https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಭಾರತ ಉದಯೋನ್ಮುಖ ಕ್ರಿಕೆಟರ್ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆ ಬರೆಯುತ್ತಾರೆ ಎಂಬುದೇ ಇತ್ತೀಚಿಗಿನ ಭಾರೀ ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಅವರು ಪರೀಕ್ಷ ಬರೆಯುತ್ತಿಲ್ಲ ಎಂದು ವರದಿಯಾಗಿದೆ.
ವೈಭವ್ ಸೂರ್ಯವಂಶಿ ಅವರ ಎಕ್ಸಾಂ ಫಾರಂ ಭರ್ತಿ ಮಾಡಿದ್ದರು. ಇದರ ಜತೆಗೆ ಆಡ್ಮಿಷನ್ ಕಾರ್ಡ್ ಕೂಡಾ ಅವರಿಗೆ ತಲುಪಿಸಲಾಗಿದೆ. ಅವರು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಎಕ್ಸಾಂ ಬರೆಯಲು ಎಕ್ಸಾಂ ಸೆಂಟರ್ ಕೂಡಾ ನಿಗದಿಯಾಗಿತ್ತು ಎಂದು ಮಾಡೆಸ್ಟಿ ಸ್ಕೂಲ್‌ನ ಡೈರೆಕ್ಟರ್ ಆರ್ದಶ್ ಕುಮಾರ್ ಪಿಂಟೋ ಹೇಳಿದ್ದಾರೆ.
ಆದರೆ ವೈಭವ್ ಕೆಲ ಸಮಯಗಳಿಂದ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅತಿಯಾದ ಕ್ರಿಕೆಟ್ ಶೆಡ್ಯೂಲ್ ನಿಂದಾಗಿ ಬಳಲಿರುವ ವೈಭವ್ ಸೂರ್ಯವಂಶಿ ಇದೀಗ ಸಮರ್ಪಕವಾಗಿ ಪರೀಕ್ಷೆಗೆ ತಯಾರಿ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಎಲ್ ಅತಿ ವೇಗದ ಶತಕ ಹೊಡೆದು ಯೂಸುಫ್ ಪಠಾಣ್ ಹೆಸರಲ್ಲಿದ್ದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಾಗ ತಂಡದ ಕೋಚ್ ಆಗಿದ್ದ ಗಾಯಾಳು ರಾಹುಲ್ ದ್ರಾವಿಡ್ ಅವರು ತಮ್ಮ ವ್ಹೀಲ್ ಚೇರ್ ನಿಂದ ಎದ್ದು ನಿಂದು ಹರ್ಷೋದ್ಗಾರ ಮಾಡಿ ಚಪ್ಪಾಳೆ ತಟ್ಟಿದ್ದರು. ಅಲ್ಲಿಂದ ಬಳಿಕ ವೈಭವ್ ಸೂರ್ಯವಂಶಿ ಅವರು ರಾತ್ರೋ ರಾತ್ರಿ ಹೀರೋ ಆದರು. ಈಗವರು ಭಾರತ ತಂಡದ ಭವಿಷ್ಯದ ತಾರೆ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ.