https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವಿಡಿಯೋ ರೈಟ್ಸ್‌ಗೆ ಓಟಿಟಿ ವೇದಿಕೆಯೊಂದು 100 ಕೋಟಿ ರೂ. ಆಫರ್ ನೀಡಿದೆ ಎಂದು ವರದಿಯಾಗಿದೆ. ಆದರೆ, ತಮ್ಮ ಖಾಸಗಿ ಬದುಕನ್ನು ಕ್ಯಾಮೆರಾ ಮುಂದೆ ತೆರೆದಿಡಲು ಇಷ್ಟಪಡದ ಈ ಜೋಡಿ, ಈ ಬೃಹತ್ ಮೊತ್ತದ ಆಫರ್ ಅನ್ನು ತಿರಸ್ಕರಿಸಿದೆ ಎನ್ನಲಾಗಿದೆ.
ಇದೇ ತಿಂಗಳು 26ರಂದು ವಿಜಯ್-ರಶ್ಮಿಕಾ ಮದುವೆ ಆಗಲಿದ್ದು, ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಈ ಕುರಿತಾದ ಕೆಲವು ವೀಡಿಯೊಗಳು ವೈರಲ್ ಆಗುತ್ತಿದ್ದು, ಮದುವೆ ಸಿದ್ದತೆ ಪ್ರಾರಂಭವಾಗಿವೆ ಎಂದು ಸೂಚಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಇಬ್ಬರು ಈ ಬಗ್ಗೆ ಯಾವುದನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಆದರೆ ಈಗ ಬರುತ್ತಿರುವ ಮಾಹಿತಿ ಪ್ರಕಾರ, ಪ್ರಮುಖ ಅಂತರರಾಷ್ಟ್ರೀಯ ಒಟಿಟಿ ಕಂಪನಿಯೊಂದು ಅವರ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತವನ್ನು ನೀಡಿದೆ. ಆದರೆ ವಿಜಯ್ ದೇವರಕೊಂಡ ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ನಟ ತಮ್ಮ ವೈಯಕ್ತಿಕ ಜೀವನದ ಪ್ರಮುಖ ಸಮಾರಂಭವನ್ನು ವಾಣಿಜ್ಯೀಕರಣಗೊಳಿಸಲು ಬಯಸುವುದಿಲ್ಲ ಎಂದಿದ್ದು, ಅದಕ್ಕೆ ಎಷ್ಟೇ ಕೋಟಿ ಆಫರ್ ಕೊಟ್ಟರೂ ಸ್ವೀಕರಿಸಲಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಕುಟುಂಬ ಮತ್ತು ಆಪ್ತ ಸ್ನೇಹಿತರ ನಡುವೆ ಬಹಳ ಖಾಸಗಿಯಾಗಿ ಮದುವೆ ನಡೆಯಲು ಇಬ್ಬರು ಇಚ್ಚಿಸಿದ್ದಾರೆ ಎನ್ನಲಾಗಿದೆ.