https://youtube.com/shorts/gtZudXyWr4w?si=M1ZsLYs2SqjhXrAv
Subscribe ನ್ಯೂಸಿಕ್ಸ್ ಕನ್ನಡ
newsics.com
ಮಂಡ್ಯ: ಅವತ್ತು ಅದೊಂದು ಆಕೃತಿ ಊರಿನ ಜನರ ತಲೆಕೆಡಿಸಿತ್ತು. ಜನರು ಅದೊಂದೇ ಜಾಗದಲ್ಲಿ ಅಚ್ಚರಿಯಿಂದ ನೋಡ್ತಾ ಉಳಿದುಬಿಟ್ಟಿದ್ದರು. ಹುಟ್ಟಿದ ಆ ವಿಲಕ್ಷಣ ಕೂಸು ಬದುಕಲಿಲ್ಲವಾದರೂ ಎಲ್ಲರ ಎದೆಯಲ್ಲೂ ಢವಢವ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಇದು ಮೇಕೆ ಮರಿ ಹುಟ್ಟಿಸಿದ ಆತಂಕ.
ಅದು ಆಗ ತಾನೇ ಹುಟ್ಟಿದ ಮೇಕೆ ಮರಿ. ಈ ಮೇಕೆ ಮರಿ ಕಂಡ ಮನೆ ಮಾಲೀಕ ಒಂದು ಕ್ಷಣ ದಿಗ್ಭ್ರಾಂತನಾಗಿದ್ದ. ಅದಕ್ಕೆ ಕಾರಣ ಆ ಮೇಕೆ ಮರಿ ಹಂದಿಯ ಮುಖ ಹೋಲುವಂತಿತ್ತು. ಈ ದೃಶ್ಯ ಕಂಡ ಆ ಮೇಕೆ ಮಾಲೀಕ, ಇಡೀ ಗ್ರಾಮದವರನ್ನು ಕರೆದು ಅಚ್ಚರಿಯ ಬಗ್ಗೆ ತಿಳಿಸಿದ್ದಾನೆ.

ಇಂತಹದ್ದೊಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು, ಸಕ್ಕರೆನಾಡು ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಗ್ರಾಮ. ಈ ದ್ಯಾಪಸಂದ್ರ ಗ್ರಾಮದ ರೈತ ಹುಚ್ಚಪ್ಪ ಎಂಬುವರಿಗೆ ಸೇರಿದ ಮೇಕೆಯೊಂದು ತನ್ನ ಮರಿಗೆ ಜನ್ಮ ನೀಡಿದೆ.
ಆದರೆ ಈ ಮೇಕೆಯ ಹೊಟ್ಟೆಯಿಂದ ಹೊರಬಂದಿದ್ದು, ಮೇಕೆ ಮರಿಯೋ ಅಥವಾ ಹಂದಿ ಮರಿಯೋ ಎಂದು ರೈತ ಹುಚ್ಚಪ್ಪ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದರು. ಯಾಕೆಂದರೆ ಆಗತಾನೇ ಜನಿಸಿದ ಮೇಕೆ ಮರಿ ಹಂದಿ ಮುಖ ಹೋಲುವ ರೀತಿ ಕಾಣಿಸಿಕೊಂಡಿದೆ.
ಇನ್ನು ಈ ರೀತಿ ವಿಚಿತ್ರ ಮೇಕೆ ಮರಿ ನೋಡ್ತಿದ್ದಂತೆ ರೈತ ಹುಚ್ಚಪ್ಪ ಗಾಬರಿಯಾಗಿ ಊರಿನ ಜನಕ್ಕೆ ಮಾಹಿತಿ ನೀಡಿದ್ದ.
ವಿಚಾರ ಗೊತ್ತಾಗ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಅಚ್ಚರಿಯ ಮೇಕೆ ಮರಿ ನೋಡಲು ದೌಡಾಯಿಸಿದ್ದರು. ಇದಾದ ಬಳಿಕ ಕೆಲ ಹೊತ್ತಿನಲ್ಲೇ ವಿಚಿತ್ರ ಮೇಕೆ ಮರಿ ಸಾವನ್ನಪ್ಪಿದ್ದು, ರೈತ ಹುಚ್ಚಪ್ಪ ತಮ್ಮ ಜಮೀನಿನಲ್ಲೇ ವಿಚಿತ್ರ ಮೇಕೆ ಮರಿಯನ್ನು ಮಣ್ಣು ಮಾಡಿದ್ದಾರೆ.
ಹೈಡ್ರೋಸೆಫಾಲಿಸ್ ಎಂಬ ಒಂದು ವಿಚಿತ್ರ ವಿಲಕ್ಷಣವಾದ ಕಾಯಿಲೆ ಮೆದುಳಿನಲ್ಲಿ ನೀರು ತುಂಬಿ ತಲೆ ಊದಿಕೊಳ್ಳುವಂತೆ ಮಾಡಿ ಕುರಿಮರಿಗಳು ಹೀಗೆ ಹುಟ್ಟಲು ಕಾರಣವಾಗುತ್ತದೆ. ಹೀಗೆ ಹುಟ್ಟಿದ ಪ್ರಾಣಿಗಳು ಬದುಕೋದು ತೀರಾ ಕಷ್ಟ.