https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ತಮಿಳು ಸೂಪರ್ಸ್ಟಾರ್ ಧನುಷ್ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ. Thenandal Films ಎಂಬ ನಿರ್ಮಾಣ ಸಂಸ್ಥೆ ಧನುಷ್ಗೆ 20 ಕೋಟಿ ರೂ. ಪರಿಹಾರವನ್ನು ಬೇಡಿಕೆ ಹಾಕಿ ಕಾನೂನು ನೋಟಿಸ್ ಕಳುಹಿಸಿದೆ. ಇದು ಬಹು ದಿನಗಳಿಂದ ಬಾಕಿ ಇರುವ ಸಿನಿಮಾ ಯೋಜನೆಯ ವಿಳಂಬಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ.
ನಿರ್ಮಾಪಕರು ಧನುಷ್ 2016ರಲ್ಲಿ ‘ನಾನ್ ರುದ್ರನ್’ ಎಂಬ ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ ಶೂಟಿಂಗ್ ಮಾಡಲೇ ಇಲ್ಲ ಎಂದು ಆರೋಪಿಸಿದ್ದಾರೆ
ಕಂಪನಿಯ ಕಾನೂನು ಸಲಹೆಗಾರರ ಮೂಲಕ ಕಳುಹಿಸಿದ ನೋಟಿಸ್ನಲ್ಲಿ, ಧನುಷ್ ಮೊದಲಿಗೆ ನಟನೆ ಮತ್ತು ನಿರ್ದೇಶನ ಎರಡಕ್ಕೂ ಒಪ್ಪಿಕೊಂಡಿದ್ದರು. ಆದರೆ ನಿರ್ಮಾಪಕರು ಯೋಜನೆಯಲ್ಲಿ ಬದಲಾವಣೆಗಳಿಗೆ ಒಪ್ಪಿಕೊಂಡರೂ, ಧನುಷ್ ನಂತರ ಪೂರ್ಣ ಕಥಾಸಾರವನ್ನು ನೀಡಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದಿದ್ದಾರೆ.
ಧನುಷ್ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ, ಇತರ ಸಿನಿಮಾಗಳಿಗೆ ಕಾಲ್ಶೀಟ್ ನೀಡಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆಗೆ ಭಾರಿ ಹಣಕಾಸಿನ ನಷ್ಟ ಉಂಟಾಗಿದೆ. ಆರಂಭಿಕ ಹಂತದ ಹೂಡಿಕೆಯನ್ನು ವಸೂಲಿ ಮಾಡಲು 20 ಕೋಟಿ ರೂ. ಪರಿಹಾರ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಈವರೆಗೆ ಧನುಷ್ ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.