Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎಚ್‌ಎಂಟಿ ವಾಚುಗಳು ಇನ್ನು ನೆನಪು ಮಾತ್ರ
ಕರ್ನಾಟಕದೇಶಪ್ರಮುಖ

ಎಚ್‌ಎಂಟಿ ವಾಚುಗಳು ಇನ್ನು ನೆನಪು ಮಾತ್ರ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಭಾರತದ ಐಕಾನಿಕ್ ವಾಚ್ ತಯಾರಕ ಸಂಸ್ಥೆ ಎಚ್‌ಎಂಟಿ ವಾಚಸ್ ಲಿಮಿಟೆಡ್, ತನ್ನ ಕಾನೂನುಬದ್ಧ ಅಸ್ತಿತ್ವವನ್ನು ಕೊನೆಗೊಳಿಸಲು ಮುಂದಾಗಿದೆ.

ಎಚ್‌ಎಂಟಿ ಲಿಮಿಟೆಡ್ ಗುರುವಾರ ಷೇರುಪೇಟೆಗೆ ನೀಡಿದ ಮಾಹಿತಿಯ ಪ್ರಕಾರ, ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಎಚ್‌ಎಂಟಿ ವಾಚಸ್ ಲಿಮಿಟೆಡ್’ ಹೆಸರನ್ನು ಕಂಪನಿಗಳ ರಿಜಿಸ್ಟ್ರಾರ್ (ಆರ್‌ಒಸಿ) ದಾಖಲೆಗಳಿಂದ ತೆಗೆದುಹಾಕಲು ಜನವರಿ 5, 2026 ರಂದು ಅರ್ಜಿ ಸಲ್ಲಿಸಲಾಗಿದೆ. ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 248 ರ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.

1961ರಲ್ಲಿ ಸರ್ಕಾರಿ ಒಡೆತನದ ಎಚ್‌ಎಂಟಿ ಲಿ. ಮತ್ತು ಜಪಾನ್‌ನ ಸಿಟಿಜನ್‌ ವಾಚ್‌ ಜಂಟಿಯಾಗಿ ‘ಎಚ್‌ಎಂಟಿ ವಾಚ್’ ಉತ್ಪಾದನೆಯನ್ನು ಆರಂಭಿಸಿದವು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಕನಾಗಿ ಹೊರಹೊಮ್ಮಿತ್ತು. ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದ ಈ ವಾಚ್‌ಗಳು ಭಾರತೀಯರ ಅಚ್ಚುಮೆಚ್ಚಾಗಿದ್ದವು. ಎಚ್‌ಎಂಟಿಯ ವಾಚ್‌ಗಳು ಸರಳ ವಿನ್ಯಾಸವನ್ನು ಹೊಂದಿದ್ದವಾದರೂ, ಬಾಳಿಕೆಗೆ ಹೆಸರುವಾಸಿಯಾಗಿದ್ದವು. ಜನತಾ, ಪೈಲಟ್‌, ಕೊಹಿನೂರ್‌ ಎಚ್‌ಎಂಟಿಯ ಪ್ರಮುಖ ಬ್ರ್ಯಾಂಡ್‌ಗಳಾಗಿದ್ದವು. ಇದುವರೆಗೂ 10 ಕೋಟಿಗೂ ಹೆಚ್ಚಿನ ವಾಚುಗಳು ಮಾರಾಟವಾಗಿರುವ ಅಂದಾಜಿದೆ.

ವರ್ಷ ಕಳೆದಂತೆ ಅನೇಕ ವಾಚ್‌ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ 2000ದ ಬಳಿಕ ಎಚ್‌ಎಂಟಿ ಪತನ ಆರಂಭವಾಗಿತ್ತು. ಇದೀಗ ಶಾಶ್ವತವಾಗಿ ತನ್ನ ಟಿಕ್‌ ಟಿಕ್‌ ಸದ್ದನ್ನು ನಿಲ್ಲಿಸಲಿದೆ.

ಒಟ್ಟಾರೆಯಾಗಿ, ದಶಕಗಳ ಕಾಲ ಭಾರತೀಯರ ಸಮಯದ ಜೊತೆಗಾರನಾಗಿದ್ದ ‘ಎಚ್‌ಎಂಟಿ’ ಬ್ರಾಂಡ್‌ನ ವಾಚ್‌ ವಿಭಾಗವು ಇದೀಗ ಕಾನೂನಾತ್ಮಕವಾಗಿಯೂ ವಿದಾಯ ಹೇಳುತ್ತಿದೆ. ಅಲ್ಲಿಗೆ ಎಚ್‌ಎಂಟಿ ಸಂಪೂರ್ಣವಾಗಿ ಇತಿಹಾಸದ ಪುಟವನ್ನು ಸೇರಲಿದೆ.

TAGGED:HMT watches are just a memory now
Share This Article
Facebook Twitter Copy Link Print
Previous Article ಮಹಿಳೆಯರ ಉದ್ಯೋಗ, ವಾಸಕ್ಕೆ ಬೆಂಗಳೂರೇ ಸೇಫ್ – ದೇಶದಲ್ಲಿ ಸಿಲಿಕಾನ್ ಸಿಟಿಗೆ ನಂಬರ್ 1 ಸ್ಥಾನ.!
Next Article ಸ್ನೇಹಿತನನ್ನೇ ಕೊಂದು ಶವವನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ತುಂಬಿಸಿದ ಪಾಪಿಗಳು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?