https://youtube.com/shorts/PRG7YTSZHd8?si=BMsmmRTf3CzVSrft
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ನಾಯಿ ಸಾಕುವು ದಕ್ಕೂ ಜಿಬಿಎ ಹೊಸ ರೂಲ್ಸ್ ತರುತ್ತಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಸುಪ್ರೀಂ ಕೋರ್ಟ್ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇನ್ನೂ ಸಾಕು ನಾಯಿಗಳ ಸಾಕುವುದಕ್ಕೆ ಅಂತ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತುಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.
ಹೊಸ ರೂಲ್ಸಿನಲ್ಲಿ ಏನಿದೆ?
ಸಾಕು ನಾಯಿಗಳನ್ನು ಸಾಕೋದಕ್ಕೆ ಜಿಬಿಎಯಿಂದ ಪರವಾನಗಿ ಪಡೆಯಬೇಕು. ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ಜಿಬಿಎಗೆ ಇಂತ್ತಿಷ್ಟು ಹಣ ಪಾವತಿ ಮಾಡಬೇಕು. ನಾಯಿಗಳ ವರ್ಗದ ( ತಳಿ) ಅಧಾರದ ಮೇಲೆ ಪರವಾನಗೆ ಶುಲ್ಕ ನಿಗದಿ ಮಾಡಲಾಗುವುದು.
ಜಿಬಿಎ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ದೃಢೀಕರಣ ಪಡೆಯಬೇಕು. ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು. ಸಾಕು ನಾಯಿ ಮಾಲೀಕರು ನಾಯಿಗೆ ರೆಬೀಸ್ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಿರುವ ಬಗ್ಗೆ ನೊಂದಾಯಿತ ಪಶು ವೈದ್ಯರಿಂದ ದೃಢೀಕರಣ ಪಡೆಯ ಬೇಕಿದೆ.
ಪ್ರತಿ ಸಾಕು ನಾಯಿ ಮಾಲೀಕರು 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು. ಇನ್ನೂ ಸಾಕು ನಾಯಿಗಳ ಅವರಣದಲ್ಲಿ ಸ್ವಚ್ಚತೆ ಕಾಪಾಡಬೇಕು. ನೆರೆಹೊರೆಯವರಿಗೆ ತೊಂದರೆ ಅಗದಂತೆ ನಾಯಿ ಸಾಕಬೇಕು.
ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಿನ ನಾಯಿ ಸಾಕೋದಕ್ಕೆ ಅವಕಾಶ ಇಲ್ಲ. ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣಿ ದಯಾ ಕೇಂದ್ರ ಕ್ಕೆ ಕಳುಹಿಸುತ್ತಾರೆ. ನಗರಪಾಲಿಕೆ ಬೈಲಾ ಪ್ರಕಾರವೇ ನಾಯಿಗಳನ್ನು ಸಾಕಬೇಕು.
ಮತ್ತೊಂದು ಕಡೆ ಜಿವಿಎ ಅದೇಶದ ಬೆನ್ನಲೇ ಶ್ವಾನ ಪ್ರಿಯರರು ಅಕ್ರೋಶವನ್ನ ಹೊರಹಾಕುತ್ತಿದ್ದಾರೆ.ಏಕೆಂದ್ರೆ ಮನೆಯಲ್ಲಿ ಮಕ್ಕಳ ರೀತಿಯಲ್ಲಿ ಶ್ವಾನಗಳನ್ನು ಪಾಲನೆ,ಪೋಷಣೆ ಮಾಡುತ್ತಿದ್ದೇವೆ. ಕೆಲವೊಂದು ಮನೆಯಲ್ಲಿ 7-8 ನಾಯಿಗಳಿರುತ್ತೆ. ಅವುಗಳನ್ನ ಮಕ್ಕಳಂತೆ ಪ್ರೀತಿಸುತ್ತೇವೆ. ಕೂಡಲೇ ಈ ರೀತಿಯ ಅದೇಶ ಹಿಂಪಡೆಯಬೇಕು ಇಲ್ಲವದರೇ ಜಿಬಿಎಯ ಆಯುಕ್ತರ ವಿರುದ್ದ ಪ್ರತಿಭಟನೆ ಮಾಡುತ್ತವೆ ಎಂದು ಅಕ್ರೋಶವನ್ನ ಹೊರಹಾಕಿದ್ದಾರೆ.
https://www.newsics.com/2026/02/12/drunk-man-dies-after-falling-into-manhole/