https://youtube.com/shorts/2Z4I0oFUbOQ?si=lRtOoJZaxMNU8kB1
Subscribe ನ್ಯೂಸಿಕ್ಸ್ ಕನ್ನಡ
newsics.com
ಚಿಕ್ಕಬಳ್ಳಾಪುರ : ಮುಸ್ಲಿಂ ಯುವತಿ ಜೊತೆಯಲ್ಲಿ ಬರ್ತಿದ್ದ ಹಿಂದೂ ಯುವಕನನ್ನ ತಡೆದ ಅನ್ಯಕೋಮಿನ ಬಾಲಕರು ಕಿರಿಕ್ ತೆಗೆದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಕಾಲೇಜು ಬಸ್ ಇಳಿದು ಜೊತೆಯಲ್ಲಿ ಬಸ್ ಸ್ಟಾಪ್ ಕಡೆಗೆ ಹೋಗ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನ ತಡೆದು ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕೇವಲ ಪ್ರಶ್ನೆ ಮಾಡಿದ್ದಷ್ಟೇ ಅಲ್ಲದೆ, ಪುಂಡರು ತಮ್ಮ ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. ‘ನಮ್ಮ ಕೋಮಿನ ಹುಡುಗಿ ಜೊತೆ ನೀನ್ಯಾಕೆ ಬರುತ್ತಿದ್ದೀಯಾ?’ ಎಂದು ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ನಡುರಸ್ತೆಯಲ್ಲೇ ಯುವತಿಗೆ ‘ನಿಮ್ಮ ಅಪ್ಪನ ನಂಬರ್ ಕೊಡು, ಈಗಲೇ ಕಾಲ್ ಮಾಡು’ ಎಂದು ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಯುವತಿ, ಸ್ಥಳದಲ್ಲೇ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆದರೂ ಕ್ಯಾರೇ ಎನ್ನದ ಪುಂಡರು ತಮ್ಮ ದರ್ಪವನ್ನು ಮುಂದುವರಿಸಿದ್ದಾರೆ.
ತಮ್ಮಿಬ್ಬರ ವಿಡಿಯೋ ಮಾಡಬೇಡಿ, ಅದನ್ನು ಡಿಲೀಟ್ ಮಾಡಿ ಎಂದು ಯುವಕ ಮತ್ತು ಯುವತಿ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಡಿಲೀಟ್ ಮಾಡುವಂತೆ ಕೇಳಿದ್ದಕ್ಕೆ ರೊಚ್ಚಿಗೆದ್ದ ಅಪ್ರಾಪ್ತ ಬಾಲಕರು, ತಮ್ಮ ಬಳಿಯಿದ್ದ ಚಾಕುವನ್ನು (Knife) ತೋರಿಸಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿಯೇ ನಡೆದ ಈ ಘಟನೆ ವಿದ್ಯಾರ್ಥಿಗಳಲ್ಲಿ ಭಾರಿ ಭಯ ಹುಟ್ಟಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳು ಅಪ್ರಾಪ್ತರಾಗಿರುವುದರಿಂದ ಬಾಲ ನ್ಯಾಯ ಕಾಯ್ದೆಯಡಿ ಮುಂದಿನ ಕ್ರಮ ಜರುಗಿಸಲಾಗುತ್ತಿದೆ.