https://youtube.com/shorts/PRG7YTSZHd8?si=ZMQzveZbWSU8OIp7
Subscribe ನ್ಯೂಸಿಕ್ಸ್ ಕನ್ನಡ
newsics.com
ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ಬೆಲೆ ಇಳಿಕೆಯಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಇದು ನೆಮ್ಮದಿಯ ವಿಚಾರ. ಕೆಲ ವಾರಗಳ ಹಿಂದೆ ಏರಿಕೆಯಾಗಿದ್ದ ದರಗಳು ಈಗ ನಿಧಾನವಾಗಿ ಹಿಂತಿರುಗಿ, ಜನರ ಖರೀದಿಗೆ ಅನುಕೂಲಕರವಾಗಿವೆ.
ಮೊಟ್ಟೆ ಬೆಲೆ ಏರಿಕೆಯಾದ ಮೇಲೆ ಸಾಮಾನ್ಯವಾಗಿ ಹೆಚ್ಚೆಂದರೆ 20 ರಿಂದ 30 ಪೈಸೆಯಷ್ಟು ಇಳಿದರೆ ಹೆಚ್ಚು, ಆದರೆ ಈ ಸಲ ಹೆಚ್ಚೂ ಕಡಿಮೆ ಒಂದೂವರೆ ರು.ನಷ್ಟು ಇಳಿಕೆಯಾಗಿದೆ.
ವಿದೇಶಗಳಿಗೆ ದಿನಂಪ್ರತಿ ಅಂದಾಜು 76 ಲಕ್ಷ ರಫ್ತು ಆಗುತ್ತಿದ್ದ ಮೊಟ್ಟೆಯು 56 ಲಕ್ಷಕ್ಕೆ ಕುಸಿದಿದೆ, ಜತೆಗೆ ಶೇ.15ರಷ್ಟು ಉತ್ಪಾದನೆ ಹೆಚ್ಚಿದೆ, ಇದು ಮೊಟ್ಟೆ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣ ವಾಗಿದೆ.
ಅಲ್ಲಿ 1600ಕ್ಕೂ ಹೆಚ್ಚು ಕೋಳಿ ಫಾರ್ಮ್‌ಗಳು ಇದ್ದು, ಪ್ರತಿದಿನ ಸುಮಾರು ಆರು ಕೋಟಿಗೂ ಹೆಚ್ಚು ಮೊಟ್ಟೆ ಉತ್ಪಾದನೆಯಾಗುತ್ತವೆ. ಅಲ್ಲಿನ ಮೊಟ್ಟೆಗಳನ್ನು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಇತರ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುತ್ತದೆ, ಹಾಗೆಯೇ ಸರಕಾರಿ ಹಾಗೂ ಅನು ದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಊಟ ಯೋಜನೆಗೂ ಮೊಟ್ಟೆಗಳನ್ನು ಪೂರೈಸಲಾಗುತ್ತದೆ, ಅಲ್ಲದೆ ಮೊಟ್ಟೆಗಳನ್ನು ಮುಸ್ಕತ್, ದುಬೈ, ಕತಾರ್, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ʼಗಳಿಗೆ ರಫ್ತು ಮಾಡಲಾಗುತ್ತಿತ್ತು.
ಬೇಡಿಕೆ ಮತ್ತು ಉತ್ಪಾದನೆಯನ್ನು ಆಧರಿಸಿ, ರಾಷ್ಟ್ರೀಯ ಮೊಟ್ಟೆ ಸಂಯೋಜನಾ ಸಮಿತಿ (ಎನ್‌ಇಸಿಸಿ), ನಾಮಕ್ಕಲ್ ವಲಯವು ಪ್ರತಿದಿನ ಮೊಟ್ಟೆಗಳ ಬೆಲೆಯನ್ನು ನಿಗದಿಪಡಿಸುತ್ತದೆ.