Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರೇಣುಕಾಸ್ವಾಮಿ ಕೊಲೆ ಕೇಸ್ ಎ-1 ಅಂಡ್ ಎ-2 ಆಗಿರೋ ಪವಿತ್ರಾ ಗೌಡ ಮತ್ತು ದರ್ಶನ್ರ ಜೈಲು ಪರದಾಟ ಮುಂದುವರೆದಿದೆ. ದಿಂಬು, ಹಾಸಿಗೆಗೋಸ್ಕರ ದರ್ಶನ್ ಕೋರ್ಟ್ ಕಟಕಟೆಯಲ್ಲಿ ಪದೇ ಪದೇ ವಿನಂತಿ ಮಾಡಿದ್ದು ಗೊತ್ತೇ ಇದೆ. ಚಳಿ ತಡೆಯೋದಕ್ಕೆ ಆಗ್ತಿಲ್ಲ ಮನೆಯಿಂದ ತಂದ ಕಂಬಳಿ ಕೊಡಿ ಅಂತ ದರ್ಶನ್ ವಕೀಲರ ಮೂಲಕ ಪದೇ ಪದೇ ಮನವಿ ಮಾಡಿಸಿದ್ರು. ಇತ್ತ ಪರಪ್ಪನ ಅಗ್ರಹಾರ ಮಹಿಳಾ ಬ್ಯಾರಕ್‌ನಲ್ಲಿರೋ ಪವಿತ್ರಾದು ಕೂಡ ಅದೇ ಕಥೆ ಆಗಿದೆ. ಈ ಹಿಂದೆ ಪವಿತ್ರಾ ಪರ ವಕೀಲರು ಪವಿತ್ರಾಗೆ ಮನೆಯೂಟ ಕೊಡಿಸಿ ಅಂತ ಮನವಿ ಮಾಡಿದ್ರು. ಅದಕ್ಕೆ ಕೋರ್ಟ್ ಅಸ್ತು ಅಂದಿತ್ತು. ಆದ್ರೆ ಇದೂವರೆಗೂ ಪವಿತ್ರಾಗೆ ಮನೆಯೂಟ ದಕ್ಕಿಲ್ಲ.
ಕೋರ್ಟ್ ಅನುಮತಿ ಕೊಟ್ಟ ಮೇಲೆ ಪವಿತ್ರಾಗೆ ದಿನವೂ ಮನೆಯಿಂದ ಊಟ ಬರ್ತಾ ಇದೆ. ಆದ್ರೆ ಜೈಲು ಅಧಿಕಾರಿಗಳು ಇದೂವರೆಗೂ ಮನೆಯೂಟಕ್ಕೆ ಅನುಮತಿ ಕೊಡದ ಹಿನ್ನೆಲೆ ಪವಿತ್ರಾಗೆ ಜೈಲೂಟವೇ ಗತಿಯಾಗಿದೆ. ಮನೆ ಊಟ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಜೈಲಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆಗಳನ್ನ ಮಾಡಲಾಗಿದೆ. ಜೈಲು ಅಧಿಕಾರಿಗಳಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಜೈಲಿನಲ್ಲಿ ಒಬ್ಬರಿಗೆ ಮನೆಯೂಟ ಕೊಟ್ರೆ ಎಲ್ಲರೂ ಇದೇ ಆದೇಶ ತರಲು ಆರಂಭಿಸ್ತಾರೆ. ಮನೆಯಿಂದ ಬರುವ ಊಟ ಪರೀಕ್ಷೆ ಮಾಡಿ ಕೈದಿಗಳಿಗೆ ಕೊಡೋದು ದೊಡ್ಡ ಚಾಲೆಂಜ್ ಆಗುತ್ತೆ. ಜೈಲ್ಲಿನಲ್ಲಿ ಅಷ್ಟೊಂದು ಸಿಬ್ಬಂದಿ ಇಲ್ಲದ ಕಾರಣ ಯಾರಿಗೂ ಮನೆಯೂಟ ಬೇಡ ಅಂತ ಜೈಲಾಧಿಕಾರಿಗಳು ತೀರ್ಮಾನ ಮಾಡಿದ್ದಾರಂತೆ.
ಇತ್ತ ದರ್ಶನ್ ಪಾಡೂ ಅಷ್ಟೇ. ಮನೆಯಿಂದ ಕಳಿಸಿದ ಬ್ಲಾಂಕೆಟ್ ಬದಲು ಜೈಲಲ್ಲಿ ಎಲ್ಲರಿಗೂ ಕೊಡುವ ಬ್ಲಾಂಕೆಂಟ್ ಅನ್ನೇ ದಾಸನಿಗೆ ನೀಡಲಾಗಿದೆ.
Condom ಫ್ಯಾಕ್ಟರಿ ನಡೆಸ್ತಿರುವ Bigg Boss ಸ್ಪರ್ಧಿ; ಫ್ಯಾಕ್ಟರಿ ಹೇಗಿದೆ?