Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಶಿಕ್ಷಕರಿಗೆ ಗುಡ್ ನ್ಯೂಸ್: 12 ವರ್ಷ ಸೇವೆ ಸಲ್ಲಿಸಿದರೆ ಇನ್ಮುಂದೆ ಹೆಡ್ ಮಾಸ್ಟರ್ ಹುದ್ದೆ
ಕರ್ನಾಟಕಪ್ರಮುಖ

ಶಿಕ್ಷಕರಿಗೆ ಗುಡ್ ನ್ಯೂಸ್: 12 ವರ್ಷ ಸೇವೆ ಸಲ್ಲಿಸಿದರೆ ಇನ್ಮುಂದೆ ಹೆಡ್ ಮಾಸ್ಟರ್ ಹುದ್ದೆ

Share
2 Min Read
SHARE

https://youtube.com/shorts/qpCJajqGxrE?si=vJgoarkrMD0AAjgU

Subscribe ನ್ಯೂಸಿಕ್ಸ್ ಕನ್ನಡ

newsics.com

ರಾಜ್ಯ ಸರ್ಕಾರವು ಶಿಕ್ಷಕರ ಬಡ್ತಿ ನಿಯಮಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಈ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಏರಲು ಸಮಾನ ಅವಕಾಶ ಕಲ್ಪಿಸಲು ಮುಂದಾಗಿದೆ.
ಈ ಸಂಬಂಧ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ದಶಕಗಳಷ್ಟು ಹಳೆಯದಾದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಜ್ಜಾಗಿದೆ.
ಸದ್ಯ ಇರುವ ನಿಯಮಗಳ ಪ್ರಕಾರ, ಕೇವಲ ಹಿರಿಯ ಶ್ರೇಣಿಯ ಶಿಕ್ಷಕರಿಗೆ ಅಥವಾ ನಿರ್ದಿಷ್ಟ ವೃಂದದವರಿಗೆ ಮಾತ್ರ ಮುಖ್ಯ ಶಿಕ್ಷಕರಾಗುವ ಅವಕಾಶವಿತ್ತು. ಇದರಿಂದಾಗಿ ಪದವೀಧರ ಪ್ರಾಥಮಿಕ ಶಿಕ್ಷಕರು (6ರಿಂದ 8ನೇ ತರಗತಿ ಬೋಧಿಸುವವರು) ಎಷ್ಟೇ ವರ್ಷ ಸೇವೆ ಸಲ್ಲಿಸಿದರೂ ಬಡ್ತಿ ಭಾಗ್ಯದಿಂದ ವಂಚಿತರಾಗುತ್ತಿದ್ದರು. ಈ ತಾರತಮ್ಯವನ್ನು ಹೋಗಲಾಡಿಸಲು ಮತ್ತು ಅರ್ಹ ಶಿಕ್ಷಕರಿಗೆ ನ್ಯಾಯ ಒದಗಿಸಲು ಶಿಕ್ಷಣ ಇಲಾಖೆ ಈ ಹೊಸ ಹೆಜ್ಜೆ ಇಟ್ಟಿದೆ.
ಹೊಸ ನಿಯಮದಲ್ಲೇನಿದೆ?
ಸರ್ಕಾರವು ‘ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು-2026’ ಎಂಬ ಹೆಸರಿನಲ್ಲಿ ಕರಡು ನಿಯಮಗಳನ್ನು ರೂಪಿಸಿದೆ. ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಉಭಯ ವೃಂದಗಳಿಗೂ ಬಡ್ತಿ: ಇನ್ನು ಮುಂದೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ (1ರಿಂದ 5ನೇ ತರಗತಿ) ಬೋಧಿಸುವ ‘ಪಿಎಸ್‌ಟಿ’ ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಬೋಧಿಸುವ ‘ಜಿಪಿಟಿ’ ಶಿಕ್ಷಕರು ಇಬ್ಬರೂ ಕೂಡ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾಗಿರುತ್ತಾರೆ.
2.ಬಡ್ತಿ ಅನುಪಾತ: ಬಡ್ತಿ ನೀಡುವಾಗ ಒಂದು ನಿರ್ದಿಷ್ಟ ಅನುಪಾತವನ್ನು ಪಾಲಿಸಲು ಸೂಚಿಸಲಾಗಿದೆ. ಖಾಲಿ ಇರುವ ಪ್ರತಿ ಮೂರು ಮುಖ್ಯ ಶಿಕ್ಷಕರ ಹುದ್ದೆಗಳಲ್ಲಿ, ಎರಡು ಹುದ್ದೆಗಳನ್ನು ಪಿಎಸ್‌ಟಿ ವೃಂದದ ಶಿಕ್ಷಕರಿಗೆ ಮತ್ತು ಒಂದು ಹುದ್ದೆಯನ್ನು ಜಿಪಿಟಿ ವೃಂದದ ಶಿಕ್ಷಕರಿಗೆ ನೀಡಲಾಗುತ್ತದೆ (2:1 ಅನುಪಾತ). ಇದುವರೆಗೂ ಜಿಪಿಟಿ ಶಿಕ್ಷಕರಿಗೆ ಪ್ರಮೋಷನ್ ಅವಕಾಶವೇ ಇಲ್ಲದಂತಾಗಿತ್ತು, ಈಗ ಅವರಿಗೆ ಶೇ.33 ರಷ್ಟು ಪಾಲು ಸಿಗಲಿದೆ.
3. 12 ವರ್ಷ ಸೇವೆ ಕಡ್ಡಾಯ: ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆಯಲು ಶಿಕ್ಷಕರು ಕನಿಷ್ಠ 12 ವರ್ಷಗಳ ಸೇವೆಯನ್ನು ಪೂರೈಸಿರಬೇಕು ಎಂಬುದು ಕಡ್ಡಾಯವಾಗಿದೆ. ಈ ನಿಯಮವು ಎರಡೂ ವೃಂದದ ಶಿಕ್ಷಕರಿಗೆ ಸಮಾನವಾಗಿ ಅನ್ವಯಿಸುತ್ತದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಈ ಹೊಸ ಕರಡು ನಿಯಮಗಳ ಬಗ್ಗೆ ಸಾರ್ವಜನಿಕರು, ಶಿಕ್ಷಕರು ಅಥವಾ ಶಿಕ್ಷಣ ತಜ್ಞರು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಹೊಂದಿದ್ದರೆ, ಅದನ್ನು ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ.

ಜನವರಿ 21, 2026 ರಿಂದ ಆಕ್ಷೇಪಣೆ ಸಲ್ಲಿಕೆ ಅವಧಿ ಆರಂಭವಾಗಿದೆ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ “ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು” ಇವರಿಗೆ ತಲುಪಿಸಬೇಕು.

ರಾಜ್ಯದಲ್ಲಿ 2016-17ನೇ ಸಾಲಿನಲ್ಲಿ 15,000ಕ್ಕೂ ಹೆಚ್ಚು ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಅಂದು ನೇಮಕವಾದ ಶಿಕ್ಷಕರಿಗೆ ಇಂದಿನವರೆಗೂ ಬಡ್ತಿ ನಿಯಮಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಅವರು ನಿವೃತ್ತಿಯವರೆಗೂ ಸಹಶಿಕ್ಷಕರಾಗಿಯೇ ಉಳಿಯುವ ಆತಂಕವಿತ್ತು. ಈಗ ಹೊಸ ನಿಯಮ ಜಾರಿಗೆ ಬಂದರೆ, ಈ ಶಿಕ್ಷಕರಿಗೆ ಸೇವಾ ಹಿರಿತನ ಮತ್ತು ಬಡ್ತಿಯ ಅವಕಾಶ ದೊರೆಯಲಿದೆ. ಇದು ಶಿಕ್ಷಕ ಸಮುದಾಯದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ.

ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ಇದ್ದ 2 ಕಂಟೇನರ್ ಗಳು ಹೈಜಾಕ್

TAGGED:Good news for teachers: Headmaster post after 12 years of service
Share This Article
Facebook Twitter Copy Link Print
Previous Article ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ಇದ್ದ 2 ಕಂಟೇನರ್ ಗಳು ಹೈಜಾಕ್
Next Article ಹಾಸಿಗೆಗೆ ಪತಿಯನ್ನು ಕಟ್ಟಿಹಾಕಿದ ಪತ್ನಿ, ಅತ್ತೆ ಮಾಡಿದ್ದೇನು?; ವೈರಲ್ ವಿಡಿಯೋ ನೋಡಿ

Popular Posts

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

You Might Also Like

ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?