Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿ ಮತ್ತೊಂದು ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ದಿನಾಂಕ 15ನೇ ಜನವರಿ 2026 ರಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ ಅನಿಯಮಿತ ಪ್ರಯಾಣದ ಪಾಸ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು ನೀಡಲು ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು 1, 3 ಮತ್ತು 5 ದಿನಗಳ ಅನ್‌ಲಿಮಿಟೆಡ್ ಪಾಸ್‌ಗಳು ಕೇವಲ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಜನೆವರಿ 15 ರಿಂದ ನಿಮ್ಮ ಮೊಬೈಲ್ ಮೂಲಕವೇ ಈ ಪಾಸ್‌ಗಳನ್ನು ಪಡೆದು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಹೊಸ QR ಪಾಸ್‌ಗಳು 1 ದಿನ, 3 ದಿನ ಮತ್ತು 5 ದಿನಗಳ ಮಾನ್ಯತೆಯಲ್ಲಿ ಲಭ್ಯವಿವೆ. ಪ್ರಯಾಣಿಕರು ‘ನಮ್ಮ ಮೆಟ್ರೋ’ ಅಧಿಕೃತ ಮೊಬೈಲ್ ಆಪ್ ಮೂಲಕ ಈ ಪಾಸ್‌ಗಳನ್ನು ಖರೀದಿಸಬಹುದಾಗಿದೆ
ಠೇವಣಿ ಮುಕ್ತ: ಸ್ಮಾರ್ಟ್ ಕಾರ್ಡ್‌ಗಳಿಗೆ ಬೇಕಿದ್ದ ₹50 ಠೇವಣಿ ಮೊಬೈಲ್ ಪಾಸ್‌ಗಳಿಗೆ ಇರುವುದಿಲ್ಲ.
ಸಮಯದ ಉಳಿತಾಯ: ಕಾರ್ಡ್ ಖರೀದಿಸಲು ಅಥವಾ ರಿಚಾರ್ಜ್ ಮಾಡಲು ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ.
ತಂತ್ರಜ್ಞಾನದ ಬಳಕೆ: ಮೊಬೈಲ್‌ನಲ್ಲಿರುವ QR ಕೋಡ್ ಅನ್ನು ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ತಡೆರಹಿತವಾಗಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ಪ್ರಯಾಣಿಕರು ನಮ್ಮ ಮೆಟ್ರೋ ಅಧಿಕೃತ ಮೊಬೈಲ್ ಆಪ್ ಮೂಲಕ ಸುಲಭವಾಗಿ ಈ ಪಾಸ್‌ಗಳನ್ನು ಖರೀದಿಸಬಹುದು. ಶೀಘ್ರದಲ್ಲೇ ಪೇಟಿಎಂ, ಫೋನ್ ಪೇ ಮತ್ತು ವಾಟ್ಸಾಪ್ ಸೇರಿದಂತೆ ಇತರ ಪ್ರಮುಖ ಪಾವತಿ ಆಪ್‌ಗಳಲ್ಲೂ ಈ ಸೌಲಭ್ಯ ದೊರೆಯಲಿದೆ. ಟಿಕೆಟ್ ಕೌಂಟರ್‌ಗಳ ಮುಂದೆ ಸಾಲು ನಿಲ್ಲುವ ಕಿರಿಕಿರಿ ಇನ್ನು ಇರುವುದಿಲ್ಲ. ಎಎಫ್‌ಸಿ (AFC) ಗೇಟ್‌ಗಳಲ್ಲಿ ನಿಮ್ಮ ಮೊಬೈಲ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಪ್ರವೇಶ ಮತ್ತು ನಿರ್ಗಮನ ಸುಲಭವಾಗಲಿದೆ.
https://www.newsics.com/2026/01/14/student-taken-away-and-raped-on-the-pretext-of-giving-a-drop/