Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದಿದ್ದೇಕೆ ರಮ್ಯಾ?
ಪ್ರಮುಖಮನರಂಜನೆ

ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದಿದ್ದೇಕೆ ರಮ್ಯಾ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಬೀದಿ ನಾಯಿಗಳ ವಿಚಾರದಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಗಳನ್ನು ಖಂಡಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ, ಪುರುಷರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ನ್ಯಾಯಾಲಯ ನಾಯಿಗಳ ಬಗ್ಗೆ ಹೇಳಿದ್ದನ್ನು ನಟಿ ರಮ್ಯಾ ಖಂಡಿಸಿರುವುದು ಸರಿ ಆದರೆ, ರಮ್ಯಾ ಅವರು ಗಂಡಸರ ವಿರುದ್ಧ ವಾಗ್ದಾಳಿ ನಡೆಸಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.ಇಲ್ಲಿ ರಮ್ಯಾ ಅವರು ಸುಪ್ರೀಂಕೋರ್ಟ್ ಉಲ್ಲೇಖಿಸಿದ ನಾಯಿಗಳ ಮನಸ್ಥಿತಿಯನ್ನು ಪುರುಷರಿಗೆ ಹೋಲಿಕೆ ಮಾಡಿ ಟೀಕಾ ಪ್ರಹಾರ ನಡೆಸಿದ್ದಾರೆ. ರಮ್ಯಾ ಹೇಳಿದ ಮಾತಿನ ಅರ್ಥವನ್ನು ತಿಳಿಯಬೇಕಾದರೆ, ಮೊದಲು ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ನೀಡಿದ ಹೇಳಿಕೆಗಳನ್ನು ತಿಳಿದುಕೊಳ್ಳಬೇಕು.

ಬೀದಿ ನಾಯಿಗಳ ಹಾವಳಿ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಸಾಕಷ್ಟು ಮಧ್ಯಂತರ ಅರ್ಜಿಗಳ ಸಂಬಂಧ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಪ್ರಾಣಿಗಳು ಯಾವಾಗ ಕಚ್ಚುವ ಮೂಡ್ನಲ್ಲಿ ಇರುತ್ತವೆ ಹಾಗೂ ಯಾವಾಗ ಸುಮ್ಮನಿರುತ್ತವೆ ಎಂದು ತಿಳಿಯುವುದು ಕಷ್ಟ. ಅವುಗಳ ಮನಸ್ಸನ್ನು ಓದಲಾಗದು. ಹೀಗಾಗಿ, ರೋಗವನ್ನು ವಾಸಿ ಮಾಡುವುದಕ್ಕಿಂತ ಅದು ಬರದಂತೆ ತಡೆಗಟ್ಟುವುದು ಮುಖ್ಯ ಎನ್ನುವಂತೆ, ಪ್ರಾಣಿಗಳ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.

ರಸ್ತೆಗಳು ನಾಯಿಗಳಿಲ್ಲದೆ ಸ್ವಚ್ಛವಾಗಿರಬೇಕು. ಅವು ಕಚ್ಚದೇ ಇರಬಹುದು, ಆದರೆ ಅವು ಅಪಘಾತಗಳಿಗೆ ಕಾರಣವಾಗುತ್ತವೆ. ಬೀದಿಗಳು, ಶಾಲೆಗಳು ಮತ್ತು ಸಾಂಸ್ಥಿಕ ಪ್ರದೇಶಗಳಲ್ಲಿ ನಮಗೆ ನಾಯಿಗಳು ಏಕೆ ಬೇಕು? ಎಂದು ಪ್ರಶ್ನಿಸಿದ ಪೀಠ, ನಾಯಿಗಳ ಜನನ ನಿಯಂತ್ರಣ (ABC) ನಿಯಮಗಳನ್ನು ಜಾರಿಗೆ ತರುವಂತೆ 2018ರಲ್ಲೇ ನಾವು ಸರ್ಕಾರಕ್ಕೆ ನಿರ್ದೇಶನ ನೀಡಿದ್ದೆವು. ಇಲ್ಲಿಯವರೆಗೆ ಈ ವಿಚಾರದಲ್ಲಿ ಏನು ನಡೆದಿದೆ? ಸರ್ಕಾರವು ಎಬಿಸಿ ನಿಯಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂಬ ಕಾರಣಕ್ಕಾಗಿ, ಸಾಮಾನ್ಯ ಜನರು ತೊಂದರೆ ಅನುಭವಿಸಬೇಕೇ? ಎಂದು ಪೀಠವು ಪ್ರಶ್ನಿಸಿ, ಪ್ರಕರಣವನ್ನು ಗುರುವಾರಕ್ಕೆ ಮುಂದೂಡಿತು.

ನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸಾರಾಸಗಟಾಗಿ ಖಂಡಿಸಿರುವ ನಟಿ ರಮ್ಯಾ, ತಮ್ಮ ಕೋಪವನ್ನು ಗಂಡಸರ ಮೇಲೆ ತೋರಿಸಿದ್ದಾರೆ. ಪುರುಷನು ಯಾವಾಗ ರೇಪ್ ಮಾಡ್ತಾನೋ? ಯಾವಾಗ‌ ಕೊಲೆ ಮಾಡ್ತಾನೋ? ನಮಗೆ ಗೊತ್ತಿಲ್ಲ. ನಾಯಿಗಳಂತೆ ಗಂಡಸಿನ ಮನಸ್ಸಿನಲ್ಲಿಯೂ ಏನಿದೆ ಎಂದು ತಿಳಿಯಲು ಆಗುವುದಿಲ್ಲ. ಹೀಗಾಗಿ, ಪುರುಷರನ್ನು ಜೈಲಿಗೆ ಹಾಕಿ ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬೀದಿನಾಯಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯನ್ನು ವರದಿ ಮಾಡಿರುವ ಎನ್ಡಿಟಿವಿ ಮಾಧ್ಯಮದ ನ್ಯೂಸ್ ಲಿಂಕ್ ಶೇರ್ ಮಾಡಿ, ನಟಿ ರಮ್ಯಾ ಕಿಡಿಕಾರಿದ್ದಾರೆ.

ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರ ಸಾವು; 5 ಮಂದಿಗೆ ಗಾಯ

TAGGED:I don't know when they will rape or murder... Why did Ramya say to put all men in jail?! Actress Ramya
Share This Article
Facebook Twitter Copy Link Print
Previous Article ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರ ಸಾವು; 5 ಮಂದಿಗೆ ಗಾಯ
Next Article ಪದೇ ಪದೇ ತಲೆ ನೋವಿನ ಜೊತೆಗೆ ಕಣ್ಣು ನೋವು ಬರುತ್ತಾ? ಇದಕ್ಕೆ ಕಾರಣ ಏನ್?

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?