಗ ಪ್ರತ್ಯೇಕವಲ್ಲ: ಹೈಕೋರ್ಟ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ‘ಲಿಂಗಾಯತ’ ಮತ್ತು ‘ಗಾಣಿಗ’ ಎಂಬುದು ಕಾನೂನಿನಡಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಒಬ್ಬರು ಗಾಣಿಗ ಲಿಂಗಾಯತ ಜಾತಿ ಮಾನ್ಯತೆಗೆ ಸಂಬಂಧಿಸಿ ಸುಳ್ಳು ಪ್ರಮಾಣಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ಪೊಲೀಸ್ ಕಾನ್ಸ್‌ಟೇಬಲ್ ಜಗದೀಶ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ಹೈ ಕೋರ್ಟ್ ಲಿಂಗಾಯತ ಗಾಣಿಗ ಸಮುದಾಯಕ್ಕೆ 2ಎ ಸಿಂಧುತ್ವ ನೀಡಿರುವುದನ್ನು ಎತ್ತಿ ಹಿಡಿದಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಲಿಂಗಾಯತ ಹಾಗೂ ಗಾಣಿಗ ಪ್ರತ್ಯೇಕವೇನಲ್ಲ. ವೃತ್ತಿ ಹಾಗೂ ಸಾಮಾಜಿಕ ಅಸ್ಮಿತೆಯನ್ನು ಒಳಗೊಂಡಿರುವ ವಿವಿಧ ಜಾತಿಗಳನ್ನು ಒಳಗೊಳ್ಳುವ ಮೂಲಕ ಲಿಂಗಾಯತವು ಹೊರಹೊಮ್ಮಿದ್ದು, ವಿಶಾಲವಾದ ಲಿಂಗಾಯತ ಪಂಥದೊಳಗೆ ಈ ಜಾತಿಗಳಿವೆ. ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಗಾಣಿಗ ಒಂದು ವಿಶಿಷ್ಟ ಜಾತಿ ಗುಂಪಾಗಿ ಅಸ್ತಿತ್ವದಲ್ಲಿರಬಹುದು ಎಂದು ಆದೇಶಿಸಿದೆ.

ಪೂರ್ವಜರ ದಾಖಲೆಗಳಲ್ಲಿ ‘ಲಿಂಗಾಯತ’ ಎಂದು ವಿವರಿಸಲಾದ ವ್ಯಕ್ತಿಯು, ಪುರಾವೆಗಳ ಆಧಾರದ ಮೇಲೆ, ಆ ಗುಂಪಿನೊಳಗೆ ಗಾಣಿಗ ಗುರುತನ್ನು ಸ್ಥಾಪಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ ಪಂಗಡಗಳನ್ನು ಒಳಗೊಳ್ಳುವ ಮೂಲಕ ಲಿಂಗಾಯತ ಸಮುದಾಯ ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿ” ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?

2009ರಲ್ಲಿ ಲಿಂಗಾಯತ ಗಾಣಿಗ ಸಮುದಾಯದ ರಾಜಕುಮಾ‌ರ್ ವೈ. ಬೀಳಗಿ ಎಂಬುವರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಹಿಂದುಳಿದ ವರ್ಗಗಳ 2ಎ ಅಡಿ ಲಿಂಗಾಯತ ಗಾಣಿಗ ಎಂದು ಸುಳ್ಳು ಹೇಳಿ ಮೀಸಲಾತಿಯ ಮೂಲಕ ಇನ್‌ಸ್ಪೆಕ್ಟ‌ರ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಅರ್ಜಿದಾರರಾದ ಪೊಲೀಸ್‌ ಕಾನ್‌ಸ್ಟೆಬಲ್ ಟಿ.ಎನ್. ಜಗದೀಶ್ ದೂರಿದ್ದರು.

ಒಬ್ಬ ವ್ಯಕ್ತಿಯು ಧಾರ್ಮಿಕ ಸಂಬಂಧದಿಂದ ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು. ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2009ರಲ್ಲಿ ಲಿಂಗಾಯತ ಗಾಣಿಗ ಸಮುದಾಯ ರಾಜಕುಮಾರ್ ವೈ. ಬೀಳಗಿ ಎಂಬವರು ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಹಿಂದುಳಿದ ವರ್ಗಗಳ 2ಅ ಅಡಿ ಲಿಂಗಾಯತ ಗಾಣಿಗ ಎಂದು ಸುಳ್ಳು ಹೇಳಿ ಮೀಸಲಾತಿಯ ಮೂಲಕ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಅರ್ಜಿದಾರರಾದ ಪೊಲೀಸ್ ಕಾನ್‌ಸ್ಟೆಬಲ್ ಟಿ ಎನ್ ಜಗದೀಶ್ ದೂರಿದ್ದರು.

ಬೀಳಗಿ ಅವರ ತಂದೆ, ಸಹೋದರರು ಮತ್ತು ಸಂಬಂಧಿಗಳ ಶಾಲಾ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದ್ದು, ಬೀಳಗಿ ತಂದೆಯ ಶಾಲಾ ದಾಖಲೆಗಳಲ್ಲಿ ಲಿಂಗಾಯತ ಎಂದಿದೆ. ಅದು ಲಿಂಗಾಯತ ಗಾಣಿಗ ಗುರುತಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ತಂದೆಯ ಜಾತಿ ಸಂಬಂಧಿತ ದಾಖಲೆಗಳು ಪ್ರಸ್ತುತವಾಗಿದ್ದರೂ ಅದುವೇ ನಿರ್ಣಾಯಕವಲ್ಲ. ಜಾತಿಯನ್ನು ಕಾಲಾಂತರದಲ್ಲಿ ಸಂಚಯಗೊಂಡಿರುವ ಹಾಗೂ ಏಕಪ್ರಕಾರವಾಗಿರುವ ದಾಖಲೆಗಳ ಮೂಲಕ ದೃಢಪಡಿಸಬೇಕಾಗಿದ್ದು, ಶಾಸನಾತ್ಮಕವಾಗಿ ಪರಿಶೀಲನೆಗೊಳಪಟ್ಟಿರಬೇಕಾಗುತ್ತದೆ ಎಂದು ನ್ಯಾಯಾಲಯವು ಇದೇ ವೇಳೆ ಸ್ಪಷ್ಟಪಡಿಸಿದೆ.

ಬೀಳಗಿ ಅವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗದಲ್ಲಿ ಪಿಎಸ್‌ಐ ಆಗಿ ಅವರು ಮಾಡಿದ 15 ವರ್ಷಗಳ ಸೇವೆಯನ್ನು ಪರಿಗಣಿಸಿ, ನ್ಯಾಯಾಲಯವು ಅವರ ನೇಮಕಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ.

ಗಂಡ ಫಾರಿನ್ ಗೆ ಕಳಿಸಿಲ್ಲವೆಂದು, ಆತ್ಮಹತ್ಯೆ ಮಾಡಿಕೊಂಡ ಹೆಂಡತಿ

TAGGED:Lingayat singers are not separate: High Court
Share This Article
Facebook Twitter Copy Link Print
Previous Article ಗಂಡ ಫಾರಿನ್ ಗೆ ಕಳಿಸಿಲ್ಲವೆಂದು, ಆತ್ಮಹತ್ಯೆ ಮಾಡಿಕೊಂಡ ಹೆಂಡತಿ
Next Article ಎಐ ಇಂಫ್ಯಾಕ್ಟ್ ಶೃಂಗಸಭೆಯಲ್ಲಿ  ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು

Popular Posts

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

You Might Also Like

ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read
ಕರ್ನಾಟಕದೇಶಪ್ರಮುಖ

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read
ಕರ್ನಾಟಕಪ್ರಮುಖ

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?