Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Relationship/ Anusha Hegde ದಾಂಪತ್ಯ ಜೀವನ ಅಂತ್ಯಗೊಳಿಸಿದ ನಟಿ ಅನುಷಾ ಹೆಗಡೆ! ಐದು ವರ್ಷದ ಸಂಸಾರಕ್ಕೆ ವಿದಾಯ
ಕರ್ನಾಟಕದೇಶಪ್ರಮುಖಮನರಂಜನೆ

Relationship/ Anusha Hegde ದಾಂಪತ್ಯ ಜೀವನ ಅಂತ್ಯಗೊಳಿಸಿದ ನಟಿ ಅನುಷಾ ಹೆಗಡೆ! ಐದು ವರ್ಷದ ಸಂಸಾರಕ್ಕೆ ವಿದಾಯ

Share
2 Min Read
SHARE

https://youtube.com/shorts/gtZudXyWr4w?si=M1ZsLYs2SqjhXrAv

Subscribe ನ್ಯೂಸಿಕ್ಸ್ ಕನ್ನಡ

newsics.com

ಈ ವರ್ಷಾರಂಭದಲ್ಲಿಯೇ ಹಿಂದಿ ಕಿರುತೆರೆಯ ಚೆಲುವೆ ಮಹಿ ವಿಜ್ ಅವರ 15 ವರ್ಷದ ದಾಂಪತ್ಯ ಜೀವನ ಮುರಿದುಬಿದ್ದಿದೆ.

ಮಲಯಾಳಂನ ನಟ ಮನು ವರ್ಮಾ ಅವರ 25 ವರ್ಷದ ಸಾಂಸಾರಿಕ ಜೀವನ ಕೂಡ ಮುಕ್ತಾಯವಾಗಿದೆ. ಪಂಜಾಬಿ ನಟಿ ಮ್ಯಾಂಡಿ ಟಾಖರ್ ಅವರ ಸಾಂಸಾರಿಕ ಬದುಕು ಕೂಡ ಕೇವಲ ಎರಡೇ ವರ್ಷಕ್ಕೆ ಮುರಿದು ಬಿದ್ದಿದೆ. ಈಗ ಈ ಸಾಲಿಗೆ ಕಿರುತೆರೆ ನಟಿ ಅನುಷಾ ಹೆಗಡೆ ಕೂಡ ಸೇರಿಕೊಂಡಿದ್ದಾರೆ.

‘ರಾಧಾ ರಮಣ’ ಧಾರಾವಾಹಿ ಮೂಲಕ ಕರುನಾಡಿನೆಲ್ಲೆಡೆ ಮನೆಮಾತಾದ ಚೆಲುವೆ ಅನುಷಾ ಹೆಗಡೆ. ಕೇವಲ ಕನ್ನಡ ಮಾತ್ರವಲ್ಲ ತೆಲುಗಿನಲ್ಲಿ ಕೂಡ ಬೇಡಿಕೆ ಹೊಂದಿರುವ ಅನುಷಾ ‘ಸೂರ್ಯಕಾಂತಂ’, ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ಕೂಡ ಹಿಂದೆ ಕಾಣಿಸಿಕೊಂಡಿದ್ದಾರೆ. ಸದ್ಯ ‘ಅನುಪಲ್ಲವಿ’ ಧಾರಾವಾಹಿಯಲ್ಲಿ ಅನುಷಾ ಅಭಿನಯಿಸುತ್ತಿದ್ದಾರೆ.

ನಟಿ ಅನುಷಾ ಹೆಗಡೆಗೆ ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿ ಮಾಡುವ ಸಮಯದಲ್ಲಿ ತಮ್ಮ ಜತೆ ಅಭಿನಯಿಸುತ್ತಿದ್ದ ಪ್ರತಾಪ್ ಸಿಂಗ್ ಅವರ ಮೇಲೆ ಪ್ರೇಮಾಂಕುರವಾಗಿತ್ತು. ನಂತರ ನಮ್ಮದು ಲವ್ ಮ್ಯಾರೇಜ್ ಅಲ್ಲ. ಅರೆಂಜ್ ಮ್ಯಾರೇಜ್ ಎಂದು ಅನುಷಾ ಹೇಳಿದ್ದರಾದರೂ ಸದ್ಯ ಇವರ ಐದು ವರ್ಷಗಳ ದಾಂಪತ್ಯ ಜೀವನ ಈಗ ಅಧಿಕೃತವಾಗಿ ಅಂತ್ಯವಾಗಿದೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷಾ, ಎಲ್ಲರಿಗೂ ಗೊತ್ತಿರುವಂತೆ 2023ರಿಂದಲೇ ನನ್ನ ಬದುಕಿನಲ್ಲಿ ಏರಿಳಿತಗಳು ಆರಂಭವಾಗಿದ್ದವು. 2025ರಲ್ಲಿ ನಾವು ಔಪಚಾರಿಕವಾಗಿ ಮತ್ತು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದೇವೆ ಎಂದು ಹೇಳಿದ್ದಾರೆ. ನನ್ನ ಬದುಕಿನ ಈ ಅಧ್ಯಾಯ ಪರಸ್ಪರ ಗೌರವ ಮತ್ತು ತಿಳಿವಳಿಕೆಯೊಂದಿಗೆ ಮುಕ್ತಾಯಗೊಂಡಿದೆ ಎಂದು ಹೇಳಿರುವ ಅನುಷಾ ಹೆಗಡೆ, ನಾನು ಈಗ ನನ್ನ ವೃತ್ತಿ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

12 ಫೆಬ್ರವರಿ 2020ರಂದು ಹೈದರಾಬಾದ್‌ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಅನುಷಾ ಹೆಗಡೆ ಮತ್ತು ಪ್ರತಾಪ್ ಸಿಂಗ್ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಸತತ 5 ಗಂಟೆ ಕಾಲ ಮದುವೆ ಶಾಸ್ತ್ರ ನಡೆದಿತ್ತು. ಈ ಮದುವೆ ಹಲವರ ಹುಬ್ಬೇರಿಸಿತ್ತು.

ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆ ಸಮಾರಂಭಕ್ಕೆ ಹಲವರು ಆಗಮಿಸಿದ್ದರು. ಹೊಸ ಬದುಕಿಗೆ ಇಬ್ಬರು ಮುನ್ನುಡಿ ಬರೆದಿದ್ದರು. ಆದರೆ ಮದುವೆಯಾದ 3 ವರ್ಷದಲ್ಲಿಯೇ 2023ರಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿಬರಲು ಶುರುವಾಗಿತ್ತು. ಈ ಅಂತೆ ಕಂತೆಗಳಿಗೆ ಈಗ ಅನುಷಾ ಬ್ರೇಕ್ ಹಾಕಿದ್ದಾರೆ. ತಮ್ಮ ಪತಿಯಿಂದ ದೂರವಾಗಿ ವಿಚ್ಛೇದನ ಪಡೆದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಚಾರದಲ್ಲಿ ಜನರಿಗೆ ಹುಚ್ಚುತನ ಬೇಡ – ಕಾವ್ಯಾ ಹೀಗಂದಿದ್ಯಾಕೆ?

ಸಾವಿರಾರು ಕೋಟಿಗೆ ಒಡೆಯನಾಗಿರುವ ಚಿರಂಜೀವಿಯ ಒಂದು ದಿನದ ಖರ್ಚು ಎಷ್ಟು?

TAGGED:Actress Anusha Hegde ends her marriage! Says goodbye to a family of five years
Share This Article
Facebook Twitter Copy Link Print
Previous Article This baby goat is everyone’s fear ಊರವರ ನಿದ್ದೆಗೆಡಿಸಿ ಪ್ರಾಣಬಿಟ್ಟ ಮೇಕೆ ಮರಿ! ಹೆಚ್ಚಿದ ಗಾಬರಿ…
Next Article ವಾಯುಭಾರ ಕುಸಿತದ ಎಫೆಕ್ಟ್ ; ರಾಜ್ಯದಲ್ಲಿ ಹಲವೆಡೆ ಮಳೆ, ಚಳಿ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?