Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ. ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ,ಹೆಸರು ತೆಗೆಯುವುದಕ್ಕೆ ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವೆಬ್ ಸೈಟ್ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು
ಹೊಸ ಸದಸ್ಯರ ಸೇರ್ಪಡೆ
*ಪೋಟೋ ಬದಲಾವಣೆ
* ಹೆಸರು ಡಿಲೆಟ್
* ಅಂಗಡಿ. ನಂ. ಬದಲಾವಣೆ
* ಹೆಸರು ತಿದ್ದುಪಡಿ
* ಮುಖ್ಯಸ್ಥರ ಬದಲಾವಣೆ
ಅರ್ಜಿ ಸಲ್ಲಿಸಲು ದಾಖಲಾತಿಗಳು
1. ಸದಸ್ಯರ ಆಧಾರ ಕಾರ್ಡ್ ಕಡ್ಡಾಯ
2. ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ
3. ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ.
ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲು ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
ಮದುವೆ ಪ್ರಮಾಣ ಪತ್ರ
ಪೋಷಕರ ಪಡಿತರ ಚೀಟಿ ಅಗತ್ಯ.
ಪಡಿತರ ಚೀಟಿಗೆ ಮಗುವಿನ ಹೆಸರು ಸೇರ್ಪಡೆಗೆ ಈ ದಾಖಲೆಗಳು ಕಡ್ಡಾಯ
ಮಗುವಿನ ಜನನ ಪ್ರಮಾಣಪತ್ರ
ಹೆತ್ತವರ ಆಧಾರ್ ಕಾರ್ಡ್
ಆನ್ಲೈನ್ನಲ್ಲಿ ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಸೇರಿಸಲು, ನೀವು ನಿಮ್ಮ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಇದರ ನಂತರ ನೀವು ID ಅನ್ನು ರಚಿಸಬೇಕಾಗುತ್ತದೆ. ನಿಮ್ಮ ಐಡಿಯನ್ನು ಈಗಾಗಲೇ ರಚಿಸಿದ್ದರೆ ನೀವು ಲಾಗಿನ್ ಆಗಬೇಕು. ಇದರ ನಂತರ ನಿಮ್ಮ ಪಡಿತರ ಚೀಟಿಯ ವಿವರಗಳನ್ನು ನೀವು ನೋಡುತ್ತೀರಿ, ಅದರಲ್ಲಿ ನೀವು ಹೊಸ ಸದಸ್ಯರನ್ನು ಸೇರಿಸುವ ಆಯ್ಕೆಯನ್ನು ಪಡೆಯುತ್ತೀರಿ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ, ಇದರ ನಂತರ ನೀವು ಹೊಸ ಸದಸ್ಯರನ್ನು ಸೇರಿಸಲು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.