https://youtube.com/shorts/vtmMY3C33B4?si=6NGHSVR8AcxO6HfD
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರದಲ್ಲಿ ಭ್ರಷ್ಟ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರನ್ನು ಲಂಚ ಸ್ವೀಕರಿಸುವ ವೇಳೆಯೇ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ಸ್‌ನಲ್ಲಿ ಶುಕ್ರವಾರ ಸಂಜೆ ಸುಮಾರು 4.30ರ ಸಮಯದಲ್ಲಿ ಈ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಅಧಿಕಾರಿಯನ್ನು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಎಂದು ಗುರುತಿಸಲಾಗಿದೆ.
₹5 ಲಕ್ಷಕ್ಕೆ ಬೇಡಿಕೆ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅಕ್ಬರ್ ಎಂಬುವರು ಲೋಕಾಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರುದಾರರ ಪ್ರಕಾರ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಸಹಾಯ ಮಾಡುವ ನೆಪದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಒಟ್ಟು ₹5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲೋಕಾಯುಕ್ತ ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ದೂರುದಾರರಾದ ಬಿಲ್ಡರ್ ಜನವರಿ 24ರಂದು ಬೆಂಗಳೂರು ನಗರದ ಸಿರ್ಸಿ ಸರ್ಕಲ್ ಬಳಿ ಇನ್ಸ್‌ಪೆಕ್ಟರ್‌ಗೆ ಲಂಚದ ಮೊದಲ ಹಂತವಾಗಿ 1 ಲಕ್ಷ ರೂಪಾಯಿ ಹಣ ಪಾವತಿಸಿದ್ದರು. ಬಳಿಕ ಉಳಿದ 4 ಲಕ್ಷ ರೂಪಾಯಿಯನ್ನು ಕೂಡಲೇ ನೀಡಲೇಬೇಕು ಎಂದು ಇನ್ಸ್‌ಪೆಕ್ಟರ್ ಒತ್ತಡ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಈ ಪ್ರಕರಣವಲ್ಲದೆ ಕಳೆದ ವರ್ಷವೂ ತಮ್ಮ ಸ್ನೇಹಿತರೊಂದಿಗೆ ಸಂಬಂಧಿಸಿದ ಮತ್ತೊಂದು ವಿವಾದದ ಪ್ರಕರಣದಲ್ಲಿಯೂ ಇದೇ ಇನ್ಸ್‌ಪೆಕ್ಟರ್ ₹6 ಲಕ್ಷ ಹಣವನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ದೂರುದಾರರು ಮಾಡಿದ್ದಾರೆ.
ಈ ಮೂಲಕ ಗೋವಿಂದರಾಜು ಅವರ ಮೇಲೆ ಸರಣಿ ಲಂಚ ಮತ್ತು ದೌರ್ಜನ್ಯ ಆರೋಪಗಳು ಕೇಳಿಬಂದಿವೆ.
ದೂರುದಾರರು ತಮ್ಮ ಆರೋಪಗಳನ್ನು ದೃಢಪಡಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಪೆನ್‌ಡ್ರೈವ್ ಒದಗಿಸಿದ್ದು, ಅದರಲ್ಲಿ ಇನ್ಸ್‌ಪೆಕ್ಟರ್ ಲಂಚ ಕೇಳುತ್ತಿರುವ ಆಡಿಯೋ ಇದೆ ಎಂದು ತಿಳಿದುಬಂದಿದೆ.
ಈ ದಾಖಲೆಗಳ ಆಧಾರದಲ್ಲೇ ಲೋಕಾಯುಕ್ತ ಪೊಲೀಸರು ಅಧಿಕಾರಿ ವಿರುದ್ಧ ಬಲೆ ಬೀಸಿದ್ದಾಗಿ ತಿಳಿದುಬಂದಿದೆ.
ಈಗ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 7(a) ಅಡಿಯಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸುತ್ತಿದ್ದು, ಲೋಕಾಯುಕ್ತದ ಚುರುಕು ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
https://www.facebook.com/share/v/1YG6SFtWmi/
ಜಾತ್ರೆಯಲ್ಲಿ ಸಿಪಿಐ ಮೈಮೇಲೆ ಹರಿದ ಎತ್ತಿನಗಾಡಿ; ಪ್ರಾಣಾಪಾಯದಿಂದ ಪಾರು
ವರನಿಗೆ ಚಾಕು ಚುಚ್ಚಿದ ಲವರ್, ಮದುವೆ ಆಗುವಂತೆ ಮನವೊಲಿಸಲು ಆಸ್ಪತ್ರೆಗೆ ಬಂದ ವಧು