Subscribe ನ್ಯೂಸಿಕ್ಸ್ ಕನ್ನಡ
newsics.com
ಗಿಲಿಗಿಲಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರುವ ಹಾಸ್ಯ ನಟ ಚಿಲ್ಲರ್ ಮಂಜು(ಮಂಜುನಾಥ್) ಅವರು ಸದ್ದಿಲ್ಲದೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಚಿಲ್ಲರ್ ಮಂಜು ಅವರು ಕಾರುಣ್ಯ ಎಂಬ ಹುಡುಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಜು ಅವರು ಈ ಸಮಾರಂಭದ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಏಳುಬೀಳುಗಳನ್ನು ದಾಟಿ ಬಂದಿರುವ ಚಿಲ್ಲರ್ ಮಂಜು ಪಕ್ಕಾ ಗ್ರಾಮೀಣ ಪ್ರತಿಭೆ ಆಗಿದ್ದು, ಕಲರ್ಸ್ ಕನ್ನಡ ವಾಹಿನಿಯಾಲ್ಲಿ ಪ್ರಸಾರ ಆಗುತ್ತಿದ್ದ ಮಜಾ ಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಹಾಸ್ಯದ ಮೂಲಕ ರಂಜಿಸುವ ಮೂಲಕ ವೀಕ್ಷಕರ ಮನಸು ಕದ್ದುಬಿಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು.