Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ; ಪ್ರತಿ ವ್ಯಕ್ತಿ ವರ್ಷಕ್ಕೆ 117 ಗಂಟೆ ವ್ಯರ್ಥ
ಕರ್ನಾಟಕಪ್ರಮುಖ

ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ; ಪ್ರತಿ ವ್ಯಕ್ತಿ ವರ್ಷಕ್ಕೆ 117 ಗಂಟೆ ವ್ಯರ್ಥ

Share
2 Min Read
SHARE

https://youtube.com/shorts/vtmMY3C33B4?si=6NGHSVR8AcxO6HfD

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಮತ್ತೊಂದು ಆಘಾತಕಾರಿ ವರದಿ ಬಂದಿದೆ.

ಕೇಂದ್ರ ಸರ್ಕಾರವು ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ವಿಶೇಷ ಉಲ್ಲೇಖ ಮಾಡಲಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮೂಲಸೌಕರ್ಯ ಕೊರತೆ ಹಾಗೂ ಜನಸಂಖ್ಯೆ ಹೆಚ್ಚಳವೂ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿದ್ದು, ಇದು ಉತ್ಪಾದಕತೆ, ಆರ್ಥಿಕ ಬೆಳವಣಿಗೆ ಹಾಗೂ ನಾಗರಿಕರ ಜೀವನಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದೀಗ ಕೇಂದ್ರ ಸರ್ಕಾರವು ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹವ್ಯಾಸಿ ಬರಹಗಾರ ಕೃಷ್ಣಭಟ್ ಅವರ ಅಭಿಪ್ರಾಯ ಇಲ್ಲಿದೆ.

ಕೇಂದ್ರದ ಆರ್ಥಿಕ ಸಮೀಕ್ಷೆ ವರದಿಯ ಮೇಲೆ ಕಣ್ಣಾಡಿಸಿದಾಗ ಕಂಡುಬಂದ ಕೆಲವು ಅಂಶಗಳು:
1. ಬೆಂಗಳೂರಿನ ಸರಾಸರಿ ಪ್ರತಿ ವ್ಯಕ್ತಿ ವರ್ಷಕ್ಕೆ 117 ತಾಸು ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಕಳೆಯುತ್ತಾರೆ.
2. ಟ್ರಾಫಿಕ್‌ನಿಂದಾಗಿ ಬೆಂಗಳೂರಿನ ಜನರ ಒಟ್ಟು 7.07 ಲಕ್ಷ ಪ್ರೊಡಕ್ಟಿವ್ ಗಂಟೆಗಳು ನಷ್ಟವಾಗುತ್ತಿವೆ. ಇದರ ವೆಚ್ಚ ಅಂದಾಜು 11.7 ಬಿಲಿಯನ್ ರೂಪಾಯಿ. ಅಂದರೆ, ಇವರು ಒಂದು ವೇಳೆ ಟ್ರಾಫಿಕ್‌ನಲ್ಲಿ ನಿಲ್ಲದೇ ಕೆಲಸ ಮಾಡಿರುತ್ತಿದ್ದರೆ ಇಷ್ಟು ಮೌಲ್ಯದ ಉತ್ಪನ್ನ ತಯಾರಿಸುತ್ತಿದ್ದರು.
3. ಬೆಂಗಳೂರು ಇಷ್ಟು ದೊಡ್ಡ ತಂತ್ರಜ್ಞಾನದ ಕೇಂದ್ರವಾದರೂ ದೆಹಲಿ ಹಾಗೂ ಮುಂಬೈಗೆ ಹೋಲಿಸಿದರೆ ಮೂಲಸೌಕರ್ಯದಲ್ಲಿ ಅಗತ್ಯವಿದ್ದಷ್ಟು ಹೂಡಿಕೆ ಮಾಡಲಿಲ್ಲ ಹಾಗೂ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನ ಮೇಲೆ ಹೆಚ್ಚು ಕೇಂದ್ರೀಕರಿಸಿವೆ.
4. ಗೃಹಲಕ್ಷ್ಮಿ ಸ್ಕೀಮ್‌ನಿಂದಾಗಿ ತಕ್ಷಣಕ್ಕೆ ಜನರಿಗೆ ಆರ್ಥಿಕ ನೆರವು ಸಿಗುತ್ತದೆಯಾದರೂ, ಅಗತ್ಯ ಮೂಲಸೌಕರ್ಯ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಕುಟುಂಬದ ಆದಾಯದ 11 ರಿಂದ 87 ಶೇ. ವರೆಗೆ ಸರ್ಕಾರ ಉಚಿತ ಹಣ ವಿತರಣೆ ಮಾಡುತ್ತಿದೆ.
5. ಸಂಬಳ ಹಾಗೂ ಸಬ್ಸಿಡಿಗಳನ್ನೆಲ್ಲ ಇತರೆ ವೆಚ್ಚಗಳ ಅಡಿಯಲ್ಲಿ ಸೇರಿಸಿದ್ದರಿಂದ ಆಯವ್ಯಯದಲ್ಲಿ ಪಾರದರ್ಶಕತೆ ಇಲ್ಲ.
6. ಆರೆಂಜ್ ಎಕಾನಮಿ ಬೆಳವಣಿಗೆಯಲ್ಲಿ ಅಡ್ಡಿ ಇದೆ. ಅಂದರೆ, ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸ್ಥಳವಿಲ್ಲ. ವಿದೇಶಿ ಕಲಾಕಾರರಿಗೆ ಹಣ ಪಾವತಿ ಮಾಡುವುದಕ್ಕೆ ವಿಪರೀತ ನಿರ್ಬಂಧಗಳಿವೆ.
7. ಎಥೆನಾಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಮುಸುಕಿನ ಜೋಳ ಬೆಳೆ ಹೆಚ್ಚಳವಾಗಿದ್ದು, ಇತರ ಬೆಳೆ ಕಡಿಮೆಯಾಗಿದೆ. ಇದರಿಂದ ರಾಜ್ಯದ ಆಹಾರ ಭದ್ರತೆಗೆ ಅಡ್ಡಿಯಾಗಿದೆ.
8. ನಗರದಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇದರಿಂದ, ಹೊಸ ಸಿಹಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ.

ಈಚೆಗೆ ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿತ್ತು. ನೆದರ್ಲೆಂಡ್ಸ್ ಮೂಲದ ಟಾಮ್‌ಟಾಮ್ ಎನ್ನುವ ಸಂಸ್ಥೆಯು ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ ವರದಿಯಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಉಲ್ಲೇಖ ಮಾಡಲಾಗಿತ್ತು.

ವೃಥಾ ಟೀಕೆ ಬೇಡ, ಚರ್ಚೆಗೆ ಬನ್ನಿ: ಉದ್ಯಮಿ ಮೋಹನ್ ದಾಸ್ ಪೈಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು

TAGGED:7 lakh hours wasted per yearTraffic problem for Bengaluru residents
Share This Article
Facebook Twitter Copy Link Print
Previous Article ವೃಥಾ ಟೀಕೆ ಬೇಡ, ಚರ್ಚೆಗೆ ಬನ್ನಿ: ಉದ್ಯಮಿ ಮೋಹನ್ ದಾಸ್ ಪೈಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು
Next Article ಮೇಯರ್ ಮನೆಯಲ್ಲಿ ಟನ್‌ಗಟ್ಟಲೆ ನಗದು ಪತ್ತೆ; ಹಣ ಎಣಿಸೋಕೆ ಆಗದೇ ತೂಕ ಮಾಡಿದ ಅಧಿಕಾರಿಗಳು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?