https://youtube.com/shorts/vtmMY3C33B4?si=6NGHSVR8AcxO6HfD
Subscribe ನ್ಯೂಸಿಕ್ಸ್ ಕನ್ನಡ
newsics.com
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಜಯ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಕೊನೆಗೂ ಗೆಲುವಿನ ಲಯ ಕಂಡುಕೊಂಡಿದೆ. ಇದು ನಾಯಕಿ ಸ್ಮೃತಿ ಮಂಧನಾ ಖುಷಿಗೂ ಕಾರಣವಾಗಿದೆ.
ಆರ್ಸಿಬಿ ಇನ್ಸೈಡರ್ ಕಾರ್ಯಕ್ರಮವನ್ನು ಮಿ.ನಾಗ್ಸ್ ಆಗಿ ನಡೆಸಿಕೊಡುವ ಡ್ಯಾನಿಷ್ ಸೇಠ್, ಯಪಿ ವಾರಿಯರ್ಸ್ ಪಂದ್ಯಕ್ಕೂ ಮುನ್ನ ಕನ್ನಡತಿ ಶ್ರೇಯಾಂಕಾ ಪಾಟೀಲ್ ಜೊತೆ ಹರಟೆ ನಡೆಸಿದ್ದರು. 5 ನಿಮಿಷದ ವಿಡಿಯೋ ಕೊನೆಯಲ್ಲಿ ಇಬ್ಬರೂ ಕೂಡ ಬಿಗ್ಬಾಸ್ ಸ್ಪರ್ಧಿ ಮಾಳು ನಿಪನಾಳ ಅವರ ಫೇಮಸ್ ಸಾಂಗ್ ‘ನಾ ಡ್ರೈವರಾ.. ನೀ ನನ ಲವರ್ರಾ..’ ಅನ್ನೋ ಹಾಡಿಗೆ ಕ್ರಿಕೆಟ್ ಪಿಚ್ ರೋಲರ್ನಲ್ಲಿ ಡಾನ್ಸ್ ಮಾಡಿದ್ದಾರೆ. ಇದನ್ನು ಆರ್ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಯಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಪ್ರ್ಯಾಕ್ಟೀಸ್ ಟೈಮ್ನಲ್ಲಿ ಮೈದಾನದಲ್ಲಿಯೇ ಮಿ.ನಾಗ್ಸ್ ಹಾಗೂ ಶ್ರೇಯಾಂಕಾ ಪಾಟೀಲ್ ಅವರ ಡಾನ್ಸ್ ನೋಡಿ ಸ್ಮೃತಿ ಮಂಧನಾ ಮನಸಾರೆ ನಕ್ಕಿದ್ದಾರೆ.
ಈ ಪೋಸ್ಟ್ ಹಂಚಿಕೊಂಡಿರುವ ಆರ್ಸಿಬಿ ಅಕೌಂಟ್ನಲ್ಲಿ ಹಲವರು ಸ್ಮೃತಿ ಮಂಧನಾರ ಮುಖದಲ್ಲಿ ಮತ್ತೆ ನಗು ನೋಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ. ಕೊನೆಗೂ ಸ್ಮೃತಿಯನ್ನು ನಗಿಸಲು ಆಕೆಯ ಆತ್ಮೀಯ ಗೆಳತಿ ಶ್ರೇಯಾಂಕಾ ಪಾಟೀಲ್ ಅವರೇ ಬರಬೇಕಾಯಿತು ಎಂದಿದ್ದಾರೆ
https://www.instagram.com/reel/DUCgmmGEwXW/?igsh=czg4anY3MHRxdG81
ಮೇಯರ್ ಮನೆಯಲ್ಲಿ ಟನ್ಗಟ್ಟಲೆ ನಗದು ಪತ್ತೆ; ಹಣ ಎಣಿಸೋಕೆ ಆಗದೇ ತೂಕ ಮಾಡಿದ ಅಧಿಕಾರಿಗಳು