https://youtube.com/shorts/gtZudXyWr4w?si=eVv568Ju7qGEou9ದ
Subscribe ನ್ಯೂಸಿಕ್ಸ್ ಕನ್ನಡ
newsics.com
ಮೆಗಾಸ್ಟಾರ್ ಅಂದರೆ ತೆಲುಗು ಚಿತ್ರರಂಗದಲ್ಲಿ ಒಂದು ಬ್ರ್ಯಾಂಡ್. 70ರ ದಶಕದ ಅಂತ್ಯದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರಂಜೀವಿ ಇವತ್ತಿಗೂ ಟಾಲಿವುಡ್‌ನಲ್ಲಿ ನಂಬರ್ ಒನ್ ಹೀರೊ ಆಗಿ ಮಿಂಚುತ್ತಿದ್ದಾರೆ. ‘ಸ್ವಯಂ ಕೃಷಿ’ಯಿಂದ ಒಂದೊಂದೇ ಮೆಟ್ಟಿಲು ಏರಿ ಮುಂದೆ ಸೂಪರ್ ಸ್ಟಾರ್ ಆಗಿ ಬೆಳೆದರು. ತಮ್ಮದೇ ವಿಭಿನ್ನ ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿದ್ದಾರೆ.
ಟಾಲಿವುಡ್‌ನಲ್ಲಿ ಮೆಗಾ ಸಾಮ್ರಾಜ್ಯವನ್ನೇ ಕಟ್ಟಿದ ಈ ಹೀರೋ, ಯಾರಿಗೂ ತಿಳಿಯದಂತೆ ಸಾಕಷ್ಟು ದಾನಗಳನ್ನೂ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಅವರ ಈ ಗುಣದ ಬಗ್ಗೆ ಆಪ್ತರೊಬ್ಬರು ಇತ್ತೀಚೆಗೆ ಕೆಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಚಿರಂಜೀವಿ ಮನೆಯ ದಿನದ ಖರ್ಚು 1-2 ಲಕ್ಷವಲ್ಲ, ಬರೋಬ್ಬರಿ 25 ಲಕ್ಷ! ಆದರೆ ಇದು ಅವರ ಸ್ವಂತಕ್ಕಲ್ಲ, ಬದಲಿಗೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಮಾಡುವ ಸಹಾಯಕ್ಕಾಗಿ ಖರ್ಚಾಗುವ ಹಣವಂತೆ.
ಕಳೆದ 28 ವರ್ಷಗಳಿಂದ ಚಿರಂಜೀವಿ ದಿನಕ್ಕೆ 25 ಲಕ್ಷದಷ್ಟು ಹಣವನ್ನು ವೈದ್ಯಕೀಯ ಸಹಾಯ, ಶಿಕ್ಷಣ, ದಾನಗಳಿಗೆ ವಿನಿಯೋಗಿಸುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲೂ ಹೇಳಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರ ಆಪ್ತರು.
ಜನವರಿ 12 ರಂದು ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ‘ಮನ ಶಂಕರವರ ಪ್ರಸಾದ್ ಗರು’ ಮೊದಲ ದಿನವೇ 84 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಸದ್ಯ ‘ವಿಶ್ವಂಭರ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ, ಇದರ ನಂತರ ನಿರ್ದೇಶಕ ಬಾಬಿ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ.
https://www.newsics.com/2026/01/26/yuzvendra-chahal-appeared-with-former-bigg-boss-contestant/