https://youtube.com/shorts/kIkAyfI4sxw?si=aggVueBL3fodeELS
Subscribe ನ್ಯೂಸಿಕ್ಸ್ ಕನ್ನಡ
newsics.com
ಕಳೆದ ಕೆಲ ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಎಂಸಿಎಕ್ಸ್‌ನಲ್ಲಿ ದಿಢೀರ್ ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥರ ಬದಲಾವಣೆಯ ಊಹಾಪೋಹಗಳಿಂದಾಗಿ ಅಮೂಲ್ಯ ಲೋಹಗಳ ಬೆಲೆ ತಗ್ಗಿವೆ.
ಏರುಗತಿಯಲ್ಲಿ ಸಾಗುತ್ತಿದ್ದ ಅಮೂಲ್ಯ ಲೋಹಗಳ ಹಾದಿ ಬದಲಾಗಿದ್ದು, ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ 15,000 ರು. ಕಡಿಮೆಯಾಗಿದ್ದು, 3,95,000 ರು. ಆಗಿದೆ.
ಗುರುವಾರ ಇದು 4,10,000 ಲಕ್ಷ ರು. ಆಗಿತ್ತು. ಅತ್ತ 1,63,950 ರು. ಇದ್ದ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 8850 ರು. ಇಳಿದು 1,55,100 ರು. ಆಗಿದೆ.
1,78,850 ರು. ಇದ್ದ ಅದೇ ಪ್ರಮಾಣದ 24 ಕ್ಯಾರಟ್ ಬಂಗಾರದ ಬೆಲೆ 9,650 ರು. ಕುಸಿತವಾಗಿ 1,69,200 ರು. ಆಗಿದೆ.
ಉದ್ಯಮಿ ರಾಯ್ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಸರ್ಕಾರ ನಿರ್ಧಾರ, ಕಾರಣವೇನು?