Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Bollywood actress’s outrage ವೇದಿಕೆ ಮೇಲೆಯೇ ನಟಿಯ ಸೊಂಟಕ್ಕೆ ಕೈ ಹಾಕಿ ಕಿರುಕುಳ ಕೊಟ್ಟಿದ್ದು ಯಾರು? ಮೌನಿ ರಾಯ್ ಹೇಳಿದ್ದೇನು?
ದೇಶಪ್ರಮುಖಮನರಂಜನೆ

Bollywood actress’s outrage ವೇದಿಕೆ ಮೇಲೆಯೇ ನಟಿಯ ಸೊಂಟಕ್ಕೆ ಕೈ ಹಾಕಿ ಕಿರುಕುಳ ಕೊಟ್ಟಿದ್ದು ಯಾರು? ಮೌನಿ ರಾಯ್ ಹೇಳಿದ್ದೇನು?

Share
2 Min Read
SHARE

https://youtube.com/shorts/qpCJajqGxrE?si=vJgoarkrMD0AAjgU

Subscribe ನ್ಯೂಸಿಕ್ಸ್ ಕನ್ನಡ

newsics.com
ವೇದಿಕೆ ಮೇಲೆಯೇ ಬಾಲಿವುಡ್ ನಟಿ ಮೌನಿ ರಾಯ್‌ ಸೊಂಟಕ್ಕೆ‌ ಕೈ ಹಾಕಿ ಕಿರುಕುಳ ಕೊಟ್ಟ ಘಟನೆ ನಡೆದಿದೆ.

ಈ ಕುರಿತು ಸ್ವತಃ ಮೌನಿ ರಾಯ್ ಅವರೇ ನೋವು ತೋಡಿಕೊಂಡಿದ್ದಾರೆ.

ಕರ್ನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌನಿ ರಾಯ್ ಪರ್ಫಾರ್ಮೆನ್ಸ್ ಆಯೋಜನೆ ಮಾಡಲಾಗಿತ್ತು. ತಮ್ಮ ಪರ್ಫಾರ್ಮೆನ್ಸ್ ನಡುವೆ ನಡೆದ ಕಿರುಕುಳ ಘಟನೆ ಕುರಿತು ಮೌನಿ ರಾಯ್ ಹೇಳಿಕೊಂಡಿದ್ದಾರೆ.

ಕರ್ನಲ್ ಕಾರ್ಯಕ್ರಮದ ವೇದಿಕೆಯಲ್ಲಿರುವಾಗ ಅತಿಥಿಗಳ ನಡವಳಿಕೆ ನನಗೆ ಆಘಾತ ತಂದಿತ್ತು. ಕಾರಣ ಇಬ್ಬರು ಹಿರಿಯ ವ್ಯಕ್ತಿಗಳು, ಅವರ ವಯಸ್ಸು ಅಜ್ಜಂದಿರ ವಯಸ್ಸು. ವೇದಿಕೆ ಬಳಿ ಬಂದು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ.

ಹಿರಿಯರಿದ್ದಾರೆ ಎಂದು ಫೋಟೋ ಕ್ಲಿಕ್ ಮಾಡಲು ಅವಕಾಶ ನೀಡಿದ್ದೆ. ಆದರೆ ಇಬ್ಬರು ನನ್ನ ಸೊಂಟಕ್ಕೆ ಕೈ ಹಾಕಿದ್ದಾರೆ. ಅವರ ನಡವಳಿಕೆ ಅಸಭ್ಯವಾಗಿತ್ತು ಎಂದು ಮೌನಿ ರಾಯ್ ನೋವು ತೋಡಿಕೊಂಡಿದ್ದಾರೆ.


ಇಬ್ಬರು ಹಿರಿಯ ವ್ಯಕ್ತಿಗಳು ಏಕಾಏಕಿ ಸೊಂಟಕ್ಕೆ ಕೈ ಹಾಕಿ ಫೋಟೋ ಕ್ಲಿಕ್ಕಿಸಲು ನಿಂತಿದ್ದಾರೆ. ಫೋಟೋ ನೆಪದಲ್ಲಿ ಅವರ ವರ್ತನೆ ಅಸಹ್ಯವಾಗಿತ್ತು. ತಕ್ಷಣ ನಾನು, ಸರ್ ದಯವಿಟ್ಟು ಕೈ ತೆಗೆಯಿರಿ ಎಂದು ಸೂಚಿಸಿದ್ದೆ. ಇದು ಅವರಿಗೆ ಇಷ್ಟವಾಗಲಿಲ್ಲ. ಗರಂ ಆದರು. ಬಳಿಕ ಕೋಪದಿಂದ ವರ್ತಿಸಿದರು ಎಂದು ಮೌನಿ ರಾಯ್ ಘಟನೆ ವಿವರಿಸಿದ್ದಾರೆ.
ಕರ್ನಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವರು ಇಡೀ ಕಾರ್ಯಕ್ರಮದ ಗೌರವ ಹಾಳು ಮಾಡಿದ್ದಾರೆ. ನಾನು ವೇದಿಕೆ ಮೇಲೆ ಬಂದಾಗ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಪುರುಷರು ಅಸಭ್ಯವಾಗಿ ಸನ್ನೆ ಮಾಡಿದ್ದಾರೆ. ಜತೆಗೆ ಕೆಟ್ಟ ಕಮೆಂಟ್ ಪಾಸ್ ಮಾಡಿದ್ದಾರೆ. ಈ ವೇಳೆ ಸಭ್ಯತೆ ಮೀರದಂತೆ ಸೂಚನೆ ನೀಡಿದ್ದೆ. ಕೆಲ ಹೊತ್ತಿನ ಬಳಿಕ ಸುಖಾಸುಮ್ಮನೆ ಗುಲಾಬಿ ಹೂವು ಎಸೆದು ಕೆಟ್ಟದಾಗಿ ನಗಲು ಆರಂಭಿಸಿದರು ಎಂದು ಮೌನಿ ರಾಯ್ ಹೇಳಿದ್ದಾರೆ.


ಕಾರ್ಯಕ್ರಮ ಮುಗಿಸಿ ವೇದಿಕೆಯ ಹಿಂಭಾಗಕ್ಕೆ ತೆರಳಿದಾಗ ಅಲ್ಲಿಗೂ ಕೆಲವರು ಬಂದಿದ್ದಾರೆ. ಅವರ ವರ್ತನೆಗಳು ಸರಿಯಾಗಿರಲಿಲ್ಲ. ಆದರೆ ಆಯೋಜಕರು ಅವರನ್ನು ತಡೆದು ರಕ್ಷಣೆ ನೀಡಿದರು. ಕಳೆದ ಹಲವು ವರ್ಷಗಳಿಂದ ಕಾರ್ಯಕ್ರಮ ನೀಡುತ್ತಿದ್ದೇನೆ. ನನಗೇ ಈ ರೀತಿಯ ಅನುಭವವಾದರೆ, ಹೊಸ ಯುವತಿಯರು, ಕಲಾವಿದರು ಪರ್ಫಾರ್ಮೆನ್ಸ್ ನೀಡಲು ಬಂದಾಗ ಅವರ ಪರಿಸ್ಥಿತಿ ಏನು? ಇದು ಆತಂಕ ತರುತ್ತಿದೆ ಎಂದು ಮೌನಿ ರಾಯ್ ಹೇಳಿದ್ದಾರೆ.
ನನಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ತೀವ್ರ ಆಘಾತ ಹಾಗೂ ನೋವುಂಟು ಮಾಡಿದೆ. ಸುರಕ್ಷತೆಯ ಪ್ರಶ್ನೆಗಳು ಮೂಡುತ್ತಿವೆ. ಹೀಗಾಗಿ ಕಿರುಕುಳ ನೀಡಿದ ಹಾಗೂ ನೀಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೌನಿ ರಾಯ್ ಆಗ್ರಹಿಸಿದ್ದಾರೆ.

ನಾವು ಕಲಾವಿದರು ಕನಿಷ್ಢ ಗೌರವ ನಿರೀಕ್ಷಿಸುತ್ತೇವೆ. ಜತೆಗೆ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುತ್ತೇವೆ ಎಂದು ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಇದರ ಬಗ್ಗೆನೇ ಊರೆಲ್ಲಾ ಮಾತುಕತೆ

https://www.newsics.com/2026/01/24/radha-bhagwati-cried-on-stage-what-was-the-reason//
TAGGED:Who molested the actress on stage by putting his hand on her waist? What did Mouni Roy say?
Share This Article
Facebook Twitter Copy Link Print
Previous Article ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಗಿಬಿದ್ದ ಮಹಿಳೆಯರು; ಬೇಡಿಕೆ ಹಿಂದಿನ ಕಾರಣ?
Next Article Heavy avalanche ಭಾರೀ ಹಿಮಪಾತ: ಒಂದೇ ಕುಟುಂಬದ 9 ಮಂದಿ ಸಾ*ವು

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?