https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್ ವಿಚಾರವಾಗಿ ನಡೆದ ಸಣ್ಣ ವಾಗ್ವಾದವೊಂದು ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ತಿರುಪತಿಗೆ ತೆರಳಲು ಖಾಸಗಿ ಬಸ್ ಬುಕ್ ಮಾಡಿದ್ದ ಆಂಧ್ರ ಮೂಲದ ಮಹಿಳೆಯೊಬ್ಬರು ಪಿಕ್‌ಅಪ್ ಪಾಯಿಂಟ್‌ಗೆ ತಡವಾಗಿ ಬಂದಿದ್ದರು.
ಮಧ್ಯಾಹ್ನ 12 ಗಂಟೆಗೆ ಬಸ್ ಬರಬೇಕಿತ್ತು, ಆದರೆ ಮಹಿಳೆ ತಡವಾಗಿ ಬಂದು ತಮಗಾಗಿ ಕಾಯುವಂತೆ ಚಾಲಕನಿಗೆ ಫೋನ್‌ನಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಾಲಕ, ‘ಟ್ರಾಫಿಕ್ ಜಾಮ್ ಆಗುತ್ತದೆ ಮತ್ತು ಪಿಕ್‌ಅಪ್ ಸಮಯ ಈಗಾಗಲೇ ಮುಗಿದಿದೆ. ಬಸ್ ಕಾಯಲು ಸಾಧ್ಯವಿಲ್ಲ, ನೀವು ಮುಂದಿನ ಸ್ಟಾಪ್ ಆದ ಮೆಜೆಸ್ಟಿಕ್‌ಗೆ ಬನ್ನಿ, ಅಲ್ಲಿ ಹತ್ತಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದರು. ಈ ವಿಚಾರವಾಗಿ ಫೋನ್‌ನಲ್ಲಿಯೇ ಚಾಲಕ ಹಾಗೂ ಮಹಿಳೆ ನಡುವೆ ಜೋರು ವಾಗ್ವಾದ ನಡೆದಿತ್ತು.
ಬಳಿಕ ಆ ಮಹಿಳೆ ಮೆಜೆಸ್ಟಿಕ್ ಸ್ಟಾಪ್‌ಗೆ ಬಂದು ಬಸ್ ಹತ್ತಿದ್ದರು. ಪ್ರಯಾಣದುದ್ದಕ್ಕೂ ಆಕೆ ಚಾಲಕನೊಂದಿಗೆ ಯಾವುದೇ ಮಾತನಾಡದೆ ಮೌನವಾಗಿದ್ದರು.
ಆದರೆ, ಬಸ್ ಆಂಧ್ರಪ್ರದೇಶದ ಚಿತ್ತಾಪುರ ತಲುಪುತ್ತಿದ್ದಂತೆ ಆಕೆ ತನ್ನ ಬಣ್ಣ ಬದಲಿಸಿದ್ದಾರೆ. ತಡರಾತ್ರಿ ಬಸ್ ಚಿತ್ತಾಪುರ ತಲುಪಿದಾಗ, ಆಕೆ ಮೊದಲೇ ಸಂಚು ರೂಪಿಸಿ ಫೋನ್ ಮಾಡಿ 8 ಮಂದಿ ಪುಂಡರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಬಸ್ ನಿಲ್ಲುತ್ತಿದ್ದಂತೆ ಮಹಿಳೆ ಸೂಚಿಸಿದ ಎಂಟು ಮಂದಿ ಗೂಂಡಾಗಳು ಬಸ್ ಒಳಗೆ ನುಗ್ಗಿ, ಸ್ಟೀರಿಂಗ್ ಸೀಟಿನಲ್ಲಿದ್ದ ಚಾಲಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಆಂಧ್ರದ ಯಾವುದೋ ಸಂಘಟನೆಗೆ ಸೇರಿದವರು ಎನ್ನಲಾದ ಈ ಯುವಕರು ಚಾಲಕನನ್ನು ಮನಬಂದಂತೆ ಥಳಿಸಿದ್ದಾರೆ.
ಚಾಲಕನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ದೃಶ್ಯಗಳು ಬಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಘಟನೆ ನಡೆದ ಕೂಡಲೇ ಚಾಲಕ ಸ್ಥಳೀಯ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಅಲ್ಲಿನ ಪೊಲೀಸರು ಸ್ಥಳೀಯರ ಪ್ರಭಾವಕ್ಕೆ ಮಣಿದು ಸರಿಯಾಗಿ ಸ್ಪಂದಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
https://www.newsics.com/2026/02/13/malaysian-tech-entrepreneur-buys-ai-com-domain-for-just-100/