Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 11,151 ಉದ್ಯೋಗಿಗಳನ್ನು ಕಡಿತಗೊಳಿಸಿದೆ.ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಉದ್ಯೋಗಿಗಳ ಕಡಿತ ಪ್ರಕ್ರಿಯೆಯನ್ನು ಮುಂದುವರಿಸಿದೆ.
ಜನವರಿ 12 ರಂದು ಬಿಡುಗಡೆ ಮಾಡಲಾದ ಕಂಪನಿಯ ತ್ರೈಮಾಸಿಕ ವರದಿಯ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ 5,93,314 ಇದ್ದ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ, ಡಿಸೆಂಬರ್ ಅಂತ್ಯದ ವೇಳೆಗೆ 5,82,163ಕ್ಕೆ ಇಳಿಕೆಯಾಗಿದೆ.
ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕಂಪನಿಯು ‘ವರ್ಕ್‌ಫೋರ್ಸ್ ರಿಸ್ಟ್ರಕ್ಚರಿಂಗ್’ ಅಥವಾ ಉದ್ಯೋಗಿಗಳ ಪುನಾರಚನೆಯನ್ನು ನಡೆಸುತ್ತಿದೆ. ಉದ್ಯೋಗಿಗಳ ಮರುಹಂಚಿಕೆ ಮತ್ತು ವೆಚ್ಚ ಕಡಿತ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಈ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದರೂ, ಇದಕ್ಕಾಗಿ ಕಂಪನಿ ಮಾಡುತ್ತಿದ್ದ ವೆಚ್ಚದಲ್ಲಿ ಇಳಿಕೆ ಕಂಡುಬಂದಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಪುನಾರಚನಾ ವೆಚ್ಚವು ಶೇ. 77ರಷ್ಟು ಕಡಿಮೆಯಾಗಿ 253 ಕೋಟಿ ರೂ.ಗೆ ತಲುಪಿದೆ. ಇದು ಕಡಿತ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪುತ್ತಿರಬಹುದು ಎಂಬುದರ ಸೂಚನೆ ನೀಡಿದೆ.
https://www.newsics.com/2026/01/12/shikhar-dhawan-is-engaged-to-longtime-girlfriend-sophie-shine/