Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 23 ವರ್ಷಗಳ ನಂತರ ಒಟ್ಟಿಗೆ ಬಂದಿರುವ ಸಂಕ್ರಾಂತಿ-ಏಕಾದಶಿ
ಕರ್ನಾಟಕದೇಶಪ್ರಮುಖ

23 ವರ್ಷಗಳ ನಂತರ ಒಟ್ಟಿಗೆ ಬಂದಿರುವ ಸಂಕ್ರಾಂತಿ-ಏಕಾದಶಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com 

ಸೂರ್ಯ ದೇವನು ಮಕರ ರಾಶಿಯನ್ನು ಪ್ರವೇಶಿಸಿದ ದಿನವನ್ನೇ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುವುದು.ಆದರೆ ಈ ಸಲ ಸಂಕ್ರಾಂತಿ ಹಬ್ಬ ಅತ್ಯಂತ ವಿಶೇಷವಾಗಿದೆ. ಬರೋಬ್ಬರಿ 23 ವರ್ಷಗಳ ನಂತರ ಅಪರೂಪದ ಸಂಯೋಜನೆಯೊಂದು ಈ ದಿನ ಆಗಲಿದೆ.

ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು, ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನದಿಂದ ದೇವತೆಗಳ ಆರು ತಿಂಗಳ ದಿನ ಪ್ರಾರಂಭವಾಗುತ್ತದೆ, ಇದು ಆಷಾಢ ಮಾಸದವರೆಗೆ ಇರುತ್ತದೆ.

ಮಕರ ಸಂಕ್ರಾಂತಿಯ ಇತಿಹಾಸವು ಸುಮಾರು 2,000 ವರ್ಷಗಳ ಹಿಂದಿನ ವೈದಿಕ ಕಾಲಕ್ಕೆ ಹೋಗುತ್ತದೆ. ಅಂದಿನ ಕೃಷಿ ಪ್ರಧಾನ ಸಮಾಜವು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು (ಮಕರ ಸಂಕ್ರಮಣ) ದಕ್ಷಿಣಾಯಣದ ಅಂತ್ಯ ಮತ್ತು ಉತ್ತರಾಯಣದ ಆರಂಭವೆಂದು ಗುರುತಿಸಿತು. ಋಗ್ವೇದದಲ್ಲಿ ಸೂರ್ಯದೇವನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಗಾಯತ್ರಿ ಮಂತ್ರವು ಸೂರ್ಯನ ಶಕ್ತಿಯನ್ನು ಹೇಳುತ್ತೆ.

ಈ ಸಲ ಸಂಕ್ರಾಂತಿ ಹಬ್ಬದ ಜೊತೆಜೊತೆಗೆ ಶಟ್ಟಿಲ ಏಕಾದಶಿ (ಷಟ್ತಿಲಾ ಏಕಾದಶಿ) ಬಂದಿದೆ. ವಿಷ್ಣುವಿಗೆ ಅರ್ಪಿತವಾದ, ಮಹತ್ವದ ಈ ಏಕಾದಶಿ ಮತ್ತು ಸಂಕ್ರಾಂತಿ ಹಬ್ಬ ಒಟ್ಟೊಟ್ಟಿಗೇ ಬಂದಿರುವುದು ಅಪರೂಪದ ಸಂಯೋಜನೆಯಾಗಿದೆ. ಇದೊಂದು ವಿಶೇಷ ಸಮಯವಾಗಿದ್ದು, ಜನರು ಸ್ನಾನ ಮಾಡಿ, ಶುದ್ಧರಾಗಿ ದೇವರಿಗೆ ಪೂಜೆ ಮಾಡಬೇಕು. ಸೂರ್ಯದೇವ ಮತ್ತು ವಿಷ್ಣುವಿನ ಆರಾಧನೆ ಮಾಡಬೇಕು. ಕೈಲಾದಷ್ಟು ದಾನ ಮಾಡಬೇಕು. ಇದು ಪ್ರತಿದಿನ ಮಾಡುವ ಪೂಜೆಗಿಂತಲೂ ಅನೇಕ ಪಟ್ಟು ಹೆಚ್ಚಿನ ಪುಣ್ಯ ನೀಡುತ್ತದೆ ಎನ್ನುತ್ತಾರೆ ಧಾರ್ಮಿಕ ವಿದ್ವಾಂಸರು.

ಶಟ್ಟಿಲ ಏಕಾದಶಿ ತಿಥಿಯು ಜನವರಿ 13ರಂದು ಮಧ್ಯಾಹ್ನ 3.18ರಿಂದ ಜನವರಿ 14ರಂದು ಸಂಜೆ 5.53ರವರೆಗೆ ಇರುತ್ತದೆ. ಜನವರಿ 14, 2026 ರಂದು ಮಧ್ಯಾಹ್ನ 02.50 ರಿಂದ 03.07 ರ ನಡುವೆ ಸಂಭವಿಸುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವರನ್ನ ಪೂಜಿಸಬೇಕು. ಅಂದು ಶಟ್ಟಿಲ ಏಕಾದಶಿಯೂ ಇರುವುದರಿಂದ ವಿಷ್ಣುವನ್ನೂ ಪೂಜೆ ಮಾಡಬೇಕು. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ನೀಡುವುದು, ಭಗವಂತನನ್ನು ಪೂಜಿಸುವುದು ಶುಭ ತರಲಿದೆ.

ಹಾಗೇ, ವಿಷ್ಣುವನ್ನು ಭಕ್ತಿಯಿಂದ ಪೂಜಿಸಬೇಕು. ಅಲ್ಲದೆ, ಬಡವರಿಗೆ ಕಪ್ಪು ಎಳ್ಳು, ಗೋಧಿ, ಬೆಲ್ಲ, ಕಂಬಳಿಗಳನ್ನು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಬರುತ್ತದೆ ಎಂದು ನಂಬಲಾಗಿದೆ.

https://www.newsics.com/2026/01/12/union-budget-2026-senior-citizens-get-a-huge-gift/

TAGGED:Sankranti-Ekadashi come together after 23 years
Share This Article
Facebook Twitter Copy Link Print
Previous Article ಕೇಂದ್ರ ಬಜೆಟ್ 2026 : ಹಿರಿಯ ನಾಗರಿಕರಿಗೆ ಸಿಗುತ್ತಾ ಭರ್ಜರಿ ಗಿಫ್ಟ್
Next Article ಟೈಗರ್ ಆಫ್ ಮಾರ್ಷಲ್ ಆರ್ಟ್ಸ್ ಪ್ರಶಸ್ತಿ: ಪವನ್ ಕಲ್ಯಾಣ್‌ಗೆ ಅಂತರರಾಷ್ಟ್ರೀಯ ಗೌರವ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?