https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಈಚೆಗೆ ಬಿಡುಗಡೆಯಾಗಿರುವ ಎಪ್ಸ್ಟೀನ್ ಫೈಲ್ಸ್ ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಟಿ ಮಾಡಿದೆ.ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕನ್ ನ್ಯಾಯಂಗ ಇಲಾಖೆ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಭಾವಿಗಳ ಪಟ್ಟಿಯೇ ತುಂಬಿದೆ.
ಜೆಫ್ರಿ ಎಪ್ಸ್ಟೀನ್ ನಡೆಸಿದ್ದ ಅಪರಾಧಿ ಚಟುವಟಿಕೆಗಳ ಬಗ್ಗೆ ಲಕ್ಷಾಂತರ ಪುಟಗಳ ದಾಖಲೆ ಕಲೆಹಾಕಲಾಗಿದೆ. ಈ ದಾಖಲೆಗಳಲ್ಲಿ ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತಿರುವುದು ಆಘಾತಕಾರಿ ಸಂಗತಿ. ಆ ಬಗ್ಗೆ ಎಲ್ಲ ಕಡೆಗಳಲ್ಲಿ ಸುದ್ದಿ ಆಗುತ್ತಿದೆ.
ಹಲವು ವಿಡಿಯೋಗಳು, ಫೋಟೋಗಳು ಹಾಗೂ ಇ-ಮೇಲ್ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಬಿಲ್ ಗೇಟ್ಸ್, ಅನಿಲ್ ಅಂಬಾನಿ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಹೆಸರು ಕಾಣಿಸಿದೆ. ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಬಿಲ್ ಗೇಟ್ಸ್ ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರು ಕಾಣಿಸಿಕೊಂಡಿದೆ.
ನಂದಿತಾ ದಾಸ್, ಅನುರಾಗ್ ಕಶ್ಯಪ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮುಂತಾದ ಸೆಲೆಬ್ರಿಟಿಗಳ ಹೆಸರುಗಳು ಎಪ್ಸ್ಟೀನ್ ಫೈಲ್ಸ್ ಪುಟಗಳಲ್ಲಿ ಪ್ರಸ್ತಾಪ ಆಗಿವೆ ಎಂಬ ಮಾಹಿತಿ ಕೇಳಿಬಂದಿದೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ಅಷ್ಟಕ್ಕೂ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೂ ಈ ಸೆಲೆಬ್ರಿಟಿಗಳು ಯಾವ ರೀತಿಯ ನಂಟು ಇದೆ ಎಂಬ ಪ್ರಶ್ನೆ ಉದ್ಭವ ಆಗಿದೆ. ಅಭಿಮಾನಿಗಳಿಗೆ ಆಘಾತವಾಗಿದೆ.
https://www.newsics.com/2026/02/06/10-movies-releasing-this-week/