https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರರನ್ನು ಶಕುಂತಲಾದೇವಿ (46), ಪ್ರಿಯಾಂಕ (19) ಎಂದು ಗುರುತಿಸಲಾಗಿದೆ. ಕೋಡಿಹಳ್ಳಿ ಗ್ರಾಮದ ನಿವಾಸಿಯಾದ ಪ್ರಿಯಾಂಕಾ ಅದೇ ಊರಿನ ವಿವಾಹಿತ ಮುತ್ತುರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. 34 ವರ್ಷದ ಮುತ್ತುರಾಜ್ ಎರಡು ಮಕ್ಕಳ ತಂದೆಯಾಗಿದ್ದು, ಆಗಾಗ ಪ್ರಿಯಾಂಕಾ ಮನೆಗೆ ಬಂದು ಹೋಗುತ್ತಿದ್ದನು. ತಮ್ಮದೇ ಊರಿನವನಾಗಿದ್ದರಿಂದ ಮುತ್ತುರಾಜ್ ಆಗಮನದ ಬಗ್ಗೆ ಪ್ರಿಯಾಂಕಾ ಕುಟುಂಬಸ್ಥರಿಗೆ ಅನುಮಾನ ಬಂದಿರಲಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಪೋಷಕರಿಗೆ ಮಗಳ ಪ್ರೀತಿಯ ವಿಷಯ ಗೊತ್ತಾಗಿತ್ತು. ಪ್ರತಿದಿನ ಮನೆಗೆ ಬರುತ್ತಿದ್ದ ಮುತ್ತುರಾಜ್‌ಗೂ ಪೋಷಕರು ಬೈದು ಬುದ್ಧಿ ಹೇಳಿದ್ದರು. ಮಗಳಿಗೂ ಆತನಿಂದ ದೂರವಿರುವಂತೆ ವಾರ್ನಿಂಗ್ ನೀಡಿದ್ದರು. ಈ ವಿಷಯ ತಿಳಿದ ಬೆನ್ನಲ್ಲೇ ಪ್ರಿಯಾಂಕಾಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು.
ಮದುವೆಗೆ ಗಂಡು ಹುಡುಕಿದ ನಂತರವೂ ಪ್ರಿಯಾಂಕಾ-ಮುತ್ತುರಾಜ್ ಲವ್ ಮುಂದುವರಿದಿತ್ತು. ಇದೀಗ ಮರ್ಯಾದೆಗೆ ಹೆದರಿ ಮಗಳು ಮತ್ತು ಪತ್ನಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪ್ರಿಯಾಂಕಾ ತಂದೆ ಮಹೇಶ್ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://www.newsics.com/2026/02/10/prostitution-ring-three-women-get-10-years-rigorous-imprisonment/