Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Kannada Movies Release ಸಿನಿ ಪ್ರಿಯರಿಗೆ ಭರ್ಜರಿ ಸುದ್ದಿ: ಈ ವಾರ 10 ಸಿನಿಮಾಗಳು ರಿಲೀಸ್
ಕರ್ನಾಟಕಪ್ರಮುಖಮನರಂಜನೆ

Kannada Movies Release ಸಿನಿ ಪ್ರಿಯರಿಗೆ ಭರ್ಜರಿ ಸುದ್ದಿ: ಈ ವಾರ 10 ಸಿನಿಮಾಗಳು ರಿಲೀಸ್

Share
3 Min Read
SHARE

https://youtube.com/shorts/kv9in5qxZnE?si=xMEQPbw5L2rTAx6o

Subscribe ನ್ಯೂಸಿಕ್ಸ್ ಕನ್ನಡ

newsics.com

ಕನ್ನಡದಲ್ಲಿ ಈ ವಾರ ಹೆಚ್ಚು ಕಡಿಮೆ 10 ಸಿನಿಮಾಗಳು ರಿಲೀಸ್ ಆಗುತ್ತಿವೆ. ಥಿಯೇಟರ್ ಸಮಸ್ಯೆಯ ನಡುವೇನೆ ಒಂದೇ ದಿನ 10  ಚಿತ್ರ ಬರ್ತಿವೆ. ಈ 10 ಚಿತ್ರಗಳಲ್ಲಿ ಹೊಸಬರ ಚಿತ್ರಗಳೂ ಇವೆ. ಗೊತ್ತಿರೋ ರಾಜ್ ಬಿ ಶೆಟ್ರ ಚಿತ್ರವೂ ಇದೆ. ಈ ಚಿತ್ರದ ಕಂಟೆಂಟ್ ಚೆನ್ನಾಗಿದೆ ಅನ್ನುವ ಟಾಕ್ ಶುರು ಆಗಿದೆ. ಕಾರಣ, ಚಿತ್ರದ ಪ್ರೀಮಿಯರ್ ಶೋ ಈಗಾಗಲೇ ಆಗಿದೆ.

ರಕ್ಕಸಪುರದೋಳ್

ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಲ್ ಚಿತ್ರ ರಿಲೀಸ್ ಆಗುತ್ತಿದೆ. ಫೆಬ್ರವರಿ-6 ರಂದು ನಾವು ಬರ್ತಿದ್ದೇವೆ ಅಂತ ಸಿನಿಮಾ ತಂಡ ಈಗಾಗಲೇ ಹೇಳಿದೆ.ಈ ಚಿತ್ರದ ಟ್ರೈಲರ್ ಸೂಪರ್ ಆಗಿದೆ. ಇದನ್ನ ನೋಡಬಹುದು. ಉತ್ತಮ ಚಿತ್ರದ ಇದಾಗಿರುತ್ತದೆ ಅನ್ನುವ ಅರ್ಥದಲ್ಲಿಯೇ ಸುದೀಪ್ ಹೇಳಿ ಹೋಗಿದ್ದಾರೆ. ಜೋಗಿ ಪ್ರೇಮ್ ಶಿಷ್ಯ ರವಿ ಸಾರಂಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ರಕ್ಕಸಪುರದೋಳ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪೊಲೀಸ್ ರೋಲ್ ಮಾಡಿದ್ದಾರೆ.

ಕರಿಕಾಡ

ಕರಿಕಾಡ ಹೆಸರಿನ ಚಿತ್ರವೂ ಬರ್ತಿದೆ. ಈ ಚಿತ್ರದಲ್ಲಿ ರೋಮ್ಯಾನ್ಸ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲೂ ಇದೆ. ಗಿಲ್ಲಿ ವೆಂಕಟೇಶ್ ಈ ಚಿತ್ರವನ್ನ ಬರೆದು ಡೈರೆಕ್ಷನ್ ಮಾಡಿದ್ದಾರೆ.ಕಾಡ ನಟರಾಜ್ ಈ ಚಿತ್ರದ ನಾಯಕರಾಗಿದ್ದಾರೆ. ನಿರೀಕ್ಷಣಾ ಶೆಟ್ಟಿ, ಯಶ್ ಶಟ್ಟಿ ಅಭಿನಯಿಸಿದ್ದಾರೆ. ಈ ಚಿತ್ರವೂ ಫೆಬ್ರವರಿ-6 ರಂದು ರಿಲೀಸ್ ಆಗುತ್ತಿದೆ.

ಅಬ್ಬರಿಸುವ ಕರಿಕಾಡ

ಹೆಸರು, ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಗಮನ ಸೆಳೆದಿರುವ ರಗಡ್ ಸ್ಟೋರಿ ಸಿನಿಮಾ. ಕಾಡ ನಟರಾಜ್‌ ನಾಯಕ. ನಿರೀಕ್ಷಾ ಶೆಟ್ಟಿ ನಾಯಕಿ. ಗಿಲ್ಲಿ ವೆಂಕಟೇಶ್‌ ನಿರ್ದೇಶನ ದೀಪ್ತಿ ದಾಮೋದರ್‌ ನಿರ್ಮಾಣದ ಈ ಚಿತ್ರ ಐದು ಭಾಷೆಗಳಲ್ಲಿ ಮೂಡಿ ಬಂದಿದೆ. ಅಡ್ವೆಂಚರ್‌ ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಸಿನಿಮಾ.

 

ವಿಸ್ಮಯ ನಿಗೂಢಲೋಕದ ಕತೆ ಘಾರ್ಗಾ

ಇದೊಂದು ಕ್ರೈಮ್‌ ಥ್ರಿಲ್ಲರ್‌. ‘ಜೋಗಿ’ ನಿರ್ಮಾಪಕ ಅಶ್ವಿನಿ ರಾಮ್‌ ಪ್ರಸಾದ್‌ ನಿರ್ಮಾಣ, ಎಂ. ಶಶಿಧರ್‌ ನಿರ್ದೇಶನ. ಘಾರ್ಗಾ ಒಂದು ನಿಗೂಢ ಊರಿನ ಹೆಸರು. ‘ದ ಲ್ಯಾಂಡ್‌ ಆಫ್‌ ಶಾಡೋ’ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಅರುಣ್‌ ರಾಮ್‌ಪ್ರಸಾದ್‌ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರೆಹಾನ ಚಿತ್ರದ ನಾಯಕಿ. ಸಾಯಿ ಕುಮಾರ್‌, ಸಂಪತ್‌ ರಾಜ್‌, ರಾಹುಲ್‌ ದೇವ್‌, ಅರುಣ್‌ ಸಾಗರ್‌, ದೇವ್‌ ಗಿಲ್‌, ಮಿತ್ರ ಚಿತ್ರದ ಪಾತ್ರಧಾರಿಗಳು.

ಕಟ್ಲೆ

ಹಾಸ್ಯ ಕಲಾವಿದ ಕೆಂಪೇಗೌಡ ನಾಯಕನಾಗಿ ನಟಿಸಿರುವ ಚಿತ್ರ. ಶ್ರೀವಿಧಾ ಅಭಿನಂದನ್‌ ನಿರ್ದೇಶನ, ಹೊಸಕೋಟೆ ಮೂಲದ ಭರತ್‌ಗೌಡ ನಿರ್ಮಾಪಕ. ಸನ್ಮಿತ, ಅಮೃತ ನಾಯಕಿಯರು. ಮತ್ತೊಂದು ಮುಖ್ಯ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ನಟಿಸಿದ್ದಾರೆ. ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್‌, ಗಣೇಶ್‌ರಾವ್‌ ಕೇಸರಕರ್‌ ಚಿತ್ರದ ಉಳಿದ ಪಾತ್ರಗಳು. ಕಾಲಚಕ್ರದ ಕತೆಯನ್ನು ಹೇಳುವ ಸಿನಿಮಾ ಇದು.

ಘಾರ್ಗಾ

ಘಾರ್ಗಾ ಚಿತ್ರದಲ್ಲಿ ಕಂಟೆಂಟ್ ವಿಶೇಷವಾಗಿಯೇ ಇದೆ. ದರ್ಶನ್ ಅಭಿನಯದ ಗಜ ಚಿತ್ರದ ಬಂಗಾರಿ ಯಾರೇ ನೀ ಬುಲ್ ಬುಲ್ ಹಾಡನ್ನ ಇಲ್ಲಿ ರಿಮಿಕ್ಸ್ ಕೂಡ ಮಾಡಿದ್ದಾರೆ. ಈ ಹಾಡನ್ನ ದರ್ಶನ್‌ ಫ್ಯಾನ್ಸ್ ರಿಲೀಸ್ ಮಾಡಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ.

ಹಿರಿಯ ನಟ ಸಾಯಿ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಈ ಚಿತ್ರವನ್ನ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಅರುಣ್ ರಾಮ್‌ಪ್ರಸಾದ್‌ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಈ ಚಿತ್ರವನ್ನ ಎಂ. ಶಶಿಧರ್ ಡೈರೆಕ್ಷನ್ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಮಾಡಿದ್ದಾರೆ.

ನೆನಪುಗಳ ಮಾತು ಮಧುರ

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆರೆಡ್ ಆಂಡ್ ವೈಟ್ ಸೆವೆನ್‌ ರಾಜ್‌ ನಿರ್ಮಾಣ, ಅಫ್ಜಲ್‌ ನಿರ್ದೇಶನ ಇದೆ. ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದು. ವಸಿಷ್ಠ ಬಂಟನೂರು, ರಣವೀರ್‌, ರಾಜ ಪ್ರಭು, ವಿನಯ್‌, ಅಂಜಲಿ, ಸೌಮ್ಯ ತಾರಾಬಳಗವಿದೆ.

ಸರ್ಕಾರಿ ಶಾಲೆ ಎಚ್‌8

ಸಸ್ಪೆನ್ಸ್,ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್‌ ವಿಜೇತ ಗಿಲ್ಲಿ ನಟ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ. ಗುಣ ಹರಿಯಬ್ಬೆ ನಿರ್ದೇಶನ, ತೇಜಸ್ವಿನಿ ಎಸ್‌. ನಿರ್ಮಾಪಕರು. ಒಂದು ವಿಗ್ರಹದ ಸುತ್ತಾ ಸಾಗುವ ಕತೆ ಈ ಚಿತ್ರದಲ್ಲಿದೆ. ರಾಘವೇಂದ್ರ ರಾಜ್‌ಕುಮಾರ್, ಸುಚೇಂದ್ರ ಪ್ರಸಾದ್‌ ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್‌, ನಮ್ರತಾ, ಮೇಘಶ್ರೀ, ಮೋಹನ್ ನಟಿಸಿದ್ದಾರೆ.

ಸುಖೀಭವ

ಸಂತೋಷ್‌ ಕುಮಾರ್‌, ಭಾರ್ಗವಿ ಸಂತೋಷ್‌ ನಿರ್ಮಿಸಿರುವ ಈ ಚಿತ್ರವನ್ನು ಎನ್‌.ಕೆ.ರಾಜೇಶ್‌ ನಾಯ್ಡು ನಿರ್ದೇಶಿಸಿದ್ದಾರೆ. ಮಹೇಂದ್ರ, ಸುಶ್ಮಿತ ನಾಯಕ್‌, ವಿಹಾನ್‌ಶಿ ಹೆಗ್ಡೆ, ಗೌರವ ಶೆಟ್ಟಿ, ಶೋಭರಾಜ್‌, ರವಿಶಂಕರ್‌ಗೌಡ, ಸುನಿಲ್‌ ಪುರಾಣಿಕ್‌, ತುಕಾಲಿ ಸಂತು, ಮೈತ್ರಿ ಜಗ್ಗು ನಟಿಸಿದ್ದಾರೆ. ಮಧ್ಯಮ ವರ್ಗದ ಜೀವನ, ಪ್ರೇಮ ಕತೆಯನ್ನು ಹೇಳುವ ಸಿನಿಮಾ.

ಕಾಟನ್ ಪೇಟೆ ಗೇಟ್, ಶಿವಲೀಲಾ, ಬಯಕೇಗಳು ಬೇರೂರಿದಾಗ, ನೆನಪುಗಳ ಮಾತು ಮಧುರ, ನಾನ್‌ವೆಜ್, ಕಟ್ಲೆ, ಬ್ಲಡ್ ರೋಸ್ ಚಿತ್ರಗಳು ರಿಲೀಸ್ ಆಗುತ್ತಿವೆ ಅಂತ ಹೇಳಬಹುದು.

TAGGED:10 movies releasing this week
Share This Article
Facebook Twitter Copy Link Print
Previous Article ಮದುವೆ ಭರವಸೆ ನೀಡಿ ಅತ್ಯಾ*ಚಾರವೆಸಗಿದರೆಂದು ವಿವಾಹಿತೆ ದೂರುವಂತಿಲ್ಲ: ಸುಪ್ರೀಂ ಕೋರ್ಟ್
Next Article Epstein Files: ಬಿಡುಗಡೆಯಾದ ಎಪ್ಸ್ಟೀನ್ ಫೈಲ್ಸ್‌ ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು!

Popular Posts

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?