Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಈಗಾಗಲೇ ಚಳಿಗಾಲ ಆರಂಭವಾಗಿದೆ, ಹಾಗಾಗಿ ಸ್ವೆಟರ್ ಕೂಡ ಹೊರ ಬಂದಿದೆ. ಕೆಲವರು ರಾತ್ರಿ ಮಲಗುವಾಗ ಸ್ವೆಟರ್ ಧರಿಸುತ್ತಾರೆ. ಆದರೆ ನಿಮಗೆ ಗೊತ್ತಾ? ರಾತ್ರಿ ಹೊತ್ತು ಚಿಕ್ಕ ಮಕ್ಕಳು ಹಾಗೂ ವೃದ್ಧರು ಸ್ವೆಟರ್ ಹಾಕಿಕೊಂಡು ಮಲಗುತ್ತಾರೆ. ಆದ್ರೆ, ರಾತ್ರಿ ಹೊತ್ತು ದಪ್ಪಗಿನ ಸ್ವೆಟರ್ ಧರಿಸುವುದು ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ಹೊತ್ತು ಸ್ವೆಟರ್ ಧರಿಸಿ ಮಲಗುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.
ರಾತ್ರಿ ಹೊತ್ತು ಸ್ವೆಟರ್ ಧರಿಸುವುದರಿಂದ ನಿಮ್ಮ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ. ಸ್ವಾಭಾವಿಕವಾಗಿ ಕಡಿಮೆಯಾಗಬೇಕಾದ ದೇಹದ ತಾಪಮಾನದ ಸ್ವೆಟರ್ಗಳನ್ನ ಧರಿಸುವುದರಿಂದ ಏರಿಕೆಯಾಗುತ್ತದೆ. ನಿಮ್ಮ ದೇಹದ ತಾಪಮಾನ ಏರಿಕೆಯಾಗಿ ಶೆಕೆ ಅನುಭವವಾಗುವುದರಿಂದ ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ.
ನೀವು ರಾತ್ರಿ ಹೊತ್ತು ಸ್ವೆಟರ್ ಧರಿಸಿ ಮಲಗಿದಾಗ, ನಿಮ್ಮ ದೇಹವು ಬಿಸಿಯಾಗುತ್ತದೆ. ಅದನ್ನು ತಂಪಾಗಿಸಲು, ನಿಮ್ಮ ದೇಹವು ಬೆವರನ್ನು ಬಿಡುಗಡೆ ಮಾಡುತ್ತದೆ. ನಿರಂತರವಾಗಿ ಬೆವರುವುದರಿಂದ ನಿಮ್ಮ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ ಮತ್ತು ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತದೆ. ಇದು ರಾತ್ರಿಯಲ್ಲಿ ನಿಮಗೆ ಆಗಾಗ್ಗೆ ಬಾಯಾರಿಕೆಯನ್ನುಂಟು ಮಾಡುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ.
ರಾತ್ರಿ ಹೊತ್ತು ಬೆವರುವುದರಿಂದ ಚರ್ಮದ ಮೇಲೆ ದದ್ದುಗಳು, ತುರಿಕೆ ಉಂಟಾಗಬಹುದು. ದೀರ್ಘಕಾಲದವರೆಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಚರ್ಮವು ಉಸಿರಾಡುವುದನ್ನು ತಡೆಯುತ್ತದೆ. ಇದು ಸೋಂಕು ಹರಿಡುವಿಕೆಯನ್ನ ಹೆಚ್ಚಿಸುತ್ತದೆ.
ನಿದ್ರೆಗೆ ಸೂಕ್ತವಾದ ತಾಪಮಾನವು 18°C ಅಥವಾ 21°C ನಡುವೆ ಇರುತ್ತದೆ. ನೀವು ಮಲಗುವ ಕೋಣೆಯ ಉಷ್ಣತೆ ಅಥವಾ ಬಟ್ಟೆಗಳು ತುಂಬಾ ಬಿಸಿಯಾಗಿದ್ದರೆ, ನೀವು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ನೀವು ರಾತ್ರಿಯಿಡೀ ಕಿರಿಕಿರಿ ಅನುಭವಿಸುತ್ತೀರಿ. ಸರಿಯಾದ ನಿದ್ರೆ ಮಾಡದ ಕಾರಣ ಮರುದಿನ ದಣಿದ ಅನುಭವವನ್ನು ಅನುಭವಿಸುತ್ತೀರಿ. ಕಳಪೆ ನಿದ್ರೆ ಮಾನಸಿಕ ಆಯಾಸ, ಏಕಾಗ್ರತೆಯ ಕೊರತೆ ಮತ್ತು ಇನ್ನಿತರ ಸಮಸ್ಯೆಗಳಿಗೂ ಕಾರಣವಾಗಬಹುದು.
ಬಿಗಿಯಾದ ಸ್ವೆಟರ್ ಅಥವಾ ಹೂಡಿ ಧರಿಸಿ ಮಲಗುವುದರಿಂದ ಗಂಟಲಿನ ಮೇಲೆ ಒತ್ತಡ ಉಂಟಾಗುತ್ತದೆ, ಇದು ವಾಯುಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗೊರಕೆಯನ್ನು ಹೆಚ್ಚಿಸುತ್ತದೆ. ಅನೇಕ ಜನರಿಗೆ ಸ್ಲೀಪ್ ಅಪ್ನಿಯಾ (ನಿದ್ರೆಯಲ್ಲಿ ಉಸಿರಾಟ ನಿಲ್ಲುವುದು) ಕೂಡ ಉಂಟಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಅತಿಯಾದ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಕುಂಠಿತವಾಗುತ್ತದೆ. ಬೆಳಿಗ್ಗೆ ಎದ್ದೇಳುವಾಗ ಕುತ್ತಿಗೆ, ಬೆನ್ನು ಮತ್ತು ಮೊಣಕಾಲುಗಳಲ್ಲಿ ನೋವು ಅಥವಾ ಬಿಗಿತ ಉಂಟಾಗುತ್ತದೆ. ಇದರಿಂದ ಕ್ರಮೇಣ ಸಂಧಿವಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ರಾತ್ರಿಯಲ್ಲಿ ದೇಹವು ಸರಿಯಾಗಿ ತಣ್ಣಗಾಗದಿದ್ದರೆ, ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾಗುತ್ತದೆ. ನಿದ್ರೆ ಸರಿಯಾಗಿರದ ಕಾರಣ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದು ಆಗಾಗ್ಗೆ ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳು ಸಹ ಹೆಚ್ಚಾಗಿ ಕಂಡುಬರುತ್ತವೆ.
https://www.newsics.com/2025/12/22/bus-accident-in-indonesia-15-dead/