Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
3 ಕೋಟಿ ರೂ, ಹಣ ಬಂದ ತಕ್ಷಣ ಹೊಸ ಜೀವನದ ಬದಲಾವಣೆಯನ್ನು ಹರಿಸಿ ಹೆಂಡತಿಯನ್ನು ಬಿಟ್ಟು ಗಂಡನೊಬ್ಬ ತನ್ನ ತಂದೆಯ ಊರಿಗೆ ಹೋದ. ಆದರೆ, ಪಟ್ಟಣ್ಣದಲ್ಲಿ ಒಬ್ಬಂಟಿಯಾಗಿದ್ದ ಪತ್ನಿ ಕೆಲ ವರ್ಷಗಳ ಬಳಿಕ ಬಿಟ್ಟು ಹೋದ ಗಂಡನಿಗೆ ಜೀವನಪರ್ಯಂತ ನೆನಪಿಲ್ಲಿಟ್ಟುಕೊಳ್ಳಬೇಕಾದ ಪಾಠವೊಂದನ್ನು ಕಲಿಸಿದ್ದಾರೆ.
ಹಿಮಿ ಶರ್ಮಾ ಮತ್ತು ಅವರ ಎರಡು ವರ್ಷದ ಮಗನನ್ನು ಅವರ ಗಂಡ 3 ಕೋಟಿ ರೂಪಾಯಿ ಆಸ್ತಿಗಾಗಿ ಬಿಟ್ಟು ಹೋಗಿದ್ದರು. ಈ ಹಿಂದೆ ಹಿಮಿ ಅವರು ತಮ್ಮ ಜೀವನದ ನೋವಿನ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅವರ ಗಂಡನ ಈ ನಿರ್ಧಾರವು ಹಿಮಿ ಶರ್ಮಾ ಅವರ ಬದುಕನ್ನು ಒಂದು ದೊಡ್ಡ ಕಂದಕಕ್ಕೆ ತಳ್ಳಿತು ಅಂತ ಹೇಳಿಕೊಂಡಿದ್ದರು.
ಇದೀಗ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗೆ ಮಾತನಾಡಿದ ಹಿಮಿ ಶರ್ಮಾ ಅವರು 2005 ರಲ್ಲಿ ಎಂಬಿಎ ಓದುತ್ತಿರುವಾಗ ತನ್ನ ಗಂಡನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು ಅಂತ ನೆನಪಿಸಿಕೊಂಡರು. ಜಾತಿ ವ್ಯತ್ಯಾಸಗಳಿಂದಾಗಿ ಅವರ ಸಂಬಂಧವು ಎರಡೂ ಕುಟುಂಬಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಆದರೂ ಸಹ ದಂಪತಿಗಳು ಮದುವೆಯಾದರು.
ನಮ್ಮ ಮದುವೆಯ ನಂತರ ಮೂರು ವರ್ಷಗಳ ಕಾಲ, ನನ್ನ ಗಂಡ ನನ್ನ ಬಗ್ಗೆ ತುಂಬಾನೇ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಆದರೆ ನವೆಂಬರ್ 2010 ರಲ್ಲಿ ಹಿಮಿ ಅವರನ್ನು ಗಂಡ ಬಿಟ್ಟು ಹೋದಾಗ ಅವರ ಜೀವನವು ಒಂದು ಕ್ಷಣ ಕೊನೆ ಆಯ್ತೆ ಎಂಬ ಭಾವನೆ ಮೂಡಿತಂತೆ. ನನ್ನ ಗಂಡನ ತಾಯಿ ಹೆಂಡತಿ ಮತ್ತು ಮಗನನ್ನು ಆಯ್ಕೆ ಮಾಡಿಕೊಳ್ಳುತ್ತಿಯಾ ಅಥವಾ 3 ಕೋಟಿ ರೂಪಾಯಿ ಆಸ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿಯಾ ಅಂತ ಕೇಳಿದ್ದಕ್ಕೆ, ಹಣ ಮತ್ತು ಆಸ್ತಿಯನ್ನು ಆಯ್ಕೆ ಮಾಡಿಕೊಂಡರು, ಅಂತ ಅವರು ಹೇಳಿದರು.
ಎರಡು ವರ್ಷದ ಮಗುವಿನೊಂದಿಗೆ ಏಕಾಂಗಿಯಾಗಿ ಉಳಿದ ಹಿಮಿ ಶರ್ಮಾ, ಶಿಕ್ಷಕಿಯಾಗಿ ತಿಂಗಳಿಗೆ ಕೇವಲ 5,000 ರೂಪಾಯಿ ಸಂಬಳ ಸಿಗುವ ಕೆಲಸಕ್ಕೆ ಸೇರಿಕೊಂಡರು. ಯಾರದೂ ಸಪೋರ್ಟ್ ಇಲ್ಲದೆ, ಅವರು ಪೇಯಿಂಗ್ ಗೆಸ್ಟ್ ಆಗಿ ತೆರಳಿದರು. ‘ಮೊದಲಿಗೆ ನಾನು ಈ ಒಂದು ದಿನ ಮುಗಿದರೆ ಸಾಕು ಎಂಬಂತೆ ಬದುಕಲು ಶುರು ಮಾಡಿದೆ, ಎಂದರೆ ನನ್ನ ಮಗನಿಗೆ ಆಹಾರ ಸಿಕ್ಕರೆ ಸಾಕು ಮತ್ತು ಮನೆಯ ಬಿಲ್‌ಗಳನ್ನು ಪಾವತಿಸಲು ಪ್ರಯತ್ನಿಸಿದೆ.
ನನ್ನ ತಂದೆ ಪ್ರತಿ ತಿಂಗಳು 10,000 ರೂಪಾಯಿ ಬಾಡಿಗೆ ಪಾವತಿಸಲು ನನ್ನನ್ನು ಕೇಳಿದರು, ನನ್ನನ್ನು ಒಂದು ದೊಡ್ಡ ಹೊರೆಯಂತೆ ಅವರು ನೋಡಿದರು,’ ಅಂತ ಅವರು ಹೇಳಿಕೊಂಡರು. ಎಷ್ಟೋ ಸಲ ಮಗನ ಫೀಸ್ ಕಟ್ಟದೆ ಇರುವುದಕ್ಕೆ ಶಾಲೆಯವರು ಅವರನ್ನು ಕರೆದು ಹಣ ಕೇಳುತ್ತಿದ್ದರಂತೆ. ತೀವ್ರವಾದ ಹಣದ ತೊಂದರೆಗಳ ಹೊರತಾಗಿ, ಅವರು ಸಾಮಾಜಿಕ ಬಹಿಷ್ಕಾರವನ್ನೂ ಸಹ ಎದುರಿಸಿದರು.
ವ್ಯಾಪಕ ನಿರುತ್ಸಾಹದ ಹೊರತಾಗಿಯೂ ಅವರು ಕೆನಡಿಯನ್ ವೀಸಾಕ್ಕೆ ಅರ್ಜಿ ಸಲ್ಲಿಸಿದರು. 2019 ರಲ್ಲಿ, ಅವರು ಕೆನಡಾಕ್ಕೆ ತೆರಳಿದರು, ಒಂದು ತಿಂಗಳೊಳಗೆ ಅವರು ಕಾಲೇಜು ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ಯಾರ ಸಪೋರ್ಟ್ ಸಹ ಇಲ್ಲದೆ, ಹೊಸ ದೇಶದಲ್ಲಿ ಮೊದಲಿನಿಂದ ಪ್ರಾರಂಭಿಸಿ, ಅವರು ತಮ್ಮ ಜೀವನವನ್ನು ಹಂತ ಹಂತವಾಗಿ ಪುನರ್ನಿರ್ಮಿಸಿಕೊಂಡರು. ಇಂದು, ಅವರು 3 ಕೋಟಿ ರೂಪಾಯಿ ಮೌಲ್ಯದ ಸ್ವಂತ ಮನೆಯನ್ನು ಹೊಂದಿದ್ದಾರೆ.