Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಇನ್ನೊಂದೆಡೆ ವೆನಿಜುವೆಲಾದಲ್ಲಿ ಪರ್ಯಾಯ ವ್ಯವಸ್ಥೆ ಆಗುವವರೆಗೂ ಅಮೆರಿಕವೇ ಆಡಳಿತ ನಡೆಸಲಿದೆ. ಜೊತೆಗೆ ಅಲ್ಲಿನ ವ್ಯಾಪಕ ಕಚ್ಚಾತೈಲವನ್ನು ಹೊರತೆಗೆದು ಅದನ್ನು ಇತರೆ ದೇಶಗಳಿಗೆ ಹಂಚಲಾಗುವುದು ವೆನಿಜುವೆಲಾದ ತೈಲ ಕಂಪನಿಗಳಲ್ಲಿ ಅಮೆರಿಕ ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ಹೂಡಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ತಡರಾತ್ರಿ ಕಾರ್ಯಾಚರಣೆ ಮೂಲಕ ಸೆರೆಹಿಡಿದ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿ ನೇರವಾಗಿ ಸಮೀಪದಲ್ಲಿನ ಅಮೆರಿಕದ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿತ್ತು. ತರುವಾಯ ಯುಎಸ್‌ಎಸ್ ಇವೋ ಜಿಮಾ ಯುದ್ಧನೌಕೆ ಮೂಲಕ ಸಾಗಿಸಲಾಯಿತು. ತದನಂತರದಲ್ಲಿ ತಡರಾತ್ರಿ ನ್ಯೂಯಾರ್ಕ್ ಹೊರವಲಯಕ್ಕೆ ಮುಡುರೋ ದಂಪತಿ ಇದ್ದ ವಿಮಾನ ಆಗಮಿಸಿತು. ಅಲ್ಲಿಂದ ಅವರನ್ನು ಕಾಪ್ಟರ್ ಮೂಲಕ ಮಾದಕ ವಸ್ತು ಸಾಗಣೆ ಕುರಿತು ತನಿಖೆ ನಡೆಸುವ(ಡಿಇಎ) ಮುಖ್ಯ ಕಚೇರಿಗೆ ಕರೆದೊಯ್ದು ಕೆಲಕಾಲ ಇರಿಸಿ, ಆ ಬಳಿಕ ಬ್ರೂಕ್ಲಿನ್‌ನಲ್ಲಿರುವ ಗಣ್ಯವ್ಯಕ್ತಿಗಳಿಗಾಗಿಯೇ ಇರುವ ಬಿಗಿ ಭದ್ರತೆಯ ಜೈಲಿಗೆ ರವಾನಿಸಲಾಗಿದೆ. ಮಡುರೋ ಮತ್ತು ಪತ್ನಿ ವಿರುದ್ಧ ಡ್ರಗ್ಸ್ ಭಯೋತ್ಪಾದನೆ, ಡ್ರಗ್ಸ್ ಸಾಗಣೆ ಆರೋಪದ ಮೇರೆಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.