Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಜ್ಯದ ಜನತೆ ಚಳಿಗೆ ನಡಗುತ್ತಿದ್ದು, ಬೆಳಗ್ಗೆ ಏಳೋದು ಒಂದು ಸವಾಲು. ಎದ್ದ ನಂತರ ಸ್ನಾನ ಮಾಡೋದು ಮತ್ತೊಂದು ಸವಾಲಿನ ಕೆಲಸವಾಗಿದೆ. ಬಿಸಿನೀರು ಇದ್ರೂ ಕೆಲವರು ಸ್ನಾನಕ್ಕೆ ಹಿಂದೇಟು ಹಾಕುತ್ತಾರೆ. ಸಿಂಕ್, ಬಾತ್ರೂಮ್ ನಲ್ಲಿ ತಿರುಗಿಸಿದ್ರೆ ಐಸ್ನಂತಹ ನೀರು ಬರುತ್ತದೆ. ಛಾವಣಿ ಮೇಲೆ ಟ್ಯಾಂಕ್ ಇರೋದರಿಂದ ನೀರು ತುಂಬಾನೇ ತಂಪಾಗಿರುತ್ತದೆ.
ಛಾವಣಿಯಿಂದ ಬರುವ ನೀರು ಮುಟ್ಟಲು ಸಹ ಭಯಪಡುವಂತಾಗಿದೆ. ಬೆಳಗ್ಗೆ ಅಥವಾ ರಾತ್ರಿ ಟ್ಯಾಂಕ್ ನೀರು ಬಳಸಬೇಕಾದ್ರೆ ನೂರು ಸಲ ಯೋಚನೆ ಮಾಡಬೇಕಾಗುತ್ತದೆ. ಕೆಅತಿಯಾದ ಚಳಿಯಿಂದ ರಕ್ಷಿಸಲು ಸುಲಭವಾದ ಮಾರ್ಗವೆಂದರೆ ಥರ್ಮಲ್ ಇನ್ಸುಲೇಶನ್ ಸೆಟ್ ಅಥವಾ ಫೋಮ್ ಕವರ್ ಬಳಸುವುದು. ಈ ಕವರ್ಗಳು ಮಂಜು, ಹಿಮ ಮತ್ತು ತಣ್ಣನೆಯ ಗಾಳಿಯನ್ನು ಟ್ಯಾಂಕ್ಗೆ ತಲುಪದಂತೆ ತಡೆಯುತ್ತವೆ. ಪರಿಣಾಮವಾಗಿ, ನೀರಿನ ತಾಪಮಾನವು ಸಾಮಾನ್ಯವಾಗಿರುತ್ತದೆ ಮತ್ತು ಮನೆಕೆಲಸಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಟ್ಯಾಂಕ್ ಅನ್ನು ತೆರೆದ ಜಾಗದಲ್ಲಿ ಇಟ್ಟಿದ್ದರೆ, ಅದಕ್ಕೆ ಕಪ್ಪು ಬಣ್ಣ ಬಳಿಯುವುದು ಪ್ರಯೋಜನಕಾರಿ. ಕಪ್ಪು ಬಣ್ಣವು ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಕಡಿಮೆ ಬಿಸಿಲಿದ್ದರೂ ನೀರನ್ನು ಬೇಗನೆ ಬಿಸಿ ಮಾಡುತ್ತದೆ. ಪೇಂಟ್ ಜಲನಿರೋಧಕ ಮತ್ತು ಬಾಳಿಕೆ ಬರುವಂತಿರಬೇಕು, ಇದರಿಂದ ಅದರ ಪರಿಣಾಮ ದೀರ್ಘಕಾಲ ಉಳಿಯುತ್ತದೆ.
ನೀರಿನ ಟ್ಯಾಂಕ್ಗೆ ಗಾಢವಾದ ಬಣ್ಣ ಬಳೆಯೋದರಿಂದ ನೀರಿನ ತಾಪಮಾನ ನಿಯಂತ್ರಣದಲ್ಲಿರುತ್ತದೆ. ಎರಡ್ಮೂರು ಲೇಯರ್ಗಳಲ್ಲಿ ಬಣ್ಣ ಬಳೆಯೋದರಿಂದ ಚಳಿಗಾಲದಲ್ಲಿ ನೀರು ಬಿಸಿಯಾಗಿಯೂ ಮತ್ತು ಬೇಸಿಗೆಗಾಲದಲ್ಲಿ ತಂಪಾಗಿಯೂ ಇರುತ್ತದೆ. ಛಾವಣಿಯ ಮೇಲೆ ಉತ್ತಮ ಸೂರ್ಯನ ಬೆಳಕು ಇದ್ದರೆ, ಟ್ಯಾಂಕ್ ಅನ್ನು ಆ ಬದಿಯಲ್ಲಿ ಇರಿಸುವದರಿಂದಲೂ ನೀರನ್ನು ಬಿಸಿಯಾಗಿರಿಸಬಹುದು.
ಟ್ಯಾಂಕ್ ತೆರೆದ ಛಾವಣಿಯಲ್ಲಿದ್ರೆ ಚಳಿಗಾಲದಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ. ಹಾಗಾಗಿ ಟ್ಯಾಂಕ್ನ್ನು ಟಾರ್ಪಾಲಿನ್, ಮರದ ಶೆಡ್ ಅಥವಾ ಸಣ್ಣ ಟಿನ್ ಶೆಡ್ನಿಂದ ಮುಚ್ಚಿರಿ. ಇದು ನೀರು ತಂಪಾಗದಂತೆ ನೋಡಿಕೊಳ್ಳುತ್ತದೆ. ಟ್ಯಾಂಕ್ ಒಳಗಿನ ತಾಪಮಾನವನ್ನು ಶೆಡ್ ಅಥವಾ ಕವರ್ ನಿಯಂತ್ರಣದಲ್ಲಿಡುತ್ತದೆ. ಗ್ರಾಮೀಣ ಭಾಗದ ಜನರು ಟ್ಯಾಂಕ್ಗಳನ್ನು ಮುಚ್ಚಲು ಹಳೆಯು ಗೋಣಿ ಚೀಲಗಳನ್ನು ಬಳಸುತ್ತಾರೆ.
ನೀರಿನ ಟ್ಯಾಂಕ್ ಅನ್ನು ಹಗಲಿನಲ್ಲಿ ಅತಿ ಹೆಚ್ಚು ಬಿಸಿಲು ಬರುವ ಜಾಗದಲ್ಲಿ ಇಡಿ. ಸೂರ್ಯನ ನೈಸರ್ಗಿಕ ಶಾಖವು ನೀರಿನ ತಾಪಮಾನವನ್ನು ಕಾಪಾಡುತ್ತದೆ ಮತ್ತು ತಣ್ಣನೆಯ ಗಾಳಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ತುಂಬಾ ಚಳಿಯಿದ್ದಾಗ, ನೀವು ಟ್ಯಾಂಕ್ ಅನ್ನು ಹಳೆಯ ಹಾಸಿಗೆಗಳಿಂದ ಮುಚ್ಚಬಹುದು. ಇದರಿಂದ ತಣ್ಣನೆಯ ಗಾಳಿ ಟ್ಯಾಂಕ್ಗೆ ತಲುಪುವುದಿಲ್ಲ.