Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health care 60 ವರ್ಷ ದಾಟಿದ್ಮೇಲೆ ಎಷ್ಟೊತ್ತಿಗೆ ಏಳೋದು ಬೆಸ್ಟ್?
ಆರೋಗ್ಯಲೈಫ್‌ಸ್ಟೈಲ್

Health care 60 ವರ್ಷ ದಾಟಿದ್ಮೇಲೆ ಎಷ್ಟೊತ್ತಿಗೆ ಏಳೋದು ಬೆಸ್ಟ್?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೊದಲೆಲ್ಲಾ ಬೆಳಗ್ಗೆ 8 ಗಂಟೆವರೆಗೂ ಆರಾಮವಾಗಿ ಮಲಗುತ್ತಿದ್ದವರಿಗೆ 60 ವರ್ಷದಾಟುತ್ತಿದ್ದಂತೆ ನಮ್ಮ ಲೈಫ್ ಸ್ಟೈಲ್ ನಲ್ಲಿ ಸಣ್ಣಸಣ್ಣ ಚೇಂಜ್‌ಗಳು ಆಗೋಕೆಶುರು ಆಗುತ್ತೆ. ಆದ್ರೆ ಇದು ನಿದ್ದೆಯ ಕಾಯಿಲೆ ಅಲ್ಲ , ಇದೊಂದು ನ್ಯಾಚುರಲ್ ಬದಲಾವಣೆ ಅಷ್ಟೇ .

ನಿದ್ದೆಯ ತಜ್ಞರು ಹೇಳೋ ಪ್ರಕಾರ, ವಯಸ್ಸಾದಂತೆ ನಮ್ಮ ಶರೀರದ ಆಂತರಿಕ ಗಡಿಯಾರ ಸ್ವಲ್ಪ ವೇಗವಾಗಿ ಓಡೋಕೆ ಶುರು ಮಾಡುತ್ತೆ. ಅದಕ್ಕೆ ನಮಗೆ ಸಂಜೆ ಬೇಗ ನಿದ್ದೆ ಬರುತ್ತೆ ಮತ್ತು ಬೆಳಗ್ಗೆ ಬೇಗ ಎಚ್ಚರ ಆಗುತ್ತೆ.
ವಯಸ್ಸಾದಂತೆ ನಮ್ಮ ದೇಹದಲ್ಲಿ ‘ಮೆಲಟೋನಿನ್’ ಅನ್ನೋ ಹಾರ್ಮೋನ್ ಬ್ಯಾಲೆನ್ಸ್ ಚೇಂಜ್ ಆಗುತ್ತೆ. ಇದು ನಿದ್ದೆ ಬರಲು ಹೆಲ್ಪ್ ಮಾಡೋ ಹಾರ್ಮೋನ್. ಇದು ಸಂಜೆ ಬೇಗ ಬಿಡುಗಡೆ ಆಗೋದ್ರಿಂದ ನಮಗೆ 9 ಅಥವಾ 10 ಗಂಟೆಗೇ ನಿದ್ದೆ ಬರೋಕೆ ಶುರು ಆಗುತ್ತೆ. ಹಾಗೆಯೇ ಬೆಳಗ್ಗೆ 5 ಗಂಟೆ ಹೊತ್ತಿಗೆ ಈ ಹಾರ್ಮೋನ್ ಪ್ರಮಾಣ ಕಮ್ಮಿ ಆಗುತ್ತೆ, ಆಗ ನಮಗೆ ತಾನಾಗಿಯೇ ಎಚ್ಚರ ಆಗುತ್ತೆ. ಇದನ್ನ ವಿಜ್ಞಾನಿಗಳು ‘ಸರ್ಕಾಡಿಯನ್ ರಿದಮ್’ ಶಿಫ್ಟ್ ಅಂತ ಕರೀತಾರೆ.

60 ರ ನಂತರ ನಮ್ಮ ನಿದ್ದೆ ಮೊದಲಿಗಿಂತ ಸ್ವಲ್ಪ ಕಡಿಮೆ ಆಗಿರುತ್ತೆ ಅಥವಾ ಗಾಢ ನಿದ್ದೆ ಮಾಡೋ ಸಮಯ ಕಡಿಮೆ ಆಗುತ್ತೆ. ಸಣ್ಣ ಸೌಂಡ್ ಕೇಳಿದ್ರೂ ಅಥವಾ ಬೆಳಗಿನ ಸ್ವಲ್ಪ ಬೆಳಕು ಕಂಡ್ರೂ ನಿದ್ದೆ ಹೋಗುತ್ತೆ. ಅಷ್ಟೇ ಅಲ್ಲದೆ, ವಯಸ್ಸಾದ ಮೇಲೆ ಕಾಡೋ ಕೀಲು ನೋವು ಅಥವಾ ರಾತ್ರಿ ಪದೇ ಪದೇ ಬಾತ್ ರೂಮ್‌ಗೆ ಹೋಗೋ ಅನಿವಾರ್ಯತೆ ಇರೋದ್ರಿಂದ ನಿದ್ದೆ ಮಧ್ಯೆ ಪದೇ ಪದೇ ಎಚ್ಚರವಾಗುತ್ತೆ. ಇದು ಆರೋಗ್ಯ ಕೆಟ್ಟಿದೆ ಅಂತಲ್ಲ, ಬದಲಾಗಿ ಶರೀರ ಬದಲಾಗುತ್ತಿದೆ ಅಂತ ಅರ್ಥ.

ಇಲ್ಲಿ ಅತಿ ಮುಖ್ಯವಾದ ವಿಷಯ ಅಂದ್ರೆ ನೀವು ಬೆಳಗ್ಗೆ ಎದ್ದಾಗ ಹೇಗೆ ಫೀಲ್ ಮಾಡ್ತೀರಾ ಅನ್ನೋದು. ಒಂದು ವೇಳೆ ನೀವು 5:30ಕ್ಕೆ ಎದ್ದಾಗ ನಿಮ್ಮ ಮೈಂಡ್ ಮತ್ತು ಬಾಡಿ ಫ್ರೆಶ್ ಆಗಿದ್ರೆ, ನೀವು ಆರಾಮವಾಗಿ ಎದ್ದು ನಿಮ್ಮ ಕೆಲಸ ಶುರು ಮಾಡಬಹುದು. ಆದ್ರೆ ಎದ್ದ ಮೇಲೆ ಇಡೀ ದಿನ ಸುಸ್ತು ಅನ್ನಿಸಿದ್ರೆ ಅಥವಾ ಯಾವುದರ ಮೇಲೂ ಗಮನ ಕೊಡೋಕೆ ಆಗ್ತಿಲ್ಲ ಅಂದ್ರೆ ನಿಮ್ಮ ನಿದ್ದೆ ಸಾಲುತ್ತಿಲ್ಲ ಅಂತ ಅರ್ಥ. ನಿದ್ದೆ ಬರದಿದ್ದರೂ ಕಷ್ಟಪಟ್ಟು ಹಾಸಿಗೆಯಲ್ಲೇ 20-30 ನಿಮಿಷಕ್ಕಿಂತ ಜಾಸ್ತಿ ಮಲಗೋದು ಒಳ್ಳೆಯದಲ್ಲ. ಆದರೆ ಕೆಲವರಿಗೆ ಅದು ಇನ್ನು ಟೆನ್ಶನ್ ಜಾಸ್ತಿ ಮಾಡುತ್ತೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗಿ: ವೀಕೆಂಡ್ ಅಲ್ವಾ ಅಂತ ಜಾಸ್ತಿ ಹೊತ್ತು ಮಲಗಬೇಡಿ. ಪ್ರತಿದಿನ ಒಂದೇ ಟೈಮ್‌ಗೆ ಮಲಗಿ ಎದ್ದೇಳಿ.
ಬಿಸಿಲಿನಮಹತ್ವ: ಎದ್ದ ಒಂದು ಗಂಟೆಯೊಳಗೆ ಸ್ವಲ್ಪ ಹೊತ್ತು ಸೂರ್ಯನ ಎಳೆ ಬಿಸಿಲಿಗೆ ಮೈ ಒಡ್ಡಿ. ಇದು ನಿಮ್ಮ ದೇಹದ ಆಂತರಿಕ ಗಡಿಯಾರವನ್ನ ಸರಿಯಾಗಿ ಇರಿಸುತ್ತೆ.
ಮಧ್ಯಾಹ್ನದನಿದ್ದೆ: ಮಧ್ಯಾಹ್ನ ಮಲಗೋ ಹವ್ಯಾಸ ಇದ್ರೆ ಅದು ಬರೀ 20 ರಿಂದ 30 ನಿಮಿಷ ಇರಲಿ. 3 ಗಂಟೆ ನಂತರ ಮಲಗಬೇಡಿ.
ಫೋನ್ದೂರವಿಡಿ: ಮಲಗುವ ಕನಿಷ್ಠ ಒಂದು ಗಂಟೆ ಮುಂಚೆ ಮೊಬೈಲ್ ಫೋನ್ ಪಕ್ಕಕ್ಕಿಡಿ. ಕತ್ತಲೆ ಮತ್ತು ಶಾಂತ ವಾತಾವರಣ ನಿದ್ದೆಗೆ ತುಂಬಾ ಹೆಲ್ಪ್ ಮಾಡುತ್ತೆ.
ಸರಿಯಾದ ಊಟ ಮತ್ತು ಸಣ್ಣ ಪುಟ್ಟ ವ್ಯಾಯಾಮ ಇದ್ರೆ ನೀವು ಸದಾ ಆಕ್ಟಿವ್ ಆಗಿರಬಹುದು. ನೆನಪಿಡಿ, ನಿದ್ದೆಯೇ ಅಸಲಿ ಗೆಲುವು. ಚೆನ್ನಾಗಿ ನಿದ್ದೆ ಮಾಡಿ, ಖುಷಿಯಾಗಿ ಇರಿ.

ಇನ್ಮುಂದೆ ಪಿಯುಸಿ ಮಕ್ಕಳ ಸ್ಟಡಿ ಹಾಲಿಡೇಗೆ ಬ್ರೇಕ್; ಕಾರಣವೇನು?

TAGGED:What is the best time to get up after turning 60?
Share This Article
Facebook Twitter Copy Link Print
Previous Article ಇನ್ಮುಂದೆ ಪಿಯುಸಿ ಮಕ್ಕಳ ಸ್ಟಡಿ ಹಾಲಿಡೇಗೆ ಬ್ರೇಕ್; ಕಾರಣವೇನು?
Next Article 2 ಗಂಟೆ ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡ ಜೋಡಿ; ಆಮೇಲೆನಾಯ್ತು? ; ವೈರಲ್ ವಿಡಿಯೋ ನೋಡಿ

Popular Posts

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?