Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆ ಧಮ್ಕಿ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಮೂರು ದಿನವಾದರೂ ಪತ್ತೆಯಾಗಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ನಿರೀಕ್ಷಣಾ ಜಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿರುವ ಕೋರ್ಟ್, ವಿಚಾರಣೆಯನ್ನ ಜನವರಿ 22ಕ್ಕೆ ಮುಂದೂಡಿದೆ
ಧಮ್ಕಿ ಕೇಸ್ನಿಂದ ರಾಜೀವ್ಗೌಡರ ಅಸಲಿತ್ತು ಬಯಲಾಗುತ್ತಿದ್ದಂತೆ ಒಂದೊಂದೇ ಅಕ್ರಮಗಳು ಕೂಡ ಹೊರಬರುತ್ತಿವೆ. ಇವರ ವಿರುದ್ಧ 15 ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿರುವ 15 ಕೋಟಿ ರೂ ಮೌಲ್ಯದ 1 ಎಕರೆ 18 ಗುಂಟೆ ಭೂಮಿ ರಾಜೀವ್ ಗೌಡ ಕಬಳಿಸಿದ್ದಾರೆ ಅಂತಾ ಆಶಾಲತಾ ಅನ್ನೋರು ಆರೋಪಿಸಿದ್ದಾರೆ.
ರಾಜೀವ್ಗೌಡರ ಬಂಧನಕ್ಕೆ ಮೂರು ತಂಡ ಮಾಡಿಕೊಂಡಿರುವ ಪೊಲೀಸರು, ಬೆಂಗಳೂರಿನಲ್ಲಿ ಸಿಸಿಟಿವಿ ಆಧರಿಸಿ ಶೋಧ ನಡೆಸಿದ್ದಾರೆ. ರಾಜೀವ್ಗೌಡರನ್ನ ಬಂಧಿಸದಂತೆ ರಾಜ್ಯದ ಪ್ರಭಾವಿ ಮಂತ್ರಿ ಪೊಲೀಸರ ಮೇಲೆ ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.