Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
2026ರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರಾಗಿದೆ. ಆದರೆ ಇತ್ತ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮಳೆರಾಯನ ಅಡ್ಡಿ ಉಂಟಾಗಿದೆ.
ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಯಿಂದ ಯಲಹಂಕಾ ಹಾಗೂ ಸುತ್ತ ಮತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷದ ಪಾರ್ಟಿ, ಸಂಭ್ರಮಾಚರಣೆ ಕಾರ್ಯಕ್ರಮಗಳು ಸ್ಥಗಿತಗೊಂಡಿದೆ. ಹಾಕಿದ್ದ ಪೆಂಡಾಲ್, ಶಾಮಿಯಾನಗಳು ನೀರಿನಿಂದ ತುಂಬಿಕೊಂಡಿದೆ. ಭಾರಿ ಮಳೆಯಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.
ಚೆನ್ನೈ ಹಾಗೂ ತಮಿಳುನಾಡು ಕರಾವಳಿ ತೀರದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಮೇಲೂ ಆಗಿದೆ. ಹೀಗಾಗಿ ಅತೀವ ಚಳಿಯಿಂದ ಕೂಡಿದ್ದ ವಾತಾವರಣ ತಗ್ಗಿ, ಮೋಡ ಕವಿದ ವಾತಾವರಣವಾಗಿ ಮಾರ್ಪಟ್ಟಿತ್ತು. ಹವಾಮಾನ ಇಲಾಖೆ ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಕುರಿತು ಸೂಚನೆ ನೀಡಿತ್ತು.