Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದೊಡ್ಮನೆಯಿಂದ ಸ್ಪಂದನಾ ಸೋಮಣ್ಣ ಔಟ್ ಆಗಿದ್ದಾರೆ.ಕಳೆದ ವಾರ ಬಿಗ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿತ್ತು. ಅಚ್ಚರಿಯಾಗಿ ಮಾಳು ಮತ್ತೆ ಸೂರಜ್ ಹೊರ ಬಂದಿದ್ದರು. ಈ ವಾರ ಸ್ಪಂದನಾ ಮನೆಯಿಂದ ಹೊರಬಂದಿದ್ದಾರೆ.
ಈ ವಾರ 5 ಜನರು ನಾಮಿನೇಟ್ ಆಗಿದ್ದರು. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನ ನಾಮಿನೇಟ್ ಮಾಡಲಾಗಿತ್ತು. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅಭಿಪ್ರಾಯವಾಗಿತ್ತು.
ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ, ಒಟ್ಟಾಗಿ ಕಾಣಿಸಿಕೊಳ್ಳೋದಿಲ್ಲ. ಆದರೂ ಅವರು ಹೇಗೆ ಉಳಿದುಕೊಂಡರು ಎನ್ನೋದು ಮನೆಯ ಸದಸ್ಯರ ಅಭಿಪ್ರಾಯವೂ ಆಗಿತ್ತು.
https://www.newsics.com/2026/01/05/venezuelan-president-nicolas-maduro-shifted-to-brooklyn-jail/