Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ಅಯೋಧ್ಯೆ ರಾಮ ಮಂದಿರಕ್ಕೆ 2.5 ಅಡಿಯ ಶ್ರೀರಾಮನ ವಿಗ್ರಹ ನೀಡಿದ ಬೆಂಗಳೂರು ಮಹಿಳೆ
ಕರ್ನಾಟಕದೇಶಪ್ರಮುಖ

ಅಯೋಧ್ಯೆ ರಾಮ ಮಂದಿರಕ್ಕೆ 2.5 ಅಡಿಯ ಶ್ರೀರಾಮನ ವಿಗ್ರಹ ನೀಡಿದ ಬೆಂಗಳೂರು ಮಹಿಳೆ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿಯೊಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ.

ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದು, ಇದರ ಸಂಪೂರ್ಣ ಹಣಕಾಸು ಸಹಾಯವನ್ನು ಅವರ ಕುಟುಂಬವೇ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.
ತಂಜಾವೂರು ಚಿತ್ರಕಲೆ ಶೈಲಿಯಿಂದ ಪ್ರೇರಣೆ ಪಡೆದ ಈ ರಾಮ ಕಲಾಕೃತಿಯನ್ನು 10 ಅಡಿ ಎತ್ತರ, 6 ಅಡಿ ಅಗಲ ಮತ್ತು 2.5 ಅಡಿ ಆಳ ಹೊಂದಿರುವ ರೋಸ್‌ವುಡ್ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರಾಮನ ದೈವಿಕ ರೂಪದೊಂದಿಗೆ ಹನುಮಾನ್, ಗರುಡ ಹಾಗೂ ದಶಾವತಾರದ ಚಿತ್ರಣಗಳನ್ನು ಒಳಗೊಂಡಿರುವುದು ವಿಶೇಷ. ಕಲಾಕೃತಿಯು ವಿಗ್ರಹದಂತೆ ಕಾಣುವ ತ್ರಿಮಿತೀಯ ವಿನ್ಯಾಸವನ್ನು ಹೊಂದಿದ್ದುದೆ.

ಡಿಸೆಂಬರ್ 11ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ದೃಢೀಕರಣ ಪತ್ರವನ್ನು ಸ್ವೀಕರಿಸಿದ ನಂತರ, ಜಯಶ್ರೀ ಫಣೀಶ್ ಅವರ ಮನೆಗೆ ಕಲಾಕೃತಿಯನ್ನು ವೀಕ್ಷಿಸಲು ನಿರಂತರವಾಗಿ ಭಕ್ತರು ಮತ್ತು ಕಲಾಭಿಮಾನಿಗಳ ದಂಡೇ ಹರಿದು ಬಂದಿದೆ.

ಕಲಾಕೃತಿ ಸ್ವೀಕಾರವಾದ ಸುದ್ದಿ ತಿಳಿದ ಕೂಡಲೇ, ರಾಜಾಜಿನಗರದಲ್ಲಿರುವ ಅವರ ಮನೆ ಭಕ್ತರ ದರ್ಶನ ಕೇಂದ್ರತಾಯಿತು. ಕೆಲವರು ಕೇವಲ ದರ್ಶನಕ್ಕಾಗಿ ಬಂದರೆ, ಇನ್ನು ಕೆಲವರು ಭಜನೆ, ನೃತ್ಯ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
50 ವರ್ಷದ ಜಯಶ್ರೀ ಫಣೀಶ್ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ತಮ್ಮ 10 ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ದೇವಾಲಯವೊಂದರಲ್ಲಿ ವರ್ಣಚಿತ್ರವನ್ನು ಸಮರ್ಪಿಸುವ ಸಂದರ್ಭದಲ್ಲಿ, ಅಯೋಧ್ಯೆಯ ಕೇಂದ್ರ ದೇವತೆಯಾದ ಬಾಲರಾಮನ ಕಲಾಕೃತಿಯನ್ನು ನಿರ್ಮಿಸುವ ಆಸೆಯನ್ನು ಅವರು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. ಈ ಆಲೋಚನೆಯೇ ಮುಂದಾಗಿ, ಬೆಂಗಳೂರಿನ ಉದ್ಯಮಿ ಜಿ.ಕೆ. ಪ್ರಮೋದ್ ಸೇರಿದಂತೆ ಕೆಲವರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾದರು.

ACC Cement Company ವಿಲೀನ ಎಫೆಕ್ಟ್: ಶಾಶ್ವತವಾಗಿ ಮರೆಯಾಗಲಿದೆ ಎಸಿಸಿ ಸಿಮೆಂಟ್ ಕಂಪನಿ

TAGGED:Bengaluru woman donates 2.5-foot idol of Lord Rama to Ayodhya Ram temple
Share This Article
Facebook Twitter Copy Link Print
Previous Article Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 24-12-2025, ಬುಧವಾರ
Next Article ಕಕ್ಷೆಗೆ ಬ್ಲೂಬರ್ಡ್ ಬ್ಲಾಕ್-2 ಯಶಸ್ವಿ ಸೇರ್ಪಡೆ; ವೈರಲ್ ವಿಡಿಯೋ ನೋಡಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?