Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಗಿಬಿದ್ದ ಮಹಿಳೆಯರು; ಬೇಡಿಕೆ ಹಿಂದಿನ ಕಾರಣ?
ಕರ್ನಾಟಕಪ್ರಮುಖ

ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಗಿಬಿದ್ದ ಮಹಿಳೆಯರು; ಬೇಡಿಕೆ ಹಿಂದಿನ ಕಾರಣ?

Share
3 Min Read
SHARE

https://youtube.com/shorts/qpCJajqGxrE?si=vJgoarkrMD0AAjgU

Subscribe ನ್ಯೂಸಿಕ್ಸ್ ಕನ್ನಡ

newsics.com

ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕೆ.ಎಸ್.ಐ.ಸಿ ಘಟಕದ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿ ಸಿದ್ಧಗೊಳ್ಳುವ ಸೀರೆಗಳನ್ನು ಕಾರ್ಖಾನೆಯ ಮುಂಭಾಗದಲ್ಲಿರುವ ಸೇಲ್ಸ್ ಕೌಂಟರ್ನಲ್ಲಿ ಪ್ರತಿದಿನ ಮಾರಾಟ ಮಾಡಲಾಗುತ್ತದೆ. ಮೈಸೂರಿನ ಮೃಗಾಲಯದ ಬಳಿ, ಕಾಳಿದಾಸ ರಸ್ತೆ, ಯಾತ್ರಿ ನಿವಾಸ ಹಾಗೂ ಕೆ.ಆರ್ ವೃತದ ಬಳಿ ಸೇರಿದಂತೆ ನಾಲ್ಕು ಕಡೆ ಇದರ ಅಧಿಕೃತ ಮಾರಾಟ ಮಳಿಗೆಗಳಿವೆ. ಇದರ ಜೊತೆಗೆ ಬೆಂಗಳೂರು ಹಾಗೂ ಹೈದರಬಾದ್ಲ್ಲಿಯೂ ಅಧಿಕೃತ ಶೋರೂಂಗಳಿವೆ.
ಮೈಸೂರು ರೇಷ್ಮೆ ಸೀರೆಗಳು 25 ಸಾವಿರ ರೂಪಾಯಿಯಿಂದ ಆರಂಭವಾಗಿ 2,50,000 ರೂಪಾಯಿ ವರೆಗೆ ಲಭ್ಯವಿದೆ. ಚಿನ್ನದ ಜರಿ ಮತ್ತು ಮೃದು ಸ್ಪರ್ಶಕ್ಕೆ ಈ ಸೀರೆಗಳು ಹೆಸರುವಾಸಿಯಾಗಿದ್ದರಿಂದ ಮಹಿಳೆಯರಿಗೆ ಎಲ್ಲಿಲ್ಲಿದ ಒಲವು. ಭಾಗಶಃ ಜನರು ಆರಂಭಿಕ ಬೆಲೆಯ ಸೀರೆಗಳನ್ನು ಕೊಳ್ಳುವುದು ಹೆಚ್ಚು. ಹಾಗಾಗಿ ಬೇಡಿಕೆ ಬಂದಿದೆ. ದೇಶದ ವಿವಿಧೆಡೆಯಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು, ಸ್ಥಳೀಯರು ರೇಷ್ಮೆ ಸೀರೆ ಉತ್ಪಾದನೆ ಮಾಡುವ ಘಟಕಕ್ಕೆ ಭೇಟಿ ನೀಡಿ ಸೀರೆ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈ ಭಾರಿ ಜನಸಂದಣಿಯ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಅಗತ್ಯಕ್ಕೆ ತಕ್ಕಂತೆ ಬೇಡಿಕೆ ಇರುವಂತಹ ಸೀರೆಗಳ ಉತ್ಪಾದನೆ ಇಲ್ಲಿ ಆಗುತ್ತಿಲ್ಲ ಎಂದು ರೇಷ್ಮೆ ಸೀರೆ ಖರೀದಿಸಲು ಬಂದ ಮಹಿಳೆಯರು ಹೇಳ್ತಾರೆ.
ಟೋಕನ್ ಪದ್ಧತಿ ಜಾರಿ: ಅತಿಯಾದ ಬೇಡಿಕೆಯನ್ನು ನಿರ್ವಹಿಸಲು, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಟೋಕನ್ ನೀಡಲಾಗುತ್ತಿದೆ. ಮೊದಲು ಬಂದವರಿಗೆ ಹಾಗೂ ಕೇವಲ ಟೋಕನ್ ಪಡೆದವರಿಗೆ ಮಾತ್ರ ಮಳಿಗೆಯೊಳಗೆ ಪ್ರವೇಶ ನೀಡಲಾಗುತ್ತಿದೆ. ಅಲ್ಲದೆ, ಒಬ್ಬ ಗ್ರಾಹಕರಿಗೆ ಕೇವಲ ಒಂದು ಸೀರೆ ಮಾತ್ರ ಖರೀದಿಸಲು ಅವಕಾಶವಿದೆ. ಒಬ್ಬರಿಗೆ ಒಂದು ಸೀರೆಯಂತೆ ದಿನಕ್ಕೆ 50 ಸೀರೆಗಳಿಗೆ ಮಾತ್ರ ಟೋಕನ್ ನೀಡಲಾಗುತ್ತದೆ. ಶುಕ್ರವಾರ ಮತ್ತು ಶನಿವಾರ ಜನ ಹೆಚ್ಚಾಗಿ ಬರುತ್ತಿರುವುದರಿಂದ ಜನಸಂದಣಿ ಕಂಡು ಬರುತ್ತದೆ. ಹಾಗಾಗಿ ಟೋಕನ್ ಪಡೆಯಲೆಂದೇ ಜನರು ಸಿಲ್ಕ್ ಫ್ಯಾಕ್ಟರಿಯ ಗೇಟ್ನಲ್ಲಿ ಬೆಳಗ್ಗೆ 6 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುವಂತಹ ದೃಶ್ಯಗಳನ್ನು ಕಾಣಬಹುದು.
ಮೈಸೂರು ರೇಷ್ಮೆ ಸೀರೆಗಳನ್ನು ಪ್ರತಿವರ್ಷ 1 ಲಕ್ಷದ 10 ಸಾವಿರ ಸೀರೆಗಳನ್ನ ಉತ್ಪಾದಿಸಲಾಗುತ್ತದೆ. ಆರಂಭಿಕ ಬೆಲೆಯ ಜರಿ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಉತ್ಪಾದನೆ ಕಡಿಮೆ ಇದೆ. ನಿತ್ಯ ಮಾನಂದವಾಡಿ ರಸ್ತೆಯಲ್ಲಿರುವ ಉತ್ಪಾದನಾ ಘಟಕದ ಮುಂದೆ ಇರುವ ಶೋರೂಂನಲ್ಲಿ 50 ಸೀರೆಗಳ ಮಾರಾಟವಾಗುತ್ತವೆ. ವಾರಕ್ಕೆ ಒಂದು ಬಾರಿ ಬೆಂಗಳೂರು ಹಾಗೂ ಇತರ ಶೋರೂಂಗಳಿಗೆ ಸೀರೆಗಳನ್ನು ಪೂರೈಸಲಾಗುತ್ತದೆ ಎಂದು ಕೆ.ಎಸ್.ಐ.ಸಿ.ಯ ಪ್ರಧಾನ ವ್ಯವಸ್ಥಾಪಕ ಸಿದ್ದಲಿಂಗ ಪ್ರಸಾದ್ ಮಾಹಿತಿ ನೀಡಿದರು.
ಉತ್ಪಾದನೆ ಹೇಗೆ: ಮೈಸೂರು ರೇಷ್ಮೆ ಸೀರೆಯ ಉತ್ಪಾದನೆ ಹೇಗೆ ಎಂಬುವುದನ್ನು ಇಂದಿಗೂ ಗೌಪ್ಯತೆ ಕಾಪಾಡಿಕೊಂಡು ಬರಲಾಗಿದೆ. ರಾಮನಗರ ಹಾಗೂ ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳನ್ನು ತಂದು ಅದರಿಂದ ದಾರ ತೆಗೆದು ಮೈಸೂರಿನಲ್ಲಿರುವ ತಯಾರಿಕಾ ಘಟಕದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಿ, ಚಿನ್ನದ ಲೇಪಿದ ಜರಿ ಹಾಕಿ ಕಲಾತ್ಮಕ ವಿನ್ಯಾಸದಲ್ಲಿ ಸೀರೆಗಳನ್ನು ಉತ್ಪಾದಿಸಲಾಗುತ್ತದೆ. ಅಲ್ಲದೇ ಬೇರೆ ಮಳಿಗೆಯಲ್ಲಿ ಮಾರಾಟ ಮಾಡದೇ ತಾವೇ ತಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಾರೆ. ಈ ರೇಷ್ಮೆ ಸೀರೆಯ ಬೆಲೆ ಹೆಚ್ಚಾದರೂ ಯಾವತ್ತಿಗೂ ಈ ರೇಷ್ಮೆ ಸೀರೆ ಕೊಂಡರೆ ಅದರ ಬೆಲೆ ಕಡಿಮೆ ಆಗುವುದಿಲ್ಲ ಎಂಬ ಮಾತು ಇಂದಿಗೂ ಸಹ ಪ್ರಚಲಿತವಾಗಿದೆ
ಸಿಲ್ಕ್ ಸೀರೆ ಕೊಳ್ಳಲು ಮಹಿಳೆಯರು ಮುಗಿಬೀಳಲು ಕಾರಣ ಏನು ಎಂಬುದರ ಬಗ್ಗೆ ಪಾರಂಪರಿಕ ತಜ್ಞರಾದ ಪ್ರೊ. ರಂಗರಾಜು ವಿವರಿಸಿದ್ದಾರೆ. ಮೈಸೂರು ಸಿಲ್ಕ್ ಸೀರೆ ತಯಾರಿಕ ಕಾರ್ಖಾನೆಯನ್ನ ಆರಂಭಿಸಿದ್ದು ಮಹಾರಾಜರು. ಶತಮಾನ ಕಳೆದರು ಅದರ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅವುಗಳ ಗುಣಮಟ್ಟ. ಉತ್ತಮ ಗುಣಮಟ್ಟದ ರೇಷ್ಮೆಯಿಂದ ವಿಶಿಷ್ಟವಾಗಿ ತಯಾರಾಗುವ ಮೈಸೂರು ರೇಷ್ಮೆ ಸೀರೆ ಇವಾಗಿವೆ. ನೂರು ವರ್ಷ ಕಳೆದರೂ ಹರಿದು ಹೋಗುವುದಿಲ್ಲ, ಬಣ್ಣ ಮಾಸುವುದಿಲ್ಲ. ಅಲ್ಲದೇ ತುಂಬಾ ಹಗುರವಾಗಿರುತ್ತದೆ ಎಂದು ವಿವರಿಸಿದರು.

ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ?; ಗಿಲ್ಲಿ ನಟ ಹೇಳಿದ್ದೇನು?

TAGGED:Women flock to buy Mysore silk sarees; What's the reason behind the demand?
Share This Article
Facebook Twitter Copy Link Print
Previous Article ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ?; ಗಿಲ್ಲಿ ನಟ ಹೇಳಿದ್ದೇನು?
Next Article Bollywood actress’s outrage ವೇದಿಕೆ ಮೇಲೆಯೇ ನಟಿಯ ಸೊಂಟಕ್ಕೆ ಕೈ ಹಾಕಿ ಕಿರುಕುಳ ಕೊಟ್ಟಿದ್ದು ಯಾರು? ಮೌನಿ ರಾಯ್ ಹೇಳಿದ್ದೇನು?

Popular Posts

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?